ಮೈಸೂರು

ಬಿಜೆಪಿಯವರು ರಾಜ್ಯವನ್ನು ಉತ್ತರಕ್ಕೆ ಮಾರಲು ಹೊರಟಿದ್ದಾರೆ : ಹೆಚ್.ವಿಶ್ವನಾಥ್‌

ಮೈಸೂರು : ಬಿಜೆಪಿಯವರು ರಾಜ್ಯವನ್ನು ಉತ್ತರಕ್ಕೆ ಮಾರಲು ಹೊರಟಿದ್ದಾರೆ. ಅದನ್ನು ತಡೆಯಲು ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್‌ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೆಹಲಿಯ ದೇಶದ ಎಲ್ಲಾ ಕಾರುಬಾರುಗಳನ್ನು ನಿಲ್ಲಿಸಿ 2 8ರ್ಯಾಲಿಗಳನ್ನುಮಾಡಿದರು.

ಚುನಾವಣೆಗೋಸ್ಕರ, ವೋಟಿಗೋಸ್ಕರ ಇಲ್ಲಿ ಬಂದು ಕ್ಯಾಂಪ್ ಮಾಡಿದರು. ಬಹುಶಃ ನಾನು 40ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ಇರೋನು. ಯಾವ ಪ್ರಧಾನಮಂತ್ರಿಗಳೂ ಇಂತಹ ಯಾವುದೇ ಚುನಾವಣೆಗಳಿಗೂ ಇಷ್ಟೊಂದು ಸಮಯ ಕಳೆದಿರಲಿಲ್ಲ.

ಬೆಂಗಳೂರಿನಲ್ಲಿ ಒಂದು ಸಭೆ ಆಗ್ತಾ ಇತ್ತು, ಹುಬ್ಬಳ್ಳಿಯಲ್ಲಿ ಒಂದು ಸಭೆ ಆಗ್ತಾ ಇತ್ತು. ಅಷ್ಟೇ. ಆದರೆ ಇವತ್ತು ಮೋದಿಯವರು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಅವರ ರೋಡ್ ಶೋ, ಫ್ಯಾಷನ್ ಶೋ ತರ ಆಗೋಗಿತ್ತು. ನನ್ನತ್ರ ಯಾವ ಯಾವ ಪೇಟ ಇದ್ದಾವೆ, ಯಾವ ಯಾವ ಕನ್ನಡಕ ಇದ್ದಾವೆ, ವೆಸ್ಟ್ ಕೋಸ್ಟ್ ಇದ್ದಾವೆ, ಯಾವ ತರ ಡ್ರೆಸ್ ಇದೆ ಅಂತ ಫ್ಯಾಷನ್ ಶೋ ತರ ರೋಡ್‌ ಶೋ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರ್ಯಾಲಿಯಲ್ಲಿ ಜನ ತಂದಂತಹ ಜನವೇ ಹೊರತು, ಬಂದಂತಹ ಜನ ಅಲ್ಲ . ಎಲ್ಲ ಪಕ್ಷದಲ್ಲೂ ತಂದಂತಹ ಜನರೇ ಇರ್ತಾರೆ. ಇದೊಂದೇ ಪಕ್ಷ ಅಂತ ಅಲ್ಲ. ಮುಗಿಬೀಳ್ತಾರೆ ಜನ ಎನ್ನುತ್ತಿದ್ದರಲ್ಲ, ಮುಗಿ ಬೀಳೋ ಜನ ಯಾರು ಇರ್ಲಿಲ್ಲ. ತಂದಂತಹ ಜನ. 500 ರೂ.,ವಾಹನ, ಹೂ ನಮ್ಮದೇ, ಜನರದ್ದಲ್ಲ, ಆದರೆ ಎರಚೋರು ಮೋದಿಯವರು. ಹಾಗೆ ಒಂಥರಾ ಮಾಕರಿ, ಬೇಕಿತ್ತಾ ಇದು. ಇಷ್ಟೊಂದು ಭಾಷಣಗಳನ್ನು ಮಾಡಿದರಲ್ಲ,

ಏನಾದರೂ ಒಂದು ಕರ್ನಾಟಕ ರಾಜ್ಯಕ್ಕೆ ನಾನು ಏನು ಕೊಟ್ಟಿದ್ದೇನೆ, ಏನು ಕೊಡುತ್ತೇನೆ ಅಂತ ಹೇಳಿದ್ದೀರಾ? ಎಲ್ಲೂ ಹೇಳಿಲ್ಲ. ಮತ್ತೆ ಯಾತಕ್ಕಾಗಿ ಬಂದ್ರಿ? ವೋಟಿಗಾಗಿ ಅಷ್ಟೇನಾ? ಬಂದ್ರಿ, ಹೋದ್ರಿ, ಬಂದು ಹೋಗಿದ್ದು ನೋಡಿದರೆ ಬಬ್ರುವಾಹನ ಸಿನೀಮಾದಲ್ಲಿ ʼಬೊಬ್ಬಿರಿದು ಅಬ್ಬರಿಸಿʼ ಇಲ್ಲಿ ಯಾರಿಗೂ ಹೆದರಿಕೆ ಇಲ್ಲ ಅಂದಹಾಗೆ ಆಯಿತು.

ನೀವು ಏನೇ ಅಬ್ಬರಿಸಿದರೂ ಕೂಡ ಇಲ್ಲಿ ಕಷ್ಟ ಇದೆ ಬಿಜೆಪಿಗೆ. ನಮ್ಮ ರಾಜ್ಯದ ಮುಖರಹಿತ ಮುಖಹೇಡಿ ಬಿಜೆಪಿಯವರನ್ನು ಹಿಂದೆ ನಿಲ್ಲಿಸಿಕೊಂಡು ತಾವು ಮುಂದೆ ನಿಂತ್ರಿ ಪಾಪ. ಇವರಿಗೆ ಮುಖ ಇಲ್ಲ ನೋಡಿ, ವೋಟ್ ಕೇಳೋಕೂ ಮುಖ ಇಲ್ಲ, ಜನರ ಮುಂದೆ ಬರೋಕೂ ಮುಖ ಇಲ್ಲ. ಯಾಕೆಂದರೆ ಚಾರಿತ್ರಿಕ ಭ್ರಷ್ಟಾಚಾರ ಹೊತ್ತಂತಹ ಸರ್ಕಾರ ಇಲ್ಲಿರತಕ್ಕಂತದ್ದು. ಕರೆಪ್ಷನ್ ಹಬ್ ಕರ್ನಾಟಕ ಎಂದು ವಾಗ್ದಾಳಿ ನಡೆಸಿದರು.

ಬಸವರಾಜ ಬೊಮ್ಮಾಯಿಯಷ್ಟು ಸುಳ್ಳುಗಾರ ಯಾರು ಇಲ್ಲ. ಕಾಂಗ್ರೆಸ್ ಕರ್ನಾಟಕದಲ್ಲಿ ಬಹಳಷ್ಟು ಸಾಲ ಮಾಡಿ ಹೋಗಿದೆ. ನಾನು ತೀರಿಸುತ್ತೇನೆ ಅಂತಾರೆ. ಅಯ್ಯೋ ನಾವು ಅಲ್ಲೆ ಇದ್ವಲ್ಲಪ್ಪ ನಿನ್ನ ಜೊತೆ, ನಿನ್ನ ತಂದವರು ಯಾರು? 2018ರಲ್ಲಿ ಇದ್ದಂತಹ ಸಾಲ 2.45ಲಕ್ಷ ಕೋಟಿ, ನಿಮಗೆ ಕೊಡುವಂತಹ ಸಂದರ್ಭದಲ್ಲಿ ಇತ್ತು. ಈಗ 5.40ಲಕ್ಷ ಕೋಟಿ ಆಗಿದೆ. ಯಾರು ಸ್ವಾಮಿ ಸಾಲ ಮಾಡಿದೋರು, ಎಲ್ಲ ಮಾಡಿ, ಮಾಡಿ ನಾವು ಸತ್ಯವಂತರು ಅಂತ ಹೇಳೋಕೆ ಬರ್ತಿರಲ್ಲ, ಯಾರೂ ಒಪ್ಪಲ್ಲ. ಏನೂ ಆಗಲ್ಲ. ಕರ್ನಾಟಕದ ಬ್ಯಾಂಕ್ ಗಳನ್ನು ಉತ್ತರಕ್ಕೆ ತಗೊಂಡು ಹೊರಟುಹೋದ್ರಿ, ಜನರಿಗೆ ಇವೆಲ್ಲ ಅರ್ಥ ಆಗುತ್ತಿಲ್ಲವಾ? ಬಿಜೆಪಿಯವರು ರಾಜ್ಯವನ್ನು ಉತ್ತರಕ್ಕೆ ಮಾರಲು ಹೊರಟಿದ್ದಾರೆ. ಅದನ್ನು ತಡೆಯಲು ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ನಮ್ಮ ಬ್ಯಾಂಕ್ ಗಳು ಹೋಯ್ತು, ನಮ್ಮ ಜಿಎಸ್ ಟಿ ಹೋಯ್ತು, ನಮ್ಮ ಶಾಲೆಗಳು ಹೋದವು, ಅದನ್ನು ತಡೆಯಲಿಕ್ಕಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ಈ ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು.

ಕೇಂದ್ರದಿಂದ ಈ ರಾಜ್ಯದ ಜನರಿಗೆ ಏನೆಲ್ಲ ಅನ್ಯಾಯವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಡಬ್ಬಲ್ ಇಂಜಿನ್ ದು ಈ ಕಥೆಯೆಲ್ಲ, ಸಿಂಗಲ್ ಇಂಜಿನ್ ಎಷ್ಟು ಚೆನ್ನಾಗಿದ್ದಾವೆ. ಕೇರಳ ನಂಬರ್ 2 ಇನ್ ದ ನ್ಯಾಷನಲ್ ಇಂಡೆಕ್ಸ್ ಡೆವಲಪ್ ಮೆಂಟ್ , ನಮ್ಮದೆಷ್ಟು 30, ಗುಜರಾತ್ ಎಷ್ಟು 33, ನಿಮ್ಮದು ಡಬ್ಬಲ್ ಇಂಜಿನ್ ಎಷ್ಟು ವರ್ಷ ಇದೆ ಸ್ವಾಮಿ ಗುಜರಾತ್ ನಲ್ಲಿ? ಹಾಗಾಗಿ ಇವೆಲ್ಲ ಸುಮ್ಮನೆ ಅನಾವಶ್ಯಕವಾಗಿ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಎಂದರು.

lokesh

Recent Posts

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…

2 hours ago

ಹಲವು ಹೊಸ ದಾಖಲೆಗಳಿಗೆ ಷರಾ ಬರೆದ 2025

ಗಿರೀಶ್‌ ಹುಣಸೂರು  ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…

2 hours ago

ಸಫಾರಿ ನಿರ್ಬಂಧ: ಮೈಸೂರಿನತ್ತ ಪ್ರವಾಸಿಗರ ದಂಡು

ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…

2 hours ago

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

10 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

14 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

14 hours ago