ಮೈಸೂರು

ದೀಪಾವಳಿ ವಿಶೇಷ ರೈಲಯ ಸಂಚಾರ : 10 ಕೋಟಿ ರೂ. ಆದಾಯ

ಮೈಸೂರು : ದೀಪಾವಳಿ ಮತ್ತು ಛಾತ್ ಹಬ್ಬಗಳ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ನೈಋತ್ಯ ರೈಲ್ವೆ ಒದಗಿಸಿದ್ದು, ಇದಕ್ಕೆ ಪೂರಕವಾಗಿ ನೈಋತ್ಯ ರೈಲ್ವೆಯು ೧೨೪ ವಿಶೇಷ ರೈಲುಗಳ ಸೇವೆಯನ್ನು ನಿರ್ವಹಿಸಿದೆ.

ಇದು ಕಳೆದ ವರ್ಷದ ೯೦ ಸೇವೆಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಽಯಲ್ಲಿ ೩೦೫ ಟ್ರಿಪ್‌ಗಳು ಇದ್ದದ್ದು ಈ ಬಾರಿ ೩೪೮ ಟ್ರಿಪ್‌ಗಳಿಗೆ ಏರಿಕೆಯಾಗಿವೆ. ಅಲ್ಲದೇ ಹೆಚ್ಚುವರಿಯಾಗಿ ಇತರ ವಲಯಗಳಿಂದ ೧೩೪ ಟ್ರಿಪ್‌ಗಳನ್ನು ಒಳಗೊಂಡ ೪೦ ವಿಶೇಷ ರೈಲುಗಳು ನೈಋತ್ಯ ರೈಲ್ವೆ ಪ್ರದೇಶದ ಮೂಲಕ ಹಾದು ಹೋಗಿವೆ.

ಈ ಹಬ್ಬದ ಅವಧಿಯಲ್ಲಿ (ಅ.೧೫ರಿಂದ ಅ.೨೧ರವರೆಗೆ) ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ್ದು, ಇದರಿಂದ ರೈಲ್ವೆಗೆ ಸುಮಾರು ೧೦ ಕೋಟಿ ರೂ. ಆದಾಯ ಬಂದಿದೆ. ಇದರ ಜೊತೆಗೆ ೮.೫ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಾಮಾನ್ಯ (ನಿತ್ಯ) ರೈಲುಗಳಲ್ಲಿ ಪ್ರಯಾಣಿಸಿದ್ದು, ರೈಲ್ವೆ ಬೊಕ್ಕಸಕ್ಕೆ ಸುಮಾರು ೬೧ ಕೋಟಿ ರೂ. ಕೊಡುಗೆ ನೀಡಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆ ೩೪೦ ನಿಯಮಿತ ರೈಲುಗಳನ್ನು ನಿರ್ವಹಿಸುತ್ತಿದೆ. ಹಬ್ಬದ ಜನದಟ್ಟಣೆಯನ್ನು ನಿರ್ವಹಿಸಲು ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ವೃದ್ಧರು ಮತ್ತು ವಿಶೇಷಚೇತನರು ಪ್ರಯಾಣಿಕರಿಗೆ ಬ್ಯಾಟರಿ ಚಾಲಿತ ಬೋಗಿಗಳು ಲಭ್ಯವಿದೆ. ಕಲ್ಯಾಣ ಕ್ರಮಗಳ ಭಾಗವಾಗಿ ರಕ್ಷಿಸಲ್ಪಟ್ಟ ಮಕ್ಕಳಿಗಾಗಿ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮರಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ನೆತನ್ಯಾಹು ಬದುಕಿದ್ದಾರೆ, ಹತ್ಯೆ ವದಂತಿ ಸುಳ್ಳು ; ಇಸ್ರೇಲ್‌

ಜೆರುಸಲೆಮ್‌ : ಪಶ್ಚಿಮ ಏಷ್ಯಾದ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಈ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು…

13 mins ago

ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು : ಹನೂರು ಶಾಸಕ ಮಂಜುನಾಥ್‌

ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ…

58 mins ago

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…

1 hour ago

ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…

2 hours ago

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…

2 hours ago

ಸೌದಿ ಅರೇಬಿಯಾದಲ್ಲಿರುವ ಅಮೇರಿಕಾದ ವಾಯುನೆಲೆಯ ಮೇಲೆ ಇರಾನ್‌ ದಾಳಿ

ಟೆಹರಾನ್:‌ ಯುಎಸ್‌ ಮಿಲಿಟರಿ ಬಳಸುತ್ತಿದ್ದ ಸೌದಿ ಅರೇಬಿಯಾದ ಅಲ್‌ ಖಾರ್ಜ್‌ ವಾಯುನೆಲೆಯ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಕೆಲವು…

3 hours ago