ಮೈಸೂರು

ಹುಣಸೂರು: KSRTC ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಫೈಟ್

ಹುಣಸೂರು: ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ನಿಲುಗಡೆ ವಿಚಾರದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಕಿರಿಕ್ ಆಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಣಸೂರು ಬಸ್ ನಿಲ್ದಾಣದಲ್ಲಿ ನಡೆದಿದೆ.

ಪರಸ್ಪರ ಹೊಡೆದಾಟದಲ್ಲಿ ಇಬ್ಬರೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹುಣಸೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ರಾಜಾರೋಷವಾಗಿ ವಾಹನಗಳನ್ನು ನಿಲ್ಲಿಸಿ ಬಸ್‌ಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೊಬ್ಬರು ವಾಹನ ನಿಲ್ಲಿಸದಂತೆ ಸಾರ್ವಜನಿಕರೊಬ್ಬರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಗಲಾಟೆಯಲ್ಲಿ ಇಬ್ಬರಿಗೂ ಗಾಯವಾಗಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಿಕಿತ್ಸೆ ಪಡೆಯುವಂತೆ ಇಬ್ಬರನ್ನೂ ಆಸ್ಪತ್ರೆಗೆ ಕಳಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸ್ಟಿಂಗ್ ಆಪರೇಷನ್: ತನಿಖೆಗಿಂತ ಹೇಳಿಕೆಗಳ ಭರಾಟೆ

ಕರ್ನಾಟಕದ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಟಿಂಗ್ ಆಪರೇಷನ್ ಎಂಬುದು ಕಳಂಕ ತಂದಿದೆ. ರಾಜಕಾರಣ ತಲುಪಿರುವ ಅಧೋಗತಿಗೂ ಇದು ಕನ್ನಡಿ ಹಿಡಿದಿದೆ.…

1 hour ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಸ್ಟಿಂಗ್‌ ಬಲೆಯಲ್ಲಿ ಸಿಲುಕಿದೆ ರಾಜ್ಯ ರಾಜಕಾರಣ

ಸ್ಟಿಂಗ್ ಆಪರೇಷನ್ ಸ್ವರೂಪ ಬದಲಾಗಿದ್ದು ರಾಜ್ಯದ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ಅಂದ ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಟಿಂಗ್…

1 hour ago

ಅಂದು ಪಾರ್ಟಿ ಮೂಡ್‌ನಲ್ಲಿ ಪಬ್‌ಗೆ ಎಂಟ್ರಿ; ಇಂದು…?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ Stoney Brook ಹೋಟೆಲ್‌ನ D-Boss Safari ಜಾಗದಲ್ಲಿ ಪಾರ್ಟಿಯ ಮರು ಚಿತ್ರಣ ರೇಣುಕಾಸ್ವಾಮಿಗೆ ಹಲ್ಲೆ…

1 hour ago

ಕಲೆಗಾಗಿ ಸರ್ಕಾರಿ ಕೆಲಸ ಬಿಟ್ಟ ಕಲಾವಿದೆ!

ಕೇಶವ ಎಂ. ವರ್ಲಿ ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಅನಸೂಯ; ಬುಡಕಟ್ಟು ಜನರ ಜೀವನ, ಸಂಸ್ಕೃತಿ ಅನಾವರಣ ಮೈಸೂರು: ಸರ್ಕಾರಿ ಹುದ್ದೆಗಿಟ್ಟಿಸಿಕೊಳ್ಳಲು ಚಾತಕ…

2 hours ago

ಗಿರಿಜನರಿಗೆ ಸಿಗುತ್ತಿಲ್ಲ ಪೌಷ್ಟಿಕ ಆಹಾರ ಕಿಟ್

ಕೃಷ್ಣ ಸಿದ್ದಾಪುರ ಟೆಂಡರ್ ವಿಳಂಬದಿಂದ ೯,೫೦೦ ಕುಟುಂಬಗಳಿಗೆ ಸಂಕಷ್ಟ; ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ  ಸಿದ್ದಾಪುರ: ಕೊಡಗು ಜಿಲ್ಲೆಯ ಹಾಡಿ…

2 hours ago

ಜಿಪಂ ಮೀಸಲಾತಿ; ಎಲ್ಲ ಸಮುದಾಯದವರಿಗೂ ಅವಕಾಶ

ಮಂಜುಕೋಟೆ ಕೋಟೆ: ಪ್ರಥಮ ಬಾರಿಗೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ತಲಾ ೨ ಸ್ಥಾನಗಳು ಹಂಚಿಕೆ  ಎಚ್.ಡಿ.ಕೋಟೆ: ಏಳು ವರ್ಷಗಳ…

2 hours ago