political clash can be start anytime
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ಪತ್ತೆಯಾದ ವಿಚಾರದಲ್ಲಿ ಗುಪ್ತಚರ, ಪೊಲೀಸ್ ವ್ಯವಸ್ಥೆ ವಿಫಲತೆ ಕಾಣುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗರೀಕ ಸಮಾಜದ ವಿರುದ್ಧ ನಡೆಯುವ ಯಾವುದೇ ಚಟುವಟಿಕೆ ನಡೆಯಬಾರದು. ಅದನ್ನು ಬೆಂಬಲಿಸುವ ಕೆಲಸ ನಾವು ಎಂದೂ ಸಹ ಮಾಡಿಲ್ಲ. ಇಂತಹದ್ದು ನಡೆಯುತ್ತಿದೆ ಎನ್ನುವುದು ತಿಳಿದಿಲ್ಲ. ಅಂದರೆ ಇಂಟಲಿಜನ್ಸ್ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ವಿಫಲತೆ ಕಾಣುತ್ತಿದೆ. ನನ್ನ ಭಾಗಕ್ಕೆ ಕಾನೂನು ಹಾಗೂ ಸಂಚಾರ ವ್ಯವಸ್ಥೆ ಕಡೆಗಣಿಸುವುದು ಹೆಚ್ಚಾಗಿ ಕಾಣುತ್ತಿದೆ. ಹೊರ ವಲಯ ರಸ್ತೆಗಳಲ್ಲಿ ಹೆಚ್ಚು ಕಡಿವಾಣ ಮತ್ತು ನಿಗಾ ವಹಿಸಬೇಕು. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಸರ್ಕಾರದ ಬಳಿ ಮಾತನಾಡಿದ್ದೇನೆ ಎಂದರು.
ಸಂಸತ್ತಿನಲ್ಲೂ ಮೈಸೂರು ಉದಯಗಿರಿ ಬಗ್ಗೆ ಚರ್ಚೆ ಆಗಿದೆ. ಉದಯಗಿರಿಯಲ್ಲಿ ಹೊಸ ಪೊಲೀಸ್ ಠಾಣೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸರ್ಕಾರ ಹೊಸ ಪೊಲೀಸ್ ಠಾಣೆಯನ್ನು ಮಂಜೂರು ಮಾಡಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಪಕ್ಷ ಪ್ರತಿಪಕ್ಷ ಎನ್ನುವ ವಿಚಾರ ಬರಬೇಕು. ಆರೋಪಗಳನ್ನೆಲ್ಲ ಕೇವಲ ಒಬ್ಬರ ಮೇಲೆ ಹಾಕಬಾರದು. ಸಂಸದರು ಹಾಗೂ ಶಾಸಕರಿಗೆ ಚರ್ಚೆ ಮಾಡಲು ಅವಕಾಶ ಇದೆ. ಸರ್ಕಾರದಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದೇವೆ. ರಾಜ್ಯದ ಹಿತ ಕಾಪಾಡುವುದು ಬಿಟ್ಟು ಸಂಸತ್‌ನಲ್ಲಿ ಮಾತಾನಾಡುವುದು ಶೋಭೆ ತರುವಂತಹದ್ದಲ್ಲ ಎಂದು ತಿಳಿಸಿದರು.
ಮೈಸೂರಿನಲ್ಲಿ ಡ್ರಗ್ ಪತ್ತೆಹಚ್ಚಲು ಮಹಾರಾಷ್ಟ್ರದ ಪೊಲೀಸರು ಬರಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ತನ್ವೀರ್ ಸೇಠ್, ನೋಡಿ ನಮ್ಮ ಬೆನ್ನು ನಮಗೆ ಕಾಣಲ್ಲ ಮಹಾರಾಷ್ಟ್ರ ಪೊಲೀಸರಿಗೆ ದಸ್ತಗಿರಿ ಮಾಡಿದ ವ್ಯಕ್ತಿಯಿಂದ ಮಾಹಿತಿ ಸಿಕ್ಕಿದ್ದು. ಅವರಿಗೇನು ಕನಸುಬಿದ್ದು ಮೈಸೂರಿಗೆ ಬಂದಿಲ್ಲ. ಆಡಳಿತದಲ್ಲಿ ಲೋಪ ಆಗಿದೆ ಅದನ್ನು ಒಪ್ಪಬೇಕು. ಗುಪ್ತಚರ ಪೊಲೀಸರ ವೈಫಲ್ಯವೂ ಇದಕ್ಕೆ ಕಾರಣ. ಎಲ್ಲಾ ಕಾಲದಲ್ಲೂ ಅದೇ ಪೊಲೀಸ್ ವ್ಯವಸ್ಥೆ ಇತ್ತು ಎನ್ನುವುದನ್ನು ಮರೆಯಬಾರದು. ಒಪ್ಪುವ ವಿಚಾರ ಒಪ್ಪಬೇಕು. ಇಲ್ಲವಾದ ವಿಚಾರ ಒಪ್ಪುವುದಿಲ್ಲ ಅಷ್ಟೇ .ಸುರಕ್ಷತೆ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಜಾಗೃತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸತ್‌ನಲ್ಲಿ ಸಂಸದ ಯದುವೀರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಲ್ಲಿ ಮಾತನಾಡುವುದರಿಂದ ಸಂಸತ್ ಏನು ಮಾಡುತ್ತೆ? ಚುನಾವಣೆಯಿಂದ ಗೆದ್ದು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ ನಾವೇನು ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿಲ್ಲ. ೨೦೦೬, ೨೦೦೮, ೨೦೧೯ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಎಷ್ಟಿತ್ತು? ಜನರ ತೀರ್ಪನ್ನು ಧಿಕ್ಕರಿಸಿ ಮತದಾರರಿಗೆ ಮೋಸ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಇಂತಹ ವಿಚಾರಗಳನ್ನು ಚರ್ಚೆ ಮಾಡುವ ಅಗತ್ಯ ಇಲ್ಲ. ಆಡಳಿತದಲ್ಲಿರುವ ಮುಖ್ಯಮಂತ್ರಿ ಮನೆ ಮನೆಗೆ ಹೋಗಿ ನಿಲ್ಲಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಲೋಪ ಆಗಿದ್ದರೆ ಸರಿಮಾಡುವುದರ ಕಡೆಗೆ ಗಮನಹರಿಸಬೇಕು.ಅದು ಬಿಟ್ಟು ಬೇರೆ ರೀತಿ ಮಾತುಗಳು ಬೇಡ ಎಂದು ಹೇಳಿದರು.
ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಜಲ್ಲಿಪಾಳ್ಯ ಹತ್ತಿರ ಬೈಕ್ನಲ್ಲಿ…
ಬೆಳಗಾವಿ: ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ. ಇದು ಅವರ ಕೊನೆಯ ಅಧಿವೇಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಲೇವಡಿ ಮಾಡಿದ್ದಾರೆ.…
ಮೈಸೂರಿನ ಕುವೆಂಪು ನಗರದ ಅಪೋಲೋ ಆಸ್ಪತ್ರೆಯ ಹಿಂಭಾಗ ದಲ್ಲಿರುವ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎದುರಿನ ದೊಡ್ಡಮೋರಿ ಯಿಂದ ತೆಗೆದ ಕಸವನ್ನು…
ಕಳೆದ ಮೂರು ವರ್ಷಗಳ ಅವಧಿಯಲ್ಲಿ, ರಾಜ್ಯದಲ್ಲಿ ೨,೮೪೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ಸಿಆರ್ಬಿ)…
ಭಾರತದ ಶಿಕ್ಷಣ ನೀತಿ ಮಕ್ಕಳ ಆರೋಗ್ಯದ ಕುರಿತು ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ, ಬಹುತೇಕ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂಬುದು ವಿಷಾದಕರ…
ಕೇಂದ್ರ ಸರ್ಕಾರದಲ್ಲಿ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಸೆಂಬರ್ ೧೬ರಂದು…