ಮೈಸೂರು

ಕನ್ನಡ ವೇದಿಕೆಯಿಂದ ಕೆ. ಶಿವರಾಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ !

ಮೈಸೂರು : ಕನ್ನಡ ವೇದಿಕೆ ವತಿಯಿಂದ ನಗರದ ಶಾಲೆಯ ಮಕ್ಕಳೊಂದಿಗೆ ಕೆ.ಶಿವರಾಂ ರವರಿಗೆ  ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು .
ಕಾರ್ಯಕ್ರಮ ಉದ್ದೇಶಿಸಿ ನಗರ ಪಾಲಿಕೆ ಸದಸ್ಯ  ಮಂಜುನಾಥ್  ಮಾತನಾಡಿ ಮೈಸೂರಿನ ನಗರದಲ್ಲಿ ಅವರು ಆಯುಕ್ತರಾಗಿ ಮೈಸೂರಿನ ಹಲವಾರು ಸೇವೆಗಳನ್ನು ಮಾಡಿದ್ದಾರೆ ಎಂದರು.
ಶೋಷಿತ ವರ್ಗದವರಿಗೆ ದೀನ ದಲಿತರಿಗೆ ಮೈಸೂರಿನ ಜಯನಗರ ಬಳಿ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ ಮತ್ತು ನೊಂದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಪಾವತಿಸಿದ್ದಾರೆ ಹಾಗೂ ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕೆಎ  ಎಸ್ ಮತ್ತು ಐಎಎಸ್ ತರಬೇತಿಯನ್ನು ಸಹ ನೀಡುತ್ತಿದ್ದರು.
ನಮ್ಮ ಹಾಗೆ ಓದಿದರೆ ನನ್ನಂತೆ ತಾವು ಸಹ ಅಧಿಕಾರಿಯಾಗುತ್ತಿರಿ ಎಂದು ತಿಳಿ ಹೇಳುತ್ತಿದ್ದರು ಸ್ವಯಂ ನಿವೃತ್ತಿ ಹೊಂದಮೇಲೆ ಸಿನಿಮಾ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದರು ಚಲವಾದಿ ಎಂಬ ಸಂಘಟನೆಯಿಂದ ಶೋಷಿತ ವರ್ಗದವರಿಗೆ ಮಾರ್ಗದರ್ಶಕರಾಗಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ ಬಾಲಕೃಷ್ಣ ಅವರು ಮಾತನಾಡಿ, ಕನ್ನಡದಲ್ಲಿ ಪ್ರಥಮವಾಗಿ ಐಎಎಸ್ ಮಾಡಿದಂತ ಕೆ ಶಿವರಾಂ  ರವರು  ಇಂದು ನಮ್ಮನ್ನು ಅಗಲಿದ್ದಾರೆ.
ಆದರೆ ದೇಹ ಇಲ್ಲವಾದರೂ ಅವರ ವಿಚಾರಧಾರೆಗಳು ತಿಳಿದುಕೊಳ್ಳಲು ಸಾಕಷ್ಟು ಇವೆ ಅಂದಿನ ಕಾಲದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಸಮಯದಲ್ಲಿ ಛಲದಿಂದ ಕನ್ನಡ ಮಾತೃಭಾಷೆಯಲ್ಲಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕಕ್ಕೆ ಮಾದರಿಯಾದರು ಎಂದರು.
ಇವರ ಸಾಹಸಕ್ಕೆ ಮೆಚ್ಚಿ ಅಂದಿನ ಸಂಘ-ಸಂಸ್ಥೆಗಳು ಅಭಿನಂದಿಸಿದವು ಇವರಿಂದ ಪ್ರೇರಿತರಾದ ಎಷ್ಟೋ ಜನ ಕನ್ನಡದಲ್ಲಿ ಐಎಎಸ್ ಮಾಡಲು  ಪ್ರಾರಂಭಿಸಿದರು.
ಇವರು ಮೈಸೂರಿನಲ್ಲಿ ನಗರ ಪಾಲಿಕೆ ಆಯುಕ್ತರಾಗಿ ಮತ್ತು ಕನ್ನಡದಲ್ಲಿ ಬಾನಲ್ಲೆ ಮಧುಚಂದ್ರಕ್ಕೆ ಎಂಬ ಸಿನಿಮಾದಿಂದ ಜನರಿಗೆ ಪರಿಚಿತರಾಗಿ ಇವರಿಂದ ಸುಮಾರು ಸಮಾಜಸೇವೆ ಕಾರ್ಯಗಳು ನಡೆದವು.
ಈಗಲೂ ಮೈಸೂರಿನಲ್ಲಿ ಇವರನ್ನು ನೆನೆಯುತ್ತಾರೆ ಇಂಥ ಮಹಾವ್ಯಕ್ತಿಯು ನಮ್ಮನ್ನು ಅಗಲಿರುವುದು ದುಃಖಕರ ವಿಷಯವಾಗಿದೆ ಮೈಸೂರಿನಲ್ಲಿ ಇವರ ಹೆಸರು ಉಳಿಸುವಂತಹ ಯಾವುದಾದರೂ ಉದ್ಯಾನವನಕ್ಕೋ ಹೊಸ ಬಡವನೆಗಳಿಗೆ ಇವರ ಹೆಸರು ಇಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಪದಾಧಿಕಾರಿಗಳಾದ ಗೋಪಿ, ಪ್ಯಾಲೇಸ್ ಬಾಬು, ಅರವಿಂದ, ಗೋವಿಂದ್ ರಾಜ್, ಮದನ್, ಮಹೇಶ್ ಮಾಧ್ಯಮ ವಕ್ತಾರ ಮುಂತಾದವರು ಇದ್ದರು.
andolana

Recent Posts

ಫೇಸ್‌ಬುಕ್‌ ಕಹಾನಿ | ಪ್ರೀತಿ ಹರಸಿ ಬಂದವನಿಗೆ ಹನಿಟ್ರ್ಯಾಪ್‌ ಗಾಳದ ಶಂಕೆ ; ಹಣಕ್ಕೆ ಡಿಮ್ಯಾಂಡ್‌….

ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…

7 mins ago

ಯುನಿಟಿ ಮಾಲ್‌ ನಿರ್ಮಾಣಕ್ಕೆ ವಿರೋಧ ಇಲ್ಲ : ಸಂಸದ ಯದುವೀರ್‌

ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…

15 mins ago

ಮೈಸೂರಲ್ಲಿ ಎರಡು ದಿನ ಮಾಗಿ ಸಂಭ್ರಮ : ಅವರೆಕಾಯಿ ಸೊಗಡು ಜೋರು…

ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…

19 mins ago

ಡಿ.16 ರಂದು ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಭದ್ರತಾ ವ್ಯವಸ್ಥೆ ಪರಿಶೀಲನೆ

ಮಂಡ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…

27 mins ago

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಗ್ರಾ.ಪಂ ಮಾಜಿ ಅಧ್ಯಕ್ಷನ ವಿರುದ್ಧ ದೂರು

ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…

51 mins ago

ರೈತರಿಗೆ ಸಿಹಿ ಸುದ್ದಿ ; ಕೊಬ್ಬರಿಗೆ ಬೆಂಬಲ ಬೆಲೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ೨೦೨೬ರ ಹಂಗಾಮಿನ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು…

56 mins ago