ಮೈಸೂರು

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು

ಮೈಸೂರು : ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಗೋಕುಲಂನ ಕಾಂಟೂರ್ ರಸ್ತೆಯ ಶ್ಯಾಗಲೆ ಶಿವರುದ್ರಪ್ಪ ಟ್ರಸ್ಟ್‌ನಲ್ಲಿರುವ ಜಾತ್ಯತೀತ ಒಲವಿನ ವಿವಾಹ ವೇದಿಕೆ ಮಾನವ ಮಂಟಪದಲ್ಲಿ ಭಾನುವಾರ ನಡೆದ ಸರಳ ಪ್ರೇಮ ವಿವಾಹದಲ್ಲಿ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಪರಸ್ಪರ ಹಾರ ಬದಲಿಸಿಕೊಂಡು ಹಸೆಮಣೆ ಏರಿದರು. ಯಾವುದೇ ಮಂಗಳ ವಾದ್ಯ ಇಲ್ಲದೆ ಕುವೆಂಪು ಅವರ ಆಶಯದಂತೆ ಪ್ರಕೃತ್ ಗೌಡ ಅವರು ಪ್ರಿಯಾಂಕ ಅವರಿಗೆ ತಾಳಿ ಕಟ್ಟುತ್ತಿದ್ದಂತೆ ನೆರೆದಿದ್ದ ಜನರು ಅಕ್ಷತೆ ಕಾಳಿಟ್ಟು ಆಶೀರ್ವಾದ ಮಾಡಿದರು.

ಲಕ್ಷ್ಮೀಕಾಂತ್ ನಗರದ ನಿಸರ್ಗ ಬಡಾವಣೆಯ ಟಿ.ಎಚ್.ಶ್ರೀನಿವಾಸಮೂರ್ತಿ-ದೇವಿ ಶಾರದಾ ದಂಪತಿಯ ಪುತ್ರಿ ಎಸ್.ಪ್ರಿಯಾಂಕ ಮತ್ತು ಮಹಾಲಕ್ಷ್ಮೀ ಬಡಾವಣೆಯ ಯು.ಎಂ.ಕೃಷ್ಣಪ್ಪ ಹಾಗೂ ಎಚ್.ಸಿ.ಶೀಲಾ ದಂಪತಿ ಪುತ್ರ ಯು.ಕೆ.ಪ್ರಕೃತ್ ಗೌಡ ಸರಳ ಪ್ರೇಮ ವಿವಾಹವಾದರು.

ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯಗಳನ್ನು ಬೋಧಿಸುತ್ತಿದ್ದಂತೆಯೇ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಪರಸ್ಪರ ಹಾರ ಬದಲಾಯಿಸಿಕೊಂಡರು. ನಂತರ, ವಧುವಿಗೆ ತಾಳಿ ಕಟ್ಟಿದಾಗ ನೆರೆದಿ ದ್ದವರು ಆಶೀರ್ವಾದ ಮಾಡಿದರು.

ಶ್ರೀಮತಿ ಕಾಳಚನ್ನೇಗೌಡ, ಪತ್ರಕರ್ತ ಟಿ.ಗುರುರಾಜ್, ಸಾಮಾಜಿಕ ಕಾರ್ಯಕರ್ತೆ ಮಂಗಳ, ನಿವೃತ್ತ ಅಽಕಾರಿ ರಾಜು, ಉಪನ್ಯಾಸಕರಾದ ಕವಿತ, ಸಾರಿಗೆ ಇಲಾಖೆಯ ಕೃಷ್ಣ, ವಧುವಿನ ಪೋಷಕರಾದ ದೇವಿ ಶಾರದ ಮತ್ತು ಟಿ.ಎಚ್.ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದು ಹಾರೈಸಿದರು.

ಮನವೊಲಿಕೆಗೆ ಯತ್ನ
ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಕುಟುಂಬದವರ ಸಮ್ಮುಖದಲ್ಲಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದರು. ಈ ವಿಚಾರ ಎರಡೂ ಕುಟುಂಬಗಳ ಮನೆಯವರಿಗೂ ತಿಳಿದಿತ್ತು. ಯು.ಕೆ.ಪ್ರಕೃತ್ ಗೌಡ ಅವರ ಮನೆಗೆ ವಧುವಿನ ಪೋಷಕರು ತೆರಳಿ ಮಾತುಕತೆ ನಡೆಸಿದಾಗ ವರನ ತಂದೆ-ತಾಯಿ ಸಮ್ಮತಿಸಿದ್ದರು. ಆದರೆ, ವರನ ತಾತ-ಅಜ್ಜಿ ಈ ಮದುವೆಗೆ ನಿರಾಕರಿಸಿದ್ದರಿಂದ ಸಮಸ್ಯೆಯಾಯಿತು. ಪ್ರಿಯಾಂಕಳನ್ನು ಬಿಟ್ಟಿರದ ಪ್ರಕೃತ್ ಗೌಡ ಮಾನವ ಮಂಟಪದವರಿಗೆ ವಿಚಾರ ಮುಟ್ಟಿಸಿದರು. ಸಂಚಾಲಕರು ಈ ಕುಟುಂಬಗಳ ಮನವೊಲಿಸಿ ವಿವಾಹ ಮಾಡಿಸಲು ಯತ್ನಿಸಿದರೂ ಸಾಧ್ಯವಾಗದೆ, ವರನ ಪೋಷಕರು ದೂರ ಉಳಿದರೆ, ವಧುವಿನ ಪೋಷಕರು ಮುಂದೆ ನಿಂತು ಮದುವೆ ಮಾಡಿಸಿದರು.

ಆಂದೋಲನ ಡೆಸ್ಕ್

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

1 hour ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

2 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

2 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

2 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

2 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

2 hours ago