ಮೈಸೂರು : ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಗಳಿಸಿದ್ದ, ತನ್ನ 4 ಅಡಿ ಉದ್ದದ ದಂತ ಹಾಗೂ ತನ್ನದೇ ವಿಶೇಷ ನಡಿಗೆಯ ಮೂಲಕ ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರಿಗೆ ಸಾಕಷ್ಟು ಆಕರ್ಷಣೆಯಾಗಿದ್ದ ಭೋಗೇಶ್ವರ ಆನೆ (60 ವರ್ಷ) ಇಂದು ಮೃತಪಟ್ಟಿದೆ.
ಹೌದು ರಾಜ ಗಾಂಭೀರ್ಯದ ನಡಿಗೆಯ ಮೂಲಕ ಹೆಸರುವಾಸಿಯಾಗಿದ್ದ ಭೋಗೇಶ್ವರ ಆನೆಯ ಕಳೆಬರವು ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಅತ್ಯಂತ ಹಿರಿಯ ಆನೆ ಇದಾಗಿದ್ದು ವಯೋಸಹಜವಾಗಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.