ಮೈಸೂರು

ಬಹುರೂಪಿಯಲ್ಲಿ ಬಹು ಆಯಾಮದ ಚಿತ್ರಗಳ ಪ್ರದರ್ಶನ

 

 

ಮೈಸೂರು: ಬಹರೂಪಿಯ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಆಯೋಜಿಸಿರುವ ಚಲನಚಿತ್ರೋತ್ಸವದಲ್ಲಿ ಬುಧವಾರ ಕೃಷಿಯ ಮೂಲಕ ಕೈದಿಗಳ ಮನ ಪರಿವರ್ತನೆ, ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಮತ್ತು ಸಂಗೀತದ ಮೇಲೆ ಬೆಳಕು ಚೆಲ್ಲುವ ಚಿತ್ರಗಳು ಪ್ರದರ್ಶನಗೊಂಡವು.

ಬೆಳಿಗ್ಗೆ ೧೦.೩೦ ರಿಂದ ೨೮ ನಿಮಿಷದ ಫಿಡ್ಲರ್ ಆನ್ ದಿ ತ್ಯಾಚ್ (ಇಂಗ್ಲಿಷ್) ಸಿನಿಮಾ ಪ್ರದರ್ಶನವಾಯಿತು. ನೇಪಾಳದ ಕಾಲಿಂಪಾಂಗ್‌ನ ಗಾಂಧಿ ಆಶ್ರಮ ಶಾಲೆಯಲ್ಲಿನ ಶಿಕ್ಷಕನಿಗೆ ಪಿಟೀಲು ವಾದನದಲ್ಲಿ ಸಾಕಷ್ಟು ಆಸಕ್ತಿ. ಇದನ್ನೇ ಅಸ್ತ್ರವಾಗಿಸಿಕೊಂಡು ತನ್ನ ಸುತ್ತಲು ಇರುವ ಅನಕ್ಷರಸ್ಥ ಮಕ್ಕಳನ್ನು ಶಾಲೆಯೆಡೆಗೆ ಸೆಳೆಯುವುದು ಚಿತ್ರದ ಕಥಾವಸ್ತು. ಇದು ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಬಾಲ್ಯದಲ್ಲಿ ನೋಡಿದ ‘ಸೌಂಡ್ ಆಫ್ ಮ್ಯೂಸಿಕ್’ ಚಿತ್ರದ ದೃಶ್ಯಗಳು ಶಿಕ್ಷಕನ ಮೇಲೆ ಗಾಢವಾದ ಪರಿಣಾಮ ಬೀರಿರುತ್ತದೆ. ಇದರಿಂದ ಸ್ವತಃ ಪಿಟೀಲು ಕಲಿತು ಹತ್ತಾರು ಶಿಷ್ಯರನ್ನು ಬೆಳೆಸಿ ಅವರೊಂದಿಗೆ ಪರ್ವತದ ತಪ್ಪಲಿನಲ್ಲಿ ಅಂತಹುದೇ ಕಚೇರಿಯೊಂದನ್ನು ಮಾಡಿ ತೋರಿಸುತ್ತಾನೆ. ಈ ಬೆಳವಣಿಗೆಯಿಂದ ಮಕ್ಕಳು ಶಾಲೆಗೆ ಹೋಗುವುದನ್ನು ಪ್ರಾರಂಭಿಸುತ್ತಾರೆ. ಹೀಗೆ ಇಲ್ಲಿ ಕಲಿತವರು ಪಿಟೀಲು ವಾದನದ ಮೇಲೆ ಹಿಡಿತ ಸಾಧಿಸಿ ದೇಶ ವಿದೇಶಗಳಲ್ಲಿ ಖ್ಯಾತ ಸಂಗೀತಗಾರರಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಈ ಕಿರುಚಿತ್ರವು ದೂರದರ್ಶನ ಅಲ್ಲದೆ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.

ಬಳಿಕ ಖ್ಯಾತ ನಿರ್ದೇಶಕ ಎಂ.ಎಸ್.ಪ್ರಕಾಶ್ ಬಾಬು ನಿರ್ದೇಶನದ ವಯೋಲಿನ್  ಸಂಗೀತ ವಿದ್ವಾನ್ ‘ಮೈಸೂರು ಮಂಜುನಾಥ್’ ೧೪ ನಿಮಿಷದ ಕನ್ನಡ ಸಿನಿಮಾ ಪ್ರದರ್ಶನಗೊಂಡಿತು. ಭಾರತ ರತ್ನ ಪಂಡಿತ್ ರವಿಶಂಕರ್ ಅವರಿಂದ ‘ಮೈಸೂರಿನ ರಾಜಕುಮಾರ’ ಎಂದು ಮಂಜುನಾಥ್‌ ಹೊಗಳಿಸಿಕೊಂಡಿದ್ದರು. ಅಸಂಖ್ಯಾತ ವೇದಿಕೆಗಳಲ್ಲಿ, ಸಮ್ಮೇಳನಗಳಲ್ಲಿ, ಸಂಗೀತ ಉತ್ಸವಗಳಲ್ಲಿ ಹಾಗೂ ಪ್ರಸಿದ್ಧ ವಿಶ್ವ ವಿದ್ಯಾಲಯಗಳಲ್ಲಿ ತಮ್ಮ ವಯೋಲಿನ್ ವಾದನದಿಂದ ಲಕ್ಷಾಂತರ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಿದ ಅಸಾಮಾನ್ಯ ಸಂಗೀತ ವಿದ್ವಾಂಸ ಮಂಜುನಾಥ್ ಅವರ ಬಗ್ಗೆ ಚಿತ್ರ ವಿವರ ಒದಗಿಸಿತು.

ಇದಾದ ನಂತರ ಮಧ್ಯಾಹ್ನ ೧೨ಕ್ಕೆ ಕುವೆಂಪು ಅವರ ಬಾಲ್ಯ, ಬದುಕು ಮತ್ತು ಸಾಹಿತ್ಯಿಕ ಸಾಧನೆಗಳನ್ನು ಬಿಂಬಿಸುವ ಕಿರುಚಿತ್ರ ‘ರಾಷ್ಟ್ರಕವಿ ಕುವೆಂಪು; ಬದುಕು ಬರಹ’ ೨೮ ನಿಮಿಷದ ಕಿರುಚಿತ್ರ ಪ್ರದರ್ಶನಗೊಂಡಿತು. ನಿಸರ್ಗದ ಮಡಿಲು ಮಲೆನಾಡಿನ ಕುಪ್ಪಳ್ಳಿಯಲ್ಲಿ ಜನಿಸಿ ಅಲ್ಲಿನ ಪರಿಸರವನ್ನು ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿದ್ದಾರೆ. ಅಲ್ಲಿಯ ಭೂ ರಚನೆ, ನದಿ, ತೊರೆ, ಹಳ್ಳ-ಕೊಳ್ಳ ಅಥವಾ ಆ ಕಾಲಘಟ್ಟದಲ್ಲಿದ್ದ ಪಾತ್ರಗಳು ನಿರಂತರವಾಗಿ ಅವರ ಸಾಹಿತ್ಯದಲ್ಲಿ ಜೀವಂತಿಕೆ ಪಡೆದು ನಿಲ್ಲುತ್ತವೆ. ಇಲ್ಲಿನ ಪರಿಸರ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತು. ಇದನ್ನು ಈ ಕಿರುಚಿತ್ರದಲ್ಲಿ ಉಮಾಶಂಕರ್ ಸ್ವಾಮಿ ಸೊಗಸಾಗಿ ಸೆರೆ ಹಿಡಿದಿದ್ದಾರೆ.

ಬಳಿಕ ಸವ್ಯಸಾಚಿ ಮುಖರ್ಜಿ ನಿರ್ದೇಶನದ ‘ಬಿಸ್ಮಿಲಾ ಆಫ್ ಬನಾರಸ್’ ೬೦ ನಿಮಿಷದ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಖಾನ್ ಅವರು ಮೂಲತಃ ಬಿಹಾರದ ರಾಜರ ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದು, ಪ್ರೌಢ ವಯಸ್ಸಿಗೆ ಬರುತ್ತಿದ್ದಂತೆ ಅವರು ಚಿಕ್ಕಪ್ಪನವರಾದ ಅಲಿಭಕ್ಷಿ ಅವರೊಂದಿಗೆ ಶಹನಾಯಿ ವಿದ್ವತ್‌ನ್ನು ಪಡೆಯುತ್ತಾರೆ. ಬಳಿಕ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಖಾಯಂ ಸಂಗೀತಗಾರರಾಗಿ ನೆಲೆ ನಿಲ್ಲುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅವರನ್ನು ಕೆಂಪುಕೋಟೆಯ ಮೇಲೆ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆಯ ವಿಷಯ.

ಮಧ್ಯಾಹ್ನ ೨ ರಿಂದ ಕೃಷಿಯ ಮೂಲಕ ಕೈದಿಗಳ ಮನ ಪರಿವರ್ತಿಸುವ ಸೊಗಸಾದ ಹಿಂದಿಯ ‘ದೋ ಆಂಖೇ ಬಾರಾ ಹಾತ್’ ಚಿತ್ರ ಎಲ್ಲರ ಮನ ಸೆಳೆಯಿತು. ಅತ್ಯಂತ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡ ಖೈದಿಗಳ ವೈಯಕ್ತಿಕ ಜೀವನದ ಕನ್ನಡಿಯಂತಿದ್ದ ಚಿತ್ರ ಪರಿಶ್ರಮ ಎಂಥಹವರನ್ನೂ ಸುಧಾರಿಸಬಲ್ಲುದು ಎಂಬುದನ್ನು ತೋರಿಸಿಕೊಟ್ಟಿತು. ಕನ್ನಡಿಗರೇ ಆದ ವಿ.ಶಾಂತಾರಾಂ ಅವರ ಭಾರತೀಯತೆಯನ್ನು ಎತ್ತಿ ಹಿಡಿಯುವ ಹಲವಾರು ಸಿನೆಮಾಗಳ ಫೈಕಿ ಇದೂ ಒಂದು.ಬಬ

andolana

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

11 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

23 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

34 mins ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

1 hour ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

1 hour ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

1 hour ago