ಮೈಸೂರು

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸ್ವಚ್ಚತ ಅಭಿಯಾನ : ಪ್ಲಾಸ್ಟಿಕ್‌, ಮದ್ಯದ ಸೀಸೆ ಸಂಗ್ರಹ

ಮೈಸೂರು: ಮೈಸೂರು ಯುವಾ ಬ್ರಿಗೇಡ್ ವತಿಯಿಂದ ಚಾಮುಂಡಿ ಬೆಟ್ಟದ ಮೆಟ್ಟಿಲಿನಲ್ಲಿ, ಬೆಟ್ಟದ ಸ್ವಚ್ಚತಾ ಅಭಿಯಾನ, ಪ್ಲಾಸ್ಟಿಕ್, ಮದ್ಯದ ಸೀಸೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಬ್ರಿಗೇಡ್‌ನ ನೂರಾರು ಕಾರ್ಯಕರ್ತರು ನಡೆಸಿದರು.

ಸ್ವಚ್ಚತಾ ಅಭಿಯಾನಕ್ಕೆ ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಕಾರ್ಯಾಲಯ ಕೈಜೋಡಿಸಿ. ತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ ಟ್ರಾಕ್ಟರ್ ವ್ಯವಸ್ಥೆಯನ್ನು ಒದಗಿಸಿದರು. ಎರಡು ಟ್ರ್ಯಾಕ್ಟರ್‌ಗೂ ಹೆಚ್ಚಿನ ಪ್ಲಾಸ್ಟಿಕ್ ಬಾಟಲ್, ಕವರ್, ಮದ್ಯದ ಸೀಸೆಗಳು ಸೇರಿದಂತೆ ತ್ಯಾಜ್ಯವನ್ನು ಸಂಗ್ರಹಿಸಿದರು. ಜೊತೆಗೆ ಬೆಟ್ಟದ ಮೆಟ್ಟಿಲು ಹತ್ತುವ ಭಕ್ತರಿಗೆ ಹಾಗೂ ಚಾರಣಿಗರಿಗೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಯಿತು.

ಅಭಿಯಾನದಲ್ಲಿ ಭಾಗಹಿಸಿ ಮಾತನಾಡಿದ ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್, ಪ್ಲಾಸ್ಟಿಕ್ ಬಾಟಲ್, ಕವರ್ ಸಿಗುವುದು ಸಾಮಾನ್ಯ. ಆದರೆ ಪವಿತ್ರ ಕ್ಷೇತ್ರದ ಉದ್ದಕ್ಕೂ ಸಾವಿರಾರು ಮದ್ಯದ ಸೀಸೆಗಳು ಸಿಕ್ಕಿದ್ದು ಆತಂಕದ ಸಂಗತಿ ಎಂದರು.

ಧಾರ್ಮಿಕ ಶ್ರದ್ದೆ ಇರುವ ಸ್ಥಳಗಳಲ್ಲಿ ಈ ರೀತಿ ಮಾಡಿರುವುದು ಹೀನ ಕೃತ್ಯ. ಮದ್ಯ, ಸಾರಾಯಿ ಕುಡಿಯಲೆಂದೆ ಬಾರ್, ಪಬ್, ರೆಸ್ಟೋರೆಂಟ್‌ಗಳಿವೇ ಅವನ್ನು ಬಳಸಬೇಕು. ಹೊರತು ಪವಿತ್ರ ಸ್ಥಳಗಳಲ್ಲಿ ಇಂತಹ ಕೃತ್ಯ ಎಸಗುವ ದುಷ್ಟಕೃತ್ಯಗಳು. ಅಂತಹ ಕಿಡಿಗೇಡಿಗಳ ವಿರುದ್ದ ಪೋಲಿಸರು ಕಟ್ಟು ನಿಟ್ಟಿನ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಬ್ರಿಗೇಡ್‌ನ ಮೈಸೂರು ವಿಭಾಗ ಸಂಚಾಲಕ ಪ್ರಮೋದ್, ಜಿಲ್ಲಾ ಸಂಚಾಲಕ ನಿತಿನ್, ಸಾಗರ್, ರಾಮಾನುಜ, ಪ್ರಶಾಂತ್, ಅಶ್ವಥ್, ಯೋಗೀಶ್, ಸೂರಿ, ಸ್ಕಂದ, ಪರಿಕ್ಷಿತ್, ಶಶಾಂಕ್, ಓಂ, ರಮೇಶ್, ನಾರಯಣ, ಮಂಜುನಾಥ್, ನರಸಿಂಹ ಮೂರ್ತಿ, ಸುಹಾಸ್, ಸುಶ್ಮಿತಾ, ಸುರಭಿ , ರಚನಾ ಶಿವಕುಮಾರ್, ದರ್ಶಿನಿ, ರೋಜಾ, ಶಿಲ್ಪಾ ರವಿ, ಪ್ರೀತಮ್ ದೈವಿಕ್, ಶ್ರೀನಿಧಿ, ಮಯೂರ್, ಚರಣ್, ಶಿವಕುಮಾರ್ , ದಿಲೀಪ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಆಂದೋಲನ ಡೆಸ್ಕ್

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

5 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

5 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

5 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

6 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

6 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

6 hours ago