ಚೆನ್ನೈ: ಕೆಲಸ ಕೊಡಿಸುವುದಾಗಿ ನಂಬಿಸಿ ಮೈಸೂರು ಮೂಲದ 19 ವರ್ಷದ ಯುವತಿಯೊರ್ವಳ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಈ ಘಟನೆ ಸಂಬಂಧ ಚೆನ್ನೈ ಪೊಲೀಸರು ಆರೋಪಿ ಹಾಗೂ ಸಹಚರಳನ್ನು ಬಂಧಿಸಿದ್ದಾರೆ. ವೆಲ್ಲೂರು ಮೂಲದ ಸತೀಶ್(32) ಬಂಧಿತ ಆರೋಪಿ. ಈತನ ಸಹಚರೆ ಎನ್ನಲಾದ ಮಡಿಪಾಕ್ಕಾಂ ಮೂಲದ ಶಕೀಲಾ(33) ಎಂಬಾಕೆಯನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸತೀಶ್ ಲಾರಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತಿದ್ದ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ವಿವರ:
ಯುವತಿಯು ತನ್ನ ತಂದೆ ತಾಯಿಯನ್ನು ಕೊಯಮ್ಮತ್ತೂರಿನಲ್ಲಿ ಬಿಟ್ಟು. ಉದ್ಯೋಗ ಹರಸಿ ಚೆನ್ನೈಗೆ ಬಂದಿದ್ದಳು. ಚೆನ್ನೈನ ಕೋವಿಲಂಬಾಕ್ಕಂನಲ್ಲಿರುವ ಸ್ನೇಹಿತರ ಮನೆಗೆ ತೆರಳಿದ್ದಳು. ಯುವತಿ ಬಳಿಕ ಮೈಸೂರಿಗೆ ಹೋಗಬೇಕೆಂದು ನಿರ್ಧರಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು.
ಈ ವೇಳೆ ವ್ಯಕ್ತಿಯೊರ್ವ ಯುವತಿಯನ್ನು ಪರಿಚಯ ಮಾಡಿಕೊಂಡು, ನಿನಗೆ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಅಲ್ಲದೇ, ಕೆಲಸ ಸಿಗುವವರೆಗೂ ತನ್ನ ಸ್ನೇಹಿತೆಯ ಮನೆಯಲ್ಲಿ ಇರುವಂತೆ ಹೇಳಿದ್ದನು. ಇದನ್ನೇ ನಂಬಿದ ಯುವತಿ ವ್ಯಕ್ತಿ ಹೇಳಿದ ಅರುಂಬಕ್ಕಂನಲ್ಲಿರುವ ಮನೆಯೊಂದಕ್ಕೆ ತಂಗಲು ಹೋದಳು.
ಆದರೆ, ಅಲ್ಲಿಗೆ ತಲುಪಿದ ಬಳಿಕ ಮನೆ ಬಾಗಿಲು ಹಾಕಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಆರೋಪಿಯ ಗೆಳತಿ ಶಕೀಲಾ ಕೂಡ ಅಲ್ಲಿಯೇ ಇದ್ದಳು ಎನ್ನಲಾಗಿದೆ.
ನಂತರ ಸಂತ್ರಸ್ತೆ ಯುವತಿಯು ಮೊಬೈಲ್ ಮೂಲಕ ಪೊಲೀಸ್‌ರನ್ನು ಸಂಪರ್ಕಿಸಿ, ತನ್ನ ಮೇಲೆ ನಡೆದ ಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಅಂತಯೇ, ಕೊಯಂಬೆಡು ಮಹಿಳಾ ಪೊಲೀಸರು ಬಂದು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ.
ಯುವತಿ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ದುರುಳ ಆರೋಪಿಗಳನ್ನು ಬಂಧಿಸಿದ್ದಾರೆ.
ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…
ಶಿವಮೊಗ್ಗ: ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…
ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…