ಮೈಸೂರು : ಐಟಿ ದಿಗ್ಗಜರ ಟ್ವೀಟ್‌ಗಳಿಗೆ ಕಿಡಿಕಾರಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಒಂದೆರಡು ರಸ್ತೆಗಳು ಗುಂಡಿ ಬಿದ್ದಿದ್ದನ್ನು ಇಟ್ಟುಕೊಂಡು ಇಮೇಜ್ ಕೆಡಿಸುವ ರಾಜಕಾರಣ ಮಾಡಬೇಡಿ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ನಾನು ಯಾರು ಎಂದು ಬಾಯಿ ಬಿಟ್ಟು ಹೇಳುತ್ತಿಲ್ಲ ಅಷ್ಟೇ ಎಂದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ರಸ್ತೆಗಳು ಹಾಳಾಗಿರುವುದು ಸತ್ಯ. ರಸ್ತೆಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಟ್ವೀಟ್‌ಗಳನ್ನು ಮಾಡಬೇಡಿ. ಯಾರು ಏನೇ ಮಾಡಿದರೂ ಬ್ರಾಂಡ್ ಬೆಂಗಳೂರಿನ ಇಮೇಜ್ ಕೆಡಿಸಲು ಸಾಧ್ಯವಿಲ್ಲ. ಗೂಗಲ್ ಕಂಪೆನಿ ಆಂಧ್ರಪ್ರದೇಶಕ್ಕೆ ಹೋಗಲು ಅವರದ್ದೇ ಆದ ಕೆಲವು ಕಾರಣಗಳು ಇವೆ. ಇದೇ ಕಾರಣಗಳಿಗೆ ಅವರು ಹೋಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನುಡಿದರು. ಐಟಿ-ಬಿಟಿ ಪ್ರದೇಶಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ. ಎಲ್ಲವನ್ನೂಸರಿಪಡಿಸುತ್ತೇವೆ ಎಂದರು.
ಇದನ್ನು ಓದಿ: ಪ್ರಿಯಾಂಕ ಖರ್ಗೆಗೆ ಬೆದರಿಕೆ : ಸರ್ಕರ ಗಂಭೀರವಾಗಿ ಪರಿಗಣಿಸಿದೆ ಎಂದ ಹೋಂ ಮಿನಿಸ್ಟರ್
ವಿರೋಧ ಪಕ್ಷಗಳ ಶಾಸಕರಿಗೆ ಅನುದಾನ ತಾರತಮ್ಯ ಮಾಡಿಲ್ಲ. ಹೈಕೋರ್ಟ್‌ಗೆ ರಿಟ್ ಸಲ್ಲಿಕೆ ವಿಚಾರ ಗೊತ್ತಿಲ್ಲ. ಎಲ್ಲರಿಗೂ ಅನುದಾನ ಕೊಡುತ್ತಿದ್ದೇವೆ. ಮುಖ್ಯಮಂತ್ರಿಗಳು ಎಲ್ಲರಿಗೂ ೫೦ ಕೋಟಿ ರೂ. ಅನುದಾನ ನೀಡಿದ್ದಾರೆ. ಅವರಿಗೂ (ಪ್ರತಿ ಪಕ್ಷ) ೨೫ ಕೋಟಿ ರೂ. ಅನುದಾನ ನೀಡಿದ್ದಾರೆ. ಬಿಜೆಪಿಯವರು ಅಽಕಾರದಲ್ಲಿದ್ದಾಗ ಏನು ಮಾಡಿದರು ಅಂತ ನೆನಪು ಮಾಡಿಕೊಳ್ಳಬೇಕು. ಈ ಹಿಂದೆ ನಮಗೆ ಕೇವಲ ೫ ಕೋಟಿ ರೂ. ಅನುದಾನ ಕೊಟ್ಟಿದ್ದರು. ಅದನ್ನು ಅವರು ಮರೆಯಬಾರದು. ಹೀಗಿದ್ದರೂ ನಾವು ಯಾರಿಗೂ ತಾರತಮ್ಯ ಮಾಡುತ್ತಿಲ್ಲ. ಲೋಕೋಪಯೋಗಿ ಇಲಾಖೆ ಸೇರಿದಂತೆ ಹಂತ ಹಂತವಾಗಿ ಎಲ್ಲರಿಗೂ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರು, ಕರ್ನಾಟಕಕ್ಕೆ ತನ್ನದೇ ಆದ ಎಕೋ ಸಿಸ್ಟಂ ಇದೆ. ಇಲ್ಲಿನ ಮಾನವ ಸಂಪನ್ಮೂಲ, ಮೂಲ ಸೌಕರ್ಯ, ತಂತ್ರಜ್ಞಾನ ನೋಡಿ ಕೈಗಾಗಿಕೆಗಳು ಬರುತ್ತಿವೆಯೇ ಹೊರತು, ರಸ್ತೆಗಳನ್ನು ನೋಡಿ ಬರುವುದಿಲ್ಲ. ಉದ್ಯಮಿಗಳು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ೧೦ ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಸಹಿ ಹಾಕಿದ್ದಾರೆ. ಬೆಂಗಳೂರು ಕೈಗಾರಿಕೆಗಳಿಗೆ ಸೂಕ್ತವಲ್ಲದಿದ್ದರೆ ಇಷ್ಟು ದೊಡ್ಡ ಮಟ್ಟದ ಹೂಡಿಕೆ ಆಗುತ್ತಿರಲಿಲ್ಲ. ರಸ್ತೆ ಹಾಳಾಗಿರುವುದು ನಿಜ. ಈ ಬಗ್ಗೆ ಸಿಎಂ, ಡಿಸಿಎಂ ಪ್ರದಕ್ಷಿಣೆ ಮಾಡಿ ರಿಪೇರಿ ಮಾಡಲು ಹಣ ಬಿಡುಗಡೆ ಮಾಡಿದ್ದಾರೆ. ಕೆಲಸವೂ ನಡೆಯುತ್ತಿದೆ. ಯಾರು ಪ್ರತಿಕ್ರಿಯೆ ನೀಡುತ್ತಾರೆ ಅವರಿಗೆ ಕರ್ನಾಟಕದಿಂದ ಕೈಗಾರಿಕೆಗಳು ಹೋಗಬಾರದು ಎಂಬ ಅರಿವಿರಬೇಕು ಎಂದರು.
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…
ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.…
ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ…
ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ…
ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…