ಟಿ.ನರಸೀಪುರ: ದಲಿತರು ಮತ್ತು ಒಕ್ಕಲಿಗ ಸಮುದಾಯಗಳ ಜಾತಿ ನಿಂದನೆ ಮಾಡಿ, ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಬೆಂಗಳೂರು ಆರ್ ಆರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನನಾಯ್ಡು ಅವರನ್ನು ಶಾಸಕ ಸ್ಥಾನ ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹ ಪಡಿಸಿದರು.
ತಿ.ನರಸೀಪುರ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾ ಸಂಚಾಲಕರಾದ ಆಲಗೂಡುಶಿ ವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುನಿರತ್ನ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮಾನವ ಸರಪಳಿ ರಚಿಸಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ತಾಲ್ಲೂಕು ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್, ಕುಕ್ಕೂರುರಾಜು, ಹಿರಿಯೂರು ಸೋಮಣ್ಣ, ಕಿರಗಸೂರು ರಜನಿ, ವಾಟಾಳ್ ನಾಗರಾಜ್, ಕೃಷ್ಣಮೂರ್ತಿ, ಮನು, ಯರಗನಹಳ್ಳಿ ಸುರೇಶ್, ಆದಿಬೆಟ್ಟಹಳ್ಳಿಅರ್ಜುನ್, ಮಲ್ಲಯ್ಯ ,ಬನ್ನಹಳ್ಳಿಹುಂಡಿ ಉಮೇಶ್,ಸುಜ್ಜಲೂರುಶಿವಯ್ಯ, ಆಲಗೂಡು ನಾಗರಾಜ್, ರಘು,ದರ್ಶನ್,ರವಿ,ಬಿಲಗೆರೆಹುಂಡಿಸಿದ್ದರಾಜು, ಶಿವಕುಮಾರ್, ಕರೋಹಟ್ಟಿ ನಾಗೇಶ್, ಮಹದೇವಸ್ವಾಮಿ,ಯಡದೊರೆನಾರಾಯಣ, ಬೆಟ್ಟ ಹಳ್ಳಿ ದಕ್ಷಿಣಾಮೂರ್ತಿ,ಮಾವಿನಹಳ್ಳಿಕುಮಾರ್, ಲಿಂಗರಾಜು, ಇಂಡವಾಳು ಹೊನ್ನಯ್ಯ, ನಾಗರಾಜ್, ರಂಗಸಮುದ್ರ ರಂಗಸ್ವಾಮಿ, ನಂಜುಂಡ, ಮೂಗೂರು ರೇವಣ್ಣ , ಕೈಯಂಬಳ್ಳಿ ಕೃಷ್ಣ, ಗಿರಿಯ ಇದ್ದರು.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…