ಮೈಸೂರು

ಶೀಘ್ರದಲ್ಲೇ ಸರ್ಕಾರಿ ಗೋಶಾಲೆ ಕಾರ್ಯ ಆರಂಭ

ಆಂದೋಲನ ಸಂದರ್ಶನದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎ.ಪ್ರಸನ್ನ ವಾಹಿತಿ

ಸಂದರ್ಶನ: ನವೀನ್ ಡಿಸೋಜ
ಮಡಿಕೇರಿ: ಇತ್ತೀಚೆಗೆ ಮಡಿಕೇರಿ ನಗರದ ಹೊರವಲಯದಲ್ಲಿ ಉದ್ಘಾಟನೆಗೊಂಡಿರುವ ಗೋಶಾಲೆಗೆ ಶೀಘ್ರದಲ್ಲಿಯೇ ಜಾನುವಾರುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ.ಎ. ಪ್ರಸನ್ನ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ರಾಜ್ಯದ ೨ನೇ ಸರ್ಕಾರಿ ಗೋಶಾಲೆಯನ್ನು ಇತ್ತೀಚೆಗೆ ಉದ್ಘಾಟಿಸಲಾಗಿದ್ದು, ತಾಂತ್ರಿಕ ಕಾರಣಗಳಿಂದ ಇನ್ನೂ ಗೋಶಾಲೆ ಕಾರ್ಯಾರಂಭ ವಾಡಿಲ್ಲ. ಈ ಬಗ್ಗೆ ‘ಆಂದೋಲನ’ ಸಂದರ್ಶನದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ.ಎ. ಪ್ರಸನ್ನ ವಾಹಿತಿ ನೀಡಿದ್ದಾರೆ.

ಪ್ರಶ್ನೆ: ಗೋಶಾಲೆ ಉದ್ಘಾಟನೆಗೊಂಡರೂ ಜಾನುವಾರುಗಳನ್ನು ದಾಖಲಿಸದಿರಲು ಕಾರಣವೇನು?
ಉತ್ತರ: ಕೆ.ನಿಡುಗಣೆ ಗ್ರಾಮದಲ್ಲಿ ಗೋಶಾಲೆಯನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಆದರೆ, ಈ ಸಮಯದಲ್ಲಿ ಮೇವಿನ ಕೊರತೆ ಇರುವುದರಿಂದ ಸಂಗ್ರಹ ಸಾಧ್ಯವಾಗಿಲ್ಲ. ಇನ್ನು ೮-೧೦ ದಿನಗಳಲ್ಲಿ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಈಗ ೫೦ ಜಾನುವಾರುಗಳಿಗೆ ಮಾತ್ರ ಆಶ್ರಯ ಕಲ್ಪಿಸುವಷ್ಟು ಮೂಲಭೂತ ಸೌಲಭ್ಯವಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ಜಾನುವಾರುಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಬಿಡಾಡಿ ಜಾನುವಾರುಗಳಿಗೆ ೨ನೇ ಆದ್ಯತೆ ನೀಡಿ ನಂತರ ಮಾಲೀಕರು ಸೇರ್ಪಡೆಗೊಳಿಸುವ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲು ನಿರ್ಧರಿಸಲಾಗಿದೆ. ಗೋಶಾಲೆಗೆ ಸಿಬ್ಬಂದಿಗಳ ನೇಮಕವಾಗಿಲ್ಲ. ಡಿ ಗ್ರೂಪ್ ನೌಕರರನ್ನು ತಾತ್ಕಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಬೇಕಾಗಿದೆ.

ಪ್ರಶ್ನೆ: ಜಿಲ್ಲೆಯಲ್ಲಿ ಬಿಡಾಡಿ ಜಾನುವಾರುಗಳಿಂದ ಸಾಕಷ್ಟು ಸಮಸ್ಯೆಯುoಟಾಗುತ್ತಿದೆ. ೫೦ ಜಾನುವಾರುಗಳಿಗೆ ಆಶ್ರಯ ಕಲ್ಪಿಸಿದರೆ ಸಮಸ್ಯೆ ಬಗೆಹರಿಯುತ್ತದೆಯೇ

ಉತ್ತರ: ಪ್ರಸ್ತುತ ೨ ಎಕರೆ ಜಾಗದಲ್ಲಿ ಸರ್ಕಾರಿ ಗೋಶಾಲೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ೮ ಎಕರೆಗೆ ವಿಸ್ತರಿಸುವ ಚಿಂತನೆ ಇದೆ. ಈಗ ಕೊಟ್ಟಿಗೆಯಲ್ಲಿ ಸಾಕಲು ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಫೆನ್ಸ್ ಹಾಕಿ ಹೊರಗೆ ಬಿಡುವ ಮೂಲಕ ಗೋಶಾಲೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಪ್ರಶ್ನೆ: ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಎಷ್ಟಿದೆ?
ಉತ್ತರ: ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಶೇ.೩೦ರಷ್ಟು ಸಿಬ್ಬಂದಿಗಳು ವಾತ್ರ ಕಾರ್ಯನಿರ್ವಹಿಸುತ್ತಿದ್ದು, ಶೇ.೭೦ರಷ್ಟು ಸಿಬ್ಬಂದಿಗಳ ಕೊರತೆಯ ನಡುವೆ ಕೆಲಸ ವಾಡಬೇಕಾದ ಪರಿಸ್ಥಿತಿ ಇದೆ. ಇಲಾಖೆುಂಲ್ಲಿ ೭೩ ಸಂಸ್ಥೆಗಳಿದ್ದು, ೪೮ ಸಂಸ್ಥೆಗಳಲ್ಲಿ ವೈದ್ಯರು ಇರಬೇಕಾಗಿತ್ತು. ಆದರೆ, ೨೧ ಸಂಸ್ಥೆಗಳಲ್ಲಿ ವಾತ್ರ ವೈದ್ಯರಿದ್ದಾರೆ. ಒಬ್ಬ ವೈದ್ಯರು ೨-೩ ಸಂಸ್ಥೆಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.
ಪ್ರಶ್ನೆ: ಜಿಲ್ಲೆಯಲ್ಲಿ ಇತರ ಪ್ರಾಣಿ ಸಂಬಂಧಿತ ರೋಗಗಳ ಭೀತಿ ಇದೆೆಯೇ?
ಉತ್ತರ: ಇತ್ತಿಚೆಗೆ ಕೇರಳ ರಾಜ್ಯದ ಹಂದಿಗಳಲ್ಲಿ ಜ್ವರ ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಸದ್ಯ ಆ ರೋಗವೂ ಕಡಿಮೆಯಾಗಿರುವುದರಿಂದ ಸಮಸ್ಯೆಯಿಲ್ಲ. ಜಿಲ್ಲೆಯ ಕೆಲವು ಭಾಗಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದಿರುವುದರಿಂದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆಲವು ವರದಿಗಳು ನೆಗೆಟಿವ್ ಬಂದಿದ್ದು, ಇನ್ನು ಕೆಲವು ವರದಿಗಳು ಬರಬೇಕಿದೆ. ಸದ್ಯ ಆತಂಕ ಪಡುವಂತಹ ಯಾವ  ಪ್ರಕರಣಗಳೂ ಇಲ್ಲ.
ಪ್ರಶ್ನೆ: ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಯಾವುದಾದರೂ ಅಭಿಯಾನ ನಡೆಯುತ್ತಿದೆಯೇ   ?
ಉತ್ತರ: ಸೆ.೧ರಿಂದ ೧೫ರವರೆಗೆ ರೇಬೀಸ್ ಹಾಗೂ ಪ್ರಾಣಿ ಸಂಬಂಧಿತ ಇತರ ರೋಗಗಳ ಬಗ್ಗೆ ವಾಹಿತಿ ಶಿಬಿರವನ್ನು ಪ್ರೌಢಶಾಲೆಗಳಲ್ಲಿ ಆಯೋಜಿಸಲಾಗಿದೆ. ಸೆ.೧೫ರಿಂದ ೩೦ರವರೆಗೆ ಉಚಿತ ಆ್ಯಂಟಿ ರೇಬೀಸ್ ಅಭಿಯಾನ ಮೂಲಕ ಸುವಾರು ೧೦,೫೦೦ ಶ್ವಾನಗಳಿಗೆ ಜಿಲ್ಲೆಯಾದ್ಯಂತ ಲಸಿಕೆ ಹಾಕಲಾಗಿದೆ. ೫ ತಾಲ್ಲೂಕುಗಳಲ್ಲೂ ಈ ಅಭಿಯಾನ ನಡೆಸಲಾಗಿದೆ.

ಪ್ರಶ್ನೆ: ಕೊಡಗು ಜಿಲ್ಲೆಯಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದೆಯೇ?
ಉತ್ತರ: ಚರ್ಮಗಂಟು ರೋಗ ಸದ್ಯ ಕೊಡಗು ಜಿಲ್ಲೆಯಲ್ಲಿ ಇಲ್ಲ. ಜಿಲ್ಲೆಯಲ್ಲಿ ರೋಗ ಹರಡುವ ಸಾಧ್ಯತೆ ಕಡಿಮೆ ಇದೆ. ಬೇರೆ ಕಡೆಗಳಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯುವುದರಿಂದ ರೋಗ ಹರಡುತ್ತದೆ. ನಮ್ಮಲ್ಲಿ ಜಾತ್ರೆಯಂತಹ ಜಾನುವಾರುಗಳು ಸೇರುವಂತಹ ಕಾರ್ಯಕ್ರಮ ಕಡಿಮೆ ಇರುವುದರಿಂದ ರೋಗ ಹರಡುವ ಸಾಧ್ಯತೆ ಇಲ್ಲ. ಆದರೂ ಪಕ್ಕದ ಜಿಲ್ಲೆಗಳಲ್ಲಿ ರೋಗ ಪತ್ತೆಯಾಗಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ.

andolanait

Recent Posts

ಬಂಧನದಲ್ಲಿರುವ ಮುನಿರತ್ನ ಆರೋಗ್ಯದಲ್ಲಿ ದಿಢೀರ್‌ ಏರುಪೇರು: ಜಯದೇವ ಆಸ್ಪತ್ರೆಗೆ ದಾಖಲು

ಬೆಂಗಳೂರು: ಲಂಚ ಬೇಡಿಕೆ, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ…

1 hour ago

ದಸರಾ ಚಲನಚಿತ್ರೋತ್ಸವ- 2024| ಉತ್ತಮ ಕಿರುಚಿತ್ರ ಆಯ್ಕೆಗೆ ಪರಿಣಿತರಿಂದ ವೀಕ್ಷಣೆ

ಐನಾಕ್ಸ್ ಚಿತ್ರಮಂದಿರದಲ್ಲಿ ಆಯ್ಕೆಯಾದ ಅತ್ಯುತ್ತಮ ಕಿರು ಚಿತ್ರಗಳ ಪ್ರದರ್ಶನ ಮೈಸೂರು : ದಸರಾ ಚಲನ ಚಿತ್ರೋತ್ಸವ 2024ರ ಅಂಗವಾಗಿ ಕಿರು ಚಿತ್ರಗಳ…

2 hours ago

ಮೈಶುಗರ್: 2.5 ಲಕ್ಷ ಟನ್‌ನಷ್ಟು ಕಬ್ಬು ಅರೆಯಲು ಯಾವುದೇ ತೊಂದರೆ ಇಲ್ಲ: ಡಾ: ಹೆಚ್.ಎಲ್ ನಾಗರಾಜು

ಮಂಡ್ಯ: ಮೈ ಶುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿದ್ದು, ಪ್ರತಿದಿನ ಸುಮಾರು 3000 ಟನ್ ನಷ್ಟು…

2 hours ago

ಹನೂರು: ಬಿಆರ್‌ಟಿ ವನ್ಯಜೀವಿ ವ್ಯಾಪ್ತಿಯಲ್ಲಿ ಆನೆ ಸಾವು

ಹನೂರು: ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಶಾಖೆ ಮಾವತ್ತೂರು…

2 hours ago

ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಆರ್‌.ಅಶೋಕ ಆಗ್ರಹ

ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ರಾಜಕಾರಣ: ವಿಪಕ್ಷ ನಾಯಕ ಬೆಂಗಳೂರು: ನಾಗಮಂಗಲದ ಕೋಮುಗಲಭೆ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಿಸಿದ ಘಟನೆ ಹಾಗೂ…

3 hours ago

ಜೊತೆಗಿದ್ದ ಯುವತಿಗೆ ಲೈಂಗಿಕ ಕಿರುಕುಳ: ಕೊರಿಯೋಗ್ರಾಫರ್‌ ವಿರುದ್ಧ ದೂರು ದಾಖಲು

ಮೈಸೂರು: ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ ವರೆಗೂ ಅನೇಕ ದಕ್ಷಿಣ ಭಾರತದ ಸ್ಟಾರ್‌ ನಟರಿಗೆ ಕೊರಿಯೋಗ್ರಾಫರ್‌ ಮಾಡಿರುವ ಹೆಸರಾಂತ ತೆಲುಗು ಡ್ಯಾನ್ಸ್ ಕೊರಿಯೋಗ್ರಾಫರ್‌…

3 hours ago