ಮೈಸೂರು

ಪ್ರತಿಭಟನೆಗೆ ಸೀಮಿತವಾದ ಭಾರತ್‌ ಬಂದ್‌

ಮೈಸೂರು : ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟ ಕರೆ ನೀಡಿದ ರಾಷ್ಟ್ರವ್ಯಾಪ್ತಿ ಭಾರತ್‌ ಬಂದ್‌ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ,ಕೊಡಗು ಜಿಲ್ಲೆಗಳು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಸೀಮಿತವಾಗಿತ್ತು.

ಭಾರತ್‌ ಬಂದ್‌ ಇದ್ದರೂ ಕೂಡೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂಗಡಿ ಮಳಿಗೆಗಳು ತೆರೆದಿದ್ದವು. ಆಟೋ-ಬಸ್‌ಗಳು ರಸ್ತೆಗಿಳಿದಿದ್ದವು. ಬಹುತೇಕ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು.

ಹಲವಾರು ಚಳವಳಿಗಳ ಮೂಲಕ ಗಮನ ಸೆಳೆದಿದ್ದ ಮೈಸೂರಿನಲ್ಲಿ ಬುಧವಾರ ಸಾರ್ವತ್ರಿಕ ಮುಷ್ಕರ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಗೆ ಮಾತ್ರ ಸೀಮಿತವಾಯಿತು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನ ಮೈದಾನದಲ್ಲಿ ಕಾರ್ಮಿಕ ಸಂಘಟನೆಗಳು ಜಂಟಿ ಸಮಿತಿಯು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ಬಂದ್‌ಗೆ ಮೈಸೂರಿನ ಪ್ರತಿಕ್ರಿಯೆ ಹೀಗಿತ್ತು…

ಬ್ಯಾಂಕ್‌ಗಳಲ್ಲಿ ಆರ್‌ಟಿಜಿಎಸ್ ಮೂಲಕ ಹಣ ಸಂದಾಯ ಮಾಡುವುದರಲ್ಲಿ ವ್ಯತ್ಯಯ ಬಿಟ್ಟರೆ ಬೇರೇನೂ ಸಮಸ್ಯೆಗಳು ಕಂಡುಬರಲಿಲ್ಲ. ಎಟಿಎಂಗಳಲ್ಲಿ ಸಾಕಷ್ಟು ಹಣವನ್ನು ಲೋಡ್ ಮಾಡಿರುವುದರಿಂದ ಗ್ರಾಹಕರಿಗೆ ಮುಷ್ಕರದ ಬಿಸಿ ತಟ್ಟಲಿಲ್ಲ. ನಗರ, ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸಂಚಾರ ಎಂದಿನಂತೆ ಇದ್ದರೆ, ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪಾಠವಪ್ರವಚನ ನಡೆಯಿತು.

ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ವೈದ್ಯರು ರೋಗಿಗಳ ತಪಾಸಣೆ ಮಾಡಿದರೆ, ಅಂಚೆ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಿತು. ರೈಲ್ವೆ ನಿಲ್ದಾಣದಲ್ಲಿ ಎಂದಿನಂತೆ ರೈಲುಗಳು ಓಡಾಡಿದರೆ, ನಗರದ ಹೃದಯ ಭಾಗದ ಎಲ್ಲಾ ರಸ್ತೆಗಳಲ್ಲಿ ಜನಜಂಗುಳಿ, ವಾಹನಗಳ ಓಡಾಟ ಮಾಮೂಲಿಯಂತೆ ಇದ್ದರೆ, ಚಾಮರಾಜೇಂದ್ರ ಮೃಗಾಲಯ, ಅರಮನೆ ವೀಕ್ಷಿಸುವ ಕಾರ್ಯಕ್ಕೂ ಯಾವುದೇ ಅಡ್ಡಿಯಾಗಲಿಲ್ಲ.

ಒಟ್ಟಾರೆ ಯಾವುದೇ ಕಾನೂನುಭಂಗ ತರುವಂತಹ ಕೆಲಸ ನಡೆಯದೆ ಭಾರತ್‌ ಬಂದ್‌ ಪ್ರತಿಭಟನೆಗೆ ಸೀಮಿತವಾಗಿತ್ತು.

ಕೃಷ್ಣ ರಾಜೇಂದ್ರ ಆಸ್ಪತ್ರೆ ಒಪಿಡಿ ಎಂದಿನಂತೆ ತೆರೆದು ರೋಗಿಗಳನ್ನು ತಪಾಸಣೆ ಮಾಡುತ್ತಿರುವ ದೃಶ್ಯ.

 

ಸಯ್ಯಾಜಿರಾವ್ ರಸ್ತೆಯಲ್ಲಿ ಮೆರವಣಿಗೆ ದೃಶ್ಯ ಕಂಡದ್ದು ಹೀಗೆ..

 

 

 

ಆಂದೋಲನ ಡೆಸ್ಕ್

Recent Posts

ಪತಿ ಮೃತಪಟ್ಟ ಮಾರನೇ ದಿನವೇ ಕರ್ತವ್ಯಕ್ಕೆ ಹಾಜರಾದ ಶಿಕ್ಷಕಿ!

ಎಚ್‌.ಡಿ.ಕೋಟೆ : ಪತಿ ಮೃತಪಟ್ಟ ಮಾರನೇ ದಿನವೇ ಶಿಕ್ಷಕಿಯೊಬ್ಬರು ಶಾಲೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಂಪಾಪುರ ಸಮೀಪದ…

17 mins ago

ದೇಶದಲ್ಲಿ ಸಾಕಷ್ಟು ತೈಲ ದಾಸ್ತಾನು : ವಾಣಿಜ್ಯ ಅನಿಲ ಪೂರೈಕೆಯಲ್ಲಿ ಶೇ.70%ಕ್ಕೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಸಂಘರ್ಷದಿಂದಾಗಿ ಉಂಟಾದ ಅಂತರರಾಷ್ಟ್ರೀಯ ಅನಿಲ ಪೂರೈಕೆ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು…

30 mins ago

30 ಕೆಜಿ ಸಿಂಥೆಟಿಕ್‌ ಡ್ರಗ್ಸ್‌ ಪತ್ತೆ, ಇಬ್ಬರ ಬಂಧನ

ಮೈಸೂರು : ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್‌ ತಯಾರಿಕ ಘಟಕ ಮತ್ತು ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿತ್ತು. ಆದರೆ, ಇದೀಗ…

2 hours ago

ಹುಸಿ ಬಾಂಬ್ ಬೆದರಿಕೆ : ಮೈಸೂರಿನಲ್ಲಿ ಓರ್ವ ಬಂಧನ

ಮೈಸೂರು :  ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶಗಳನ್ನು ಕಳುಹಿಸಿ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿದ್ದ ಓರ್ವ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.…

3 hours ago

ಇಂದಿನಿಂದ ಐಪಿಎಲ್‌ ಹವಾ ; ಬೆಂಗಳೂರಲ್ಲೇ ಉದ್ಘಾಟನಾ ಪಂದ್ಯ

ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್‌ ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್…

5 hours ago

ಓದುಗರ ಪತ್ರ; ವಯೋಮಿತಿ ಸಡಿಲಿಕೆ ಸ್ವಾಗತಾರ್ಹ

ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…

6 hours ago