ಮೈಸೂರು: ದಸರಾ ಹಬ್ಬದ 9ನೇ ದಿನದಂದು ಮೈಸೂರು ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ, ಚಂಡಿಕಾ ಹೋಮ ಸಂಪನ್ನಗೊಂಡಿತು. ರಾಜವಂಶಸ್ಥ ಯದುವೀರ್ ಒಡೆಯರ್ ಸಾಂಪ್ರದಾಯಿಕ ಪೂಜೆಯನ್ನ ನೆರವೇರಿಸಿದರು. ರಾಜ ವಂಶಸ್ಥರು ಪಟ್ಟದ ಆನೆ, ಹಸು, ಕುದುರೆ, ಒಂಟೆ, ಪಲ್ಲಕ್ಕಿ ಹಾಗೂ ಅವರು ಬಳಸುವ ಅದ್ಧೂರಿ ಕಾರುಗಳಿಗೆ ಪೂಜೆ ಸಲ್ಲಿಸಿದರು.
ನಾಡಹಬ್ಬ ದಸರಾದ 9ನೇ ದಿನ ಆಯುಧ ಪೂಜೆ ಕೈಂಕರ್ಯಗಳು ಅಂಬಾವಿಲಾಸ ಅರಮನೆಯಲ್ಲಿ ಸುಸೂತ್ರವಾಗಿ ನೆರೆವೇರಿತು. ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಸಾಂಪ್ರದಾಯಿಕ ಪೂಜೆಯನ್ನ ನೆರವೇರಿಸಿದರು. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಪೂಜಾ ವಿಧಿವಿಧಾನ 12.30ಕ್ಕೆ ಅಂತ್ಯವಾಯಿತು.
ಬೆಳಗ್ಗೆಯಿಂದಲೇ ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನ ಆಯುಧ ಪೂಜೆ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗ್ಗೆ 6 ರಿಂದ ಚಂಡಿಕಾ ಹೋಮ ನಡೆದು 9 ಗಂಟೆಗೆ ಹೋಮ ಪೂರ್ಣಾಹುತಿ ಆಯಿತು. 10.30 ರ ಸುಮಾರಿಗೆ ಮತ್ತೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಆನೆ ಬಾಗಿಲಿಗೆ ತರಲಾಗುತ್ತದೆ. ಆ ನಂತರ ಆನೆ ಬಾಗಿಲಿನ ಮೂಲಕ ಕಲ್ಯಾಣ ಮಂಟಪದ ಒಳಗೆ ತೆರಳಿ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ನಂತರ ರಾಜ ವಂಶಸ್ಥರು ಪಟ್ಟದ ಆನೆ, ಹಸು, ಕುದುರೆ, ಒಂಟೆ, ಪಲ್ಲಕ್ಕಿ ಹಾಗೂ ಅವರು ಬಳಸುವ ಅದ್ಧೂರಿ ಕಾರುಗಳಿಗೆ ಪೂಜೆ ಸಲ್ಲಿಸಿದರು.
ಮತ್ತೊಂದೆಡೆ ಅಜ್ಜಿ ಪ್ರಮೋದಾದೇವಿ ಒಡೆಯರ್ ಜೊತೆ ಯದುವೀರ್ ಪುತ್ರ ಆದ್ಯವೀರ್ ಅಪ್ಪ ಮಾಡಿದ ಪೂಜೆಯನ್ನ ಅರಮನೆ ಮೇಲಿನಿಂದ ವೀಕ್ಷಣೆ ಮಾಡಿದರು.. ಅರ್ಧ ಗಂಟೆಗೂ ಹೆಚ್ಚು ಕಾಲ ವಿಧಿವಿಧಾನವನ್ನ ನೋಡಿದ್ರು. ಆದ್ಯವೀರ್ ನಗು ಎಲ್ಲರ ಮನಸೂರೆ ಗೊಂಡಿತು.
ಮೈಸೂರು: ಎಸೆನ್ಸ್ ಸೇವನೆಯಿಂದಲೇ ಮೂವರು ಕೈದಿಗಳು ಸಾವು ಎಂದು ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಕೆ.ಆರ್.ಆಸ್ಪತ್ರೆಯ ವೈದ್ಯ ದಿನೇಶ್ ಹೇಳಿದ್ದಾರೆ. ಈ…
ತಿರುಪತಿ: ತಿರುಪತಿಯಲ್ಲಿ ಭಾರೀ ಪ್ರಮಾಣದ ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು,…
ಬೆಂಗಳೂರು: ಸಾರಿಗೆ ಸಂಸ್ಥೆಯು ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದೆ. ನಾಳೆಯಿಂದಲೇ…
ಬೆಂಗಳೂರು: ಹಿಂಸಾಮಾರ್ಗವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ನಿರ್ಧರಿಸಿರುವ ನಕ್ಸಲ್ ಚಳುವಳಿಗಾರರನ್ನು ಸ್ವಾಗತಿಸುತ್ತೇನೆ. ಇವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸುವ…
ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಸುವರ್ಣ…
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಒಡೆಯಲಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು…