ಮೈಸೂರು : ಉದ್ಯೋಗಿಗಳು, ಸ್ಥಿತಿವಂತರು ಮಾತ್ರ ಹಿಮಾಲಯ ಪರ್ವತಾರೋಹಣ ನಡೆಸಲಿದ್ದಾರೆ ಎನ್ನುವ ಮನಸ್ಥಿತಿಯಲ್ಲಿರುವಾಗ ನಗರದ ಟೈಗರ್ ಅಡ್ವೆಂಚರ್ ಫೌಂಡೇಷನ್ ಪೌರಕಾರ್ಮಿಕ ಮಕ್ಕಳು ಹಾಗೂ ಆದಿವಾಸಿ ಮಕ್ಕಳನ್ನು ಸಾಹಸಯಾತ್ರೆಗೆ ಕರೆದೊಯ್ಯಲು ಸಿದ್ಧವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಚಾರಣ ಕೈಗೊಂಡ ಟೈಗರ್ ಅಂಡ್ವೆಂಚರ್ ಫೌಂಡೇಷನ್ 22 ಜನರಿರುವ ತಂಡದೊಂದಿಗೆ ಇದೇ ಏ.23ಕ್ಕೆ ಹೊರಟು ಮೇ 8 ರವರಗೆ ಹಿಮಾಲಯ ಪರ್ವತಾರೋಹಣ ನಡೆಸಲಿದೆ.
ತಂಡಕ್ಕೆ ಜೂನೂನ್ 2025 ಎಂದು ಹೆಸರಿಡಲಾಗಿದೆ. ತಂಡದ ನಾಯಕ ಅನಿಲ್ ಕುಮಾರ್ ನಾಯಕತ್ವದಲ್ಲಿ ಮಕ್ಕಳು ಚಾರಣ ನಡೆಸಲಿದ್ದಾರೆ.
ಚಾರಣದಲ್ಲಿ 8 ಪೌರಕಾರ್ಮಿಕರ ಮಕ್ಕಳು, ಇಬ್ಬರು ಮಾವುತರು, ಇಬ್ಬರು ಗಸ್ತು ಅರಣ್ಯ ಪಾಲಕರು ಸೇರಿ 22 ಮಂದಿ ಇರಲಿದ್ದಾರೆ.
ಸುಮಾರು 15 ಸಾವಿರ ಅಡಿಗಳ ಎತ್ತರದಲ್ಲಿರುವ ಮೌಂಟ್ ಪಾಂಗರ್ ಚುಲ್ಲ ಎಂಬ ಜಾಗಕ್ಕೆ ಚಾರಣದ ಗುರಿ ಇಟ್ಟು ಮಕ್ಕಳು ಹೊರಟಿದ್ದಾರೆ .
ಮೊದಲ ಬಾರಿಗೆ ವಿಮಾನ ಏರಿ ಹೋಗುತ್ತಿದ್ದೇವೆ. ಜೀವನದಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಗುಣಗಳನ್ನು ಬೆಳೆಸಿಕೊಳ್ಳಲು ಇದು ಸಹಾಯವಾಗಲಿದೆ. ನಮ್ಮ ಜೀವನದ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಾದರೆ ಇಂತಹ ಸಾಹಸಗಳು ಮುಖ್ಯ. ಧೈರ್ಯವಾಗಿ ಮುನ್ನುಗ್ಗುವ ಗುರಿ ಇದೆ. ಎಲ್ಲಾ ಅನುಭವಗಳು ಹೇಗಿರಲಿದೆ ಎಂಬ ಕುತೂಹಲ ನಮಗೂ ಇದೆ ಎಂದು ಮಕ್ಕಳು ಸಂತಸ ವ್ಯಕ್ತಪಡಿಸಿದರು.
ನವದೆಹಲಿ : ಇರಾನ್-ಅಮೆರಿಕ ಉದ್ವಿಗ್ನತೆಯ ನಡುವೆ ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಸೂಪರ್ ಟ್ಯಾಂಕರ್ ಮೇಲೆ ಇರಾನಿಯನ್ ಗನ್‌ಬೋಟ್‌ಗಳಿಂದ…
ಟೆಹ್ರಾನ್ : ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್, ತನ್ನ ನಿರ್ಧಾರವನ್ನು…
ಬೆಂಗಳೂರು : ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆ ಮಂಚದಡಿ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ…
ಬೆಂಗಳೂರು : ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ…
ಬೆಂಗಳೂರು- ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. ಕೇಂದ್ರ ಸರ್ಕಾರ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದನ್ನು ಮಹಿಳಾ ಮೀಸಲಾತಿಯೊಂದಿಗೆ…
ಉಡುಪಿ: ಶ್ರೀಕೃಷ್ಣ ಮಂದಿರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಭೇಟಿ ನೀಡಿದರು. ಅವರ ಜನ್ಮದಿನದ ಪ್ರಯುಕ್ತ ಕೆಲವು…