ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಗೆಲ್ಲಲು ಮೈತ್ರಿಯ ನಾಯಕರು ಸಮನ್ವಯಕ್ಕೆ ಸಭೆ ನಡೆಸಿದ್ದರೂ ಕ್ಷೇತ್ರದ ಮೈತ್ರಿಯಲ್ಲಿ ಒಡಕು ಉಂಟಾದಂತೆ ಕಾಣುತ್ತಿದೆ.
ಹೌದು.. ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಪ್ರಚಾರದಲ್ಲಿ ಜೆಡಿಎಸ್ ನಾಯಕರ ಗೈರಾಗುತ್ತಿರುವುದು ಮೈತ್ರಿಯ ಒಡಕಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಯದುವೀರ್ ನಡೆಸುತ್ತಿರುವ ರೋಡ್ ಶೋ, ಕಾರ್ನರ್ ಸಭೆ, ಸಂವಾದ ಹಾಗೂ ಸಭೆಗಳಲ್ಲಿ ಜೆಡಿಎಸ್‌ನ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಷ್ಟೇ ಪಾಲ್ಗೊಳ್ಳುತ್ತಿದ್ದು, ನಾಯಕರು ಬಾರದಿರುವುದು ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ಜೆಡಿಎಸ್‌ನವರಿಂದ ಅಷ್ಟೇನೂ ಸಹಕಾರ ದೊರೆಯುತ್ತಿಲ್ಲ
ಮಾರ್ಚ್ 27ರಂದು ನಗರದಲ್ಲಿ ನಡೆದಿದ್ದ ಬಿಜೆಪಿ–ಜೆಡಿಎಸ್ ಸಮನ್ವಯ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಈ ಭಾಗದ ಜೆಡಿಎಸ್ ನಾಯಕರು ಬಿಜೆಪಿ ನಾಯರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಜಿ.ಟಿ.ದೇವೇಗೌಡರು ಒಮ್ಮೆಯಷ್ಟೆ ಪ್ರಚಾರ ಮಾಡಿದ್ದಾರೆ. ಸಾ.ರಾ. ಮಹೇಶ್ ಸಮನ್ವಯ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ, ಈ ಯಾರೂ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದು ಜೆಡಿಎಸ್ ಮೈತ್ರಿ ಧರ್ಮ ಪಾಲಿಸುತ್ತಿದ್ದೆಯೇ? ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ!
ಮಂಡ್ಯ : ಜಿಲ್ಲೆಯ ಯುವ ಜನತೆಗೆ ನಗರದ ಚಿತ್ರಣವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹೆಲಿಕಾಪ್ಟರ್ ಜಾಯ್ ರೈಡ್‌ಅನ್ನು ಆಯೋಜಿಸಲಗಿದ್ದು, ಮೂರು ದಿನಗಳ…
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಟೀಸರ್ ಇಂದು(ಫೆ.20) ಬಿಡುಗಡೆಯಾಗಿದೆ. 2 ನಿಮಿಷಗಳ ಈ ಟೀಸರ್…
ಮಕ್ಕಳನ್ನು ಒಂದನೇ ತರಗತಿಗೆ ಪ್ರಸಕ್ತ ಸಾಲಿಗೆ ದಾಖಲಿಸುವ ವಯೋಮಿತಿಯನ್ನು ಆರು ವರ್ಷಗಳಿಗೆ ನಿಗದಿಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.…
ಮೈಸೂರಿನಲ್ಲಿ ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯ ಮತ್ತು ಡ್ರಗ್ಸ್ ಜಾಲ ಪ್ರಕರಣಗಳ ಪತ್ತೆಗೆ ಡ್ರೋನ್ ಕಾರ್ಯಾಚರಣೆ ನಡೆಸಲು ಮೈಸೂರು ನಗರ ಪೊಲೀಸರು…
ಗುಣಮಟ್ಟದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ೨೦೨೬ನೇ ಸಾಲಿನಿಂದ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಎನ್ನುವುದು…
ಎಸ್.ಎ. ಹುಸೇನ್ ಶೀಘ್ರದಲ್ಲೇ ಹೊಸ ಪೈಪ್‌ಲೈನ್ ಮೂಲಕ ನೀರು ಸರಬರಾಜು ೪೭.೪೧ ಕೋಟಿ ರೂ. ವೆಚ್ಚದ ೨ ಹಂತಗಳ ಕಾಮಗಾರಿ…