ಮೈಸೂರು

ಏಪ್ರಿಲ್‌ 1ರಿಂದ ಹೆಚ್ಚಳವಾಗಲಿದೆ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್‌ ದರ

ಮೈಸೂರು: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್‌ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಲಿದೆ. ಜತೆಗೆ ಏಪ್ರಿಲ್‌ 1ರಿಂದ ವಾಹನ ಸವಾರರು ಬೆಂಗಳೂರು – ಹೈದರಾಬಾದ್‌ ಹೆದ್ದಾರಿ ಹಾಗೂ ಬೆಂಗಳೂರು ಸ್ಯಾಟ್‌ಲೈಟ್‌ ಟೌನ್‌ ರಿಂಗ್‌ ರೋಡ್‌ನ ಹೊಸಕೋಟೆ – ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

ಇನ್ನು ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದಾಗಿನಿಂದ ಎರಡನೇ ಬಾರಿಗೆ ಟೋಲ್‌ ದರ ಹೆಚ್ಚಳವಾಗುತ್ತಿದೆ. ಕಳೆದ ಬಾರಿಯ ಏಪ್ರಿಲ್‌ನಲ್ಲಿ ಟೋಲ್‌ ಹೆಚ್ಚಳ ಮಾಡಲಾಗಿತ್ತು. ಬಳಿಕ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ಈ ನಿರ್ಧಾರವನ್ನು ಕೈಬಿಡಲಾಗಿತ್ತು. ನಂತರ ಜೂನ್‌ ತಿಂಗಳಿನಲ್ಲಿ ಶೇ.22ರಷ್ಟು ಟೋಲ್‌ ಹೆಚ್ಚಳ ಮಾಡಲಾಗಿತ್ತು.

ಸದ್ಯ ದರ ಪರಿಷ್ಕರಣೆ ಬಗ್ಗೆ ವಾಹನ ಸವಾರರಿಗೆ ಕರಪತ್ರಗಳನ್ನು ಹಂಚಲಾಗುತ್ತಿದ್ದು, ದರಪಟ್ಟಿ ಫಲಕಗಳನ್ನೂ ಸಹ ತಿದ್ದುಪಡಿ ಮಾಡಲಾಗುತ್ತಿದೆ. ನೂತನ ಪರಿಷ್ಕರಣೆಯಲ್ಲಿ ಶೇ.3ರಷ್ಟು ದರವನ್ನು ಹೆಚ್ಚಳ ಮಾಡಲಾಗಿದೆ. ಕಣಮಿಣಕೆ ಗ್ರಾಮದ ಬಳಿ ಇರುವ ಟೋಲ್‌ ಕೇಂದ್ರದ ಈಗಿನ ಶುಲ್ಕ ಮತ್ತು ಪರಿಷ್ಕೃತ ಶುಲ್ಕದ ವಿವರ ಈ ಕೆಳಕಂಡಂತಿದೆ..

ಪ್ರಸ್ತುತ ಟೋಲ್‌ ದರ ( ರೂಪಾಯಿಗಳಲ್ಲಿ )
ವಾಹನ                                                     ಏಕಮುಖ   ದ್ವಿಮುಖ
ಕಾರು                                                            165              250
ಲಘು ವಾಣಿಜ್ಯ ವಾಹನ                              270             405
ಟ್ರಕ್‌/ಬಸ್‌                                                   565             850
ಮೂರು ಆಕ್ಸೆಲ್‌ ವಾಣಿಜ್ಯ ವಾಹ                615             925
ನಿರ್ಮಾಣ ಯಂತ್ರಗಳು                               885           1330
ದೊಡ್ಡ ಗಾತ್ರದ ವಾಹನ                             1080         1620
4 ಅಥವಾ 6 ಆಕ್ಸೆಲ್‌ನ ಭಾರೀ ವಾಹನ       885           1330

ಪರಿಷ್ಕೃತ ದರ ( ರೂಪಾಯಿಗಳಲ್ಲಿ )
ವಾಹನ                                                         ಏಕಮುಖ    ದ್ವಿಮುಖ
ಕಾರು                                                                  170             255
ಲಘು ವಾಣಿಜ್ಯ ವಾಹನ                                   275             415
ಟ್ರಕ್‌/ಬಸ್‌                                                         580            870
ಮೂರು ಆಕ್ಸೆಲ್‌ ವಾಣಿಜ್ಯ ವಾಹ                     635            950
ನಿರ್ಮಾಣ ಯಂತ್ರಗಳು                                    910            1365
ದೊಡ್ಡ ಗಾತ್ರದ ವಾಹನ                                  1080          1620
4 ಅಥವಾ 6 ಆಕ್ಸೆಲ್‌ನ ಭಾರೀ ವಾಹನ           1110           1660

ಮಂಡ್ಯ ಗಣಂಗೂರು ಟೋಲ್‌ ಶುಲ್ಕ ( ಏಕಮುಖ): ಕಾರು/ವ್ಯಾನ್/ಜೀಪ್‌ 155ರಿಂದ 160ಕ್ಕೆ, ಲಘು ವಾಣಿಜ್ಯ ವಾಹನಗಳಿಗೆ 250ರಿಂದ 260ಕ್ಕೆ, ಟ್ರಕ್‌/ ಬಸ್‌/ ಎರಡು ಆಕ್ಸೆಲ್‌ ವಾಹನಗಳಿಗೆ ಶುಲ್ಕ 525ರಿಂದ 540 ರೂಪಾಯಿಗಳಿಗೆ ಏರಿಕೆಯಾಗಿದೆ. ಮೂರು ಆಕ್ಸೆಲ್‌ ವಾಣಿಜ್ಯ ವಾಹನಗಳಿಗೆ 575ರಿಂದ 590 ರೂಪಾಯಿಗಳಿಗೆ, ಭಾರೀ ಕಟ್ಟಡ ನಿರ್ಮಾಣ ವಾಹನಗಳು/ ಅರ್ಥ್‌ ಮೂವರ್ಸ್/‌ 4 ಅಥವಾ 6 ಆಕ್ಸೆಲ್‌ಗಳಿಗೆ 825ರಿಂದ 840 ರೂಪಾಯಿಗಳಿಗೆ ಏರಿಕೆಯಾಗಿದೆ.

andolana

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

1 hour ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

2 hours ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

2 hours ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

2 hours ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago