ಮೈಸೂರು/ಟಿ.ನರಸೀಫುರ: ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಭಾನುವಾರ ಸಂಜೆ(ಮೇ.27) ಪ್ರಸಿದ್ದ ಪ್ರವಾಸಿ ತಾಣ ತಲಕಾಡಿಗೆ ದಿಢೀರ್ ಭೇಟಿ ನೀಡಿ, ಇಲ್ಲಿನ ಪ್ರಮುಖ ಸಮಸ್ಯೆಗಳನ್ನು ಪರಿಶೀಲಿಸಿದರು.
ಮುಡುಕುತೊರೆ ಬೆಟ್ಟದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದ ನಂತರ ಹಳೇತಲಕಾಡು ಅರಣ್ಯ ನಿಸರ್ಗಧಾಮ ನದಿ ತೀರ ಹಾಗೂ ಪಂಚಲಿಂಗ ಪ್ರಧಾನ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ದರ್ಶನ ಪಡೆದರು.
ತಲಕಾಡು ಗ್ರಾಮದ ಸಮ್ಯಸೆಗಳ ಬಗ್ಗೆ ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿ ಅಲ್ಲಿನ ಗ್ರಾಮ ಅಭಿವೃದ್ಧಿ ಅಧಿಕಾರಿಗೆ ಸಲಹೆ, ಸೂಚನೆ ನೀಡಿದರು.
ತಲಕಾಡು ಗ್ರಾಮಠಾಣೆ ವಿಸ್ತರಣೆಗೆ ಜಿಲ್ಲಾಧಿಕಾರಿಗಳಿಗೆ ಪಂಚಾಯಿತಿ ಮನವಿ ಪತ್ರ ಸಲ್ಲಿಸಿತು. ಗ್ರಾಮಠಾಣೆ ವಿಸ್ತರಣೆ ಅಗತ್ಯತೆ ಕುರಿತು ತಲಕಾಡು ಸ್ವಗ್ರಾಮಸ್ಥರು ಹಾಗೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರು, ನಿನ್ನೆಯಷ್ಟೇ ಜಿಲ್ಲಾಧಿಕಾರಿ ಛೇಂಬರ್ ಗೆ ಭೇಟಿ ನೀಡಿ, ಈ ಕುರಿತು ಸಲಹೆ ಮಾರ್ಗದರ್ಶನ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೂತನ ರಸ್ತೆಗೆ ಭೂಮಿ ಖರೀಧಿ;
ಇಲ್ಲಿನ ಆಶ್ರಯಬಡಾವಣೆಗೆ ನೂತನ ಸಂಪರ್ಕ ರಸ್ತೆ ಅಸ್ತಿತ್ವಕ್ಕೆ ತರಲು 10ಗುಂಟೆ ಖಾಸಗಿ ಭೂಮಿ ಖರೀಧಿಗೆ ಪಂಚಾಯಿತಿ ಮತ್ತು ಸ್ಥಳೀಯರಿಂದ ಶೇ.50 ರಷ್ಟು ವಂತಿಗೆ ಸಂಗ್ರಹಿಸಿ ಕೊಡಲು ಮುಂದಾದರೆ ಯಾವುದಾದರು ನಿಗಮದಿಂದ ಬಾಕಿ ಮೊತ್ತ ಭರಿಸಿಕೊಡಲು ಅಗತ್ಯ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಪಂಚಾಯಿತಿಗೆ ಭರವಸೆ ನೀಡಿದರು.
ಬುಧವಾರ ಸಭೆ ಆಯೋಜನೆ;
ಇಲ್ಲಿ ನಡೆಸಿದ ಪರಿಶೀಲನೆಯಲ್ಲಿ ಕಂಡು ಬಂದ ಪ್ರಮುಖ ವಾಸ್ತವತೆಯ ವಿವರಗಳನ್ನು ವಿವರಿಸಿದ ಜಿಲ್ಲಾಧಿಕಾರಿಗಳು. 25ಎಕರೆ ಅರಣ್ಯ ಇಲಾಖೆಯ ಸುಪರ್ಧಿನಲ್ಲಿರುವ ಜಾಗದ ಪೋಡಿ ದುರಸ್ತಿ ನೆರವೇರಿಸಿ ಸಂಬಂಧಪಟ್ಟವರಿಗೆ ಹಸ್ತಾಂತರ, ಗ್ರಾಮಾರಣ್ಯ ಸಮಿತಿ ಪುನರ್ ರಚನೆ, ಕಸ ಸಂಗ್ರಹಣೆ, ಕುಡಿಯುವ ನೀರಿನ ವ್ಯವಸ್ಥೆ
ಪ್ರವಾಸಿಗರಿಗೆ ಅಧೀಕೃತವಾಗಿ ಲೈಪ್ ಜಾಕೆಟ್ ಸಮೇತ ಹರಿಗೋಲು ನಡೆಸಲು ಅನುಮತಿ, ಮಕ್ಕಳು ಆಟವಾಡಲು, ಪ್ರವಾಸಿಗರು ವಿಶ್ರಮಿಸಿಕೊಳ್ಳಲು, ಮಹಿಳೆಯರ ವಸ್ತ್ರ ಬದಲಾವಣೆ ಕೊಠಡಿಗಳು, ನದಿ ದಂಡೆಯಲ್ಲಿ ವಾಚ್ ಟವರ್ ಸ್ಥಾಪನೆ, ಸೇರಿದಂತೆ ಅರಣ್ಯ ನಿಸರ್ಗಧಾಮದಲ್ಲಿ ಆಯಾ ಚಟುವಟಿಕೆಗಳಿಗೆ ಪ್ರತ್ಯೇಕ ವೆಂಡಿಂಗ್ ಝೋನ್ ಸ್ಥಾಪನೆ, ನನೆಗುದಿಯಲ್ಲಿರುವ ಹಳೇತಲಕಾಡು ರಸ್ತೆ ವಿಸ್ತರಣೆ, ತಲಕಾಡಿಗೆ ಸೂಕ್ತ ಬಸ್ ಸಾರಿಗೆ ವ್ಯವಸ್ಥೆ ಸಂಬಂಧಪಟ್ಟಂತೆ ಸೂಕ್ತ ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಬುಧವಾರ ಸಂಜೆ 5ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಿತ ಅಧಿಕಾರಿಗಳ ಜತೆ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಡಿಜೆ ಸೌಂಡ್ ಸ್ಥಗಿತಕ್ಕೆ ಆಗ್ರಹ
ಮುಡುಕುತೊರೆ ನದಿಯಾಚೆದಡದ ಜಲಧಾಮ ರೆಸಾರ್ಟ್ ನವರು ರಾತ್ರಿವೇಳೆ ಡಿ.ಜೆ ಸೌಂಡ್ ಮ್ಯೂಸಿಕ್ ಹಾಕಿ ತಡರಾತ್ರಿವರೆಗೂ ಶಬ್ದಮಾಲಿನ್ಯ ಉಂಟು ಮಾಡುತ್ತಿದ್ದಾರೆ. ಇದರಿಂದ ಬೆಟ್ಟದ ಎತ್ತರದ ತಪ್ಪಲಿನಲ್ಲಿ ವಾಸವಾಗಿರುವ ಟಿ.ಬೆಟ್ಟಹಳ್ಳಿ ಮುಡುಕುತೊರೆ ನಿವಾಸಿಗಳ ನಿದ್ರಾಭಂಗವಾಗುತ್ತಿದೆ ಎಂದು ವಿಡಿಯೋ ಸಮೇತ ಟಿ.ಬೆಟ್ಟಹಳ್ಳಿ ಗ್ರಾಮದ ಮುಖಂಡ ಶಾಂತರಾಜು ಡಿಸಿಗೆ ತೋರಿಸಿದರು, ಈ ಕುರಿತು ಲಿಖಿತ ರೂಪದಲ್ಲಿ ದೂರು ಸಲ್ಲಿಸುವಂತೆ ದೂರುದಾರರಿಗೆ ಡಿಸಿ ತಿಳಿಸಿದರು.
ಈ ವೇಳೆ ಪಂಚಾಯಿತಿ ಪಿಡಿಒ ಮಹೇಶ್, ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ತಾ.ಪಂ.ಮಾಜಿ ಸದಸ್ಯ ನರಸಿಂಹ ಮಾದನಾಯಕ, ಪಂಚಾಯಿತಿ ಹಾಗು ಕಂದಾಯ ಇಲಾಖೆ ಸಿಬ್ಬಂದಿ ಗ್ರಾಮದ ಇತರರು ಇದ್ದರು.
ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…
೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…
ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…
ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…