ಹುಣಸೂರು : ತಾಲ್ಲೂಕಿನ ಹೊಸಕೋಟೆ ಗ್ರಾಮದ ಗೋಪಾಲಯ್ಯ ಅವರ ಹಸು ಜಮೀನಿನಲ್ಲಿ ಮೇಯುವ ಸಮಯದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ.
ಹುಲಿ ದಾಳಿಯಿಂದ ಹಸು ತೀವ್ರವಾಗಿ ಗಾಯಗೊಂಡಿದೆ. ಹುಲಿ ದಾಳಿಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗೋಪಾಲಯ್ಯ ನೇತೃತ್ವದಲ್ಲಿ ರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣಾ ಪೋಲಿಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸುತ್ತಿದ್ದು, ಹುಲಿ ಪತ್ತೆಯಾಗಿಲ್ಲ.
ಆರ್‌ಎಫ್‌ಒ ನಂದಕುಮಾರ್ ಸ್ಥಳಕ್ಕೆ ಆಗಮಿಸಿ, ಗಾಯಗೊಂಡಿರುವ ಹಸುವಿನ ಚಿಕಿತ್ಸೆಗೆ ಪರಿಹಾರವನ್ನು ನೀಡಲಾಗುವುದು. ಹುಲಿ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಸಂದರ್ಶನ: ಚಿರಂಜೀವಿ ಸಿ.ಹುಲ್ಲಹಳ್ಳಿ ‘ಆಂದೋಲನ’ ಸಂದರ್ಶನದಲ್ಲಿ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಭಿಮತ ಮೈಸೂರು: ರಂಗಭೂಮಿಯ ಒಳಗೆ ಬಾಬಾ ಸಾಹೇಬ್…
ಫೋಟೋ ಬರಹ, ಚಂದ್ರಶೇಖರ ಮೂರ್ತಿ ಸೋಮನಾಥಪುರದ ಬಳಿಯ ಮೊಂಡಸಾಲೆ ನಾರಾಯಣನ ದೇಗುಲ ಸರಿಯಾದ ಪೋಷಣೆ ಇಲ್ಲದೆ, ನಿರ್ಲಕ್ಷ್ಯಕ್ಕೆ ಒಳಗಾಗಿ ಗಿಡ…
ಫೋಟೋ ಬರಹ, ಸಿರಿ ಮೈಸೂರು ಪ್ರಶಾಂತವಾದ ಕೆರೆ ನೀರು, ಹಕ್ಕಿಗಳ ಚಿಲಿಪಿಲಿ, ಸುಂದರವಾದ ಸೂರ್ಯೋದಯ, ಅಲ್ಲಲ್ಲಿ ನವಿಲುಗಳು ಹಾಗೂ ಸಿಕ್ಕಾಪಟ್ಟೆ…
ಅಕ್ಷತಾ ಕೊಡಗಿನ ಆದಿವಾಸಿಗಳೆನಿಸಿಕೊಂಡ ಕುಡಿಯರಲ್ಲಿ ಪೂಮಲೆ ಕುಡಿಯ, ತೇಮಲೆ ಕುಡಿಯ ಮತ್ತು ಅಡಿಕೆ ಕುಡಿಯ ಎಂಬ ಮೂರು ಪಂಗಡಗಳಿವೆ. ಪೂಮಲೆ…
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಶೋ ರೂಂ ತೆರೆಯುದಾಗಿ ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ ʼಟೆಸ್ಲಾʼ…