ನಂಜನಗೂಡು : ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದ ಹುಂಡಿಯಲ್ಲಿ ಸುಮಾರು ೧.೭೮ಕೋಟಿ ರೂ. ಸಂಗ್ರಹವಾಗಿದೆ.
ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ದೇವಾಲಯದ ದಾಸೋಹ ಭವನದಲ್ಲಿ ಸುಮಾರು ೩೪ ಹುಂಡಿಗಳ ಏಣಿಕೆ ಕಾರ್ಯ ನಡೆಸಲಾಯಿತು.
ಪ್ರತಿಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ನಡೆದ ಗೌತಮ ಪಂಚಮಹಾರಥೋತ್ಸವ ಹಾಗೂ ಹುಣ್ಣಿಮೆಯ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ಹೀನಲೆಯಲ್ಲಿ ೧ಕೋಟಿ ೭೮ಲಕ್ಷದ ೨೯ಸಾವಿರದ ೬೬೭ ರೂ.ಗಳಷ್ಟು ಹುಂಡಿ ಹಣ ಸಂಗ್ರಹವಾಗಿದೆ. ಇದೇ ವೇಳೆ ೧೨೩.೮೦೦ ಗ್ರಾಂ ಚಿನ್ನ, ೪ಕೆ.ಜಿ. ೬೦೦ ಗ್ರಾಂ ಬೆಳ್ಳಿ, ೨೬ ವಿದೇಶಿ ನೋಟುಗಳು ಕಾಣಿಕೆ ರೂಪದಲ್ಲಿ ಬಂದಿವೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್, ಎಇಒ ಸತೀಶ್, ಇಒ ಕೃಷ್ಣ, ಕೆನರಾ ಬ್ಯಾಂಕ್ ನಂಜನಗೂಡು ಶಾಕೆಯ ಮ್ಯಾನೇಜರ್ ಲಕ್ಷ್ಮಿ ಅವರ ನೇತೃತ್ವದಲ್ಲಿ ಸ್ವಸಹಾಯ ಸಂಗದ ಮಹಿಳೆಯರು ಹುಂಡಿ ಏಣಿಕೆ ಕಾರ್ಯದಲ್ಲಿ ತೊಡಗಿದ್ದರು.
ಹನೂರು : ಉಡುತೊರೆ ಹಳ್ಳ ಜಲಾಶಯದಲ್ಲಿ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಮೂರು ಆನೆಗಳನ್ನು ಸುಮಾರು 17 ಗಂಟೆಗಳ…
ನವದೆಹಲಿ : ಜಾತ್ಯತೀತ ಜನತಾದಳದ ಜೊತೆಗೆ ಯಾವ ರಾಜಕೀಯ ನಾಯಕರೂ ಸಂಪರ್ಕ ಸಾಧಿಸಿಲ್ಲ. ಈ ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ…
ನವದೆಹಲಿ : ತಮಿಳುನಾಡಿನ ಡಿಎಂಕೆ ರಾಜಕೀಯ ಸ್ವಾರ್ಥಕ್ಕೆ ದಕ್ಷಿಣದ ರಾಜ್ಯಗಳ ಹಿತ ಬಲಿಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು…
ಮಂಡ್ಯ : ಬೇಸಿಗೆ ರಜೆಯ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಮತ್ತು ಎಡಮುರಿ ಪ್ರವಾಸಿ…
ತಿರುವನಂತಪುರಂ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್ ಮತ್ತು ಸಿಪಿಎಂ…
ಹೈದರಾಬಾದ್ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರಿಗೆ ಹೈದರಾಬಾದ್‌ನಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ…