Babu Jagjivan Ram was a great freedom fighter – Minister Mahadevaappa. Ask ChatGPT
ಮೈಸೂರು : ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ, ಆಡಳಿತ ಚರ್ಚೆಯ ವಿಷಯಗಳಾಗಿವೆ. ಅವೆಲ್ಲವನ್ನು ಸಾಮಾನ್ಯ ಜನರಿಗೆ ತಲುಪಿಸಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ನೈತಿಕತೆ ಕಳೆದು ಹೋಗಿ, ಸಾಂಸ್ಕೃತಿಕ ನಾಯಕತ್ವ ಕುಸಿಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಬೇಸರ ಹೊರಹಾಕಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲುಂದ ಘಟಿಕೋತ್ಸವ ಭವನದಲ್ಲಿ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಭಾರತದ ಸಾವಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಗತಿಗೆ ಡಾ.ಬಾಬು ಜಗಜೀವನರಾಮ್ ಅವರ ಕೊಡುಗೆಗಳು ಎಂಬ ವಿಷಯ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬಾಬು ಜಗಜೀವನ್ ಅವರು ಒಬ್ಬ ಧೀಮಂತ ಸ್ವಾತಂತ್ರ್ಯ ಹೋರಾಟಗಾರರು. ಗಾಂಧೀಜಿ ನೇತೃತ್ವದಲ್ಲಿ ರಾಷ್ಟ್ರೀಯ ಹೋರಾಟದ ಪ್ರಮುಖರಾದ ಪಂಡಿತ್ ಮದನ್‌ಮೋಹನ್ ಮಾಳವಿಯ ಅವರ ಭಾಂದವ್ಯದಿಂದ ಗಾಂಧೀಜಿ ಅವರನ್ನು ಭೇಟಿಯಾಗಿ ನಂತರ ಸ್ವಾತಂತ್ರ್ಯದ ಹೋರಾಟದಲ್ಲಿ ಎರಡು ಭಾರಿ ಸೆರೆವಾಸ ಅನುಭವಿಸಿದರು. ಜಗಜೀವನ್ ರಾಮ್ ಅವರು ಹೋರಾಟಗಾರರಂತೆಯೇ ರಾಷ್ಟ್ರ ಪ್ರೇಮಿ, ರಾಷ್ಟ್ರೀಯವಾದಿಯೂ ಹೌದು ಎಂದರು.
ಅಂದಿನ ದಿನಗಳಲ್ಲಿ ಜಾತಿ ತಾರತಮ್ಯ ,ಅಸ್ಪಶ್ಯತೆಯಲ್ಲಿ ನೊಂದು, ಸಾಮಾಜಿಕ ಅವ್ಯವಸ್ಥೆಯ ವಿರುದ್ಧವಾಗಿ ಹೋರಾಡಿದರು. ಅಸ್ಪಶ್ಯರು ಶಿಕ್ಷಣದಿಂದ ವಂಚಿತರಾದ ಕಾಲಗಟ್ಟದಲ್ಲೇ ೧೦ನೇ ತರಗತಿಯ ಗಣಿತದಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿ, ಇವತ್ತಿನ ಯುವಕರಿಗೆ ಆದರ್ಶವಾಗಿದ್ದಾರೆ. ಭಾರತದ ಸಾವಾಜಿಕ ವ್ಯವಸ್ಥೆ, ಜಾತಿ ವಿನಾಶಕ್ಕೆ ಒತ್ತು ಕೊಟ್ಟು, ಅದರ ಆಳವಾದ ಅಧ್ಯಯನದ ಜತೆಗೆ ಅನುಭವವನ್ನು ಹೊಂದಿದ್ದರು ಎಂದು ಹೇಳಿದರು.
ಭಾರತ ಜಾತಿ ವ್ಯವಸ್ಥೆ, ಅವರಿಗೆ ಪ್ರಧಾನಿ ಹುದ್ದೆಯ ಅವಕಾಶ ಕಸಿದುಕೊಂಡಿತು. ರಾಜಕಾರಣಿಯಾದ ಸಮಯದಲ್ಲೂ ಅಸ್ಪಸ್ಯತೆಗೆ ಒಳಗಾಗಿ ನೊಂದ ಅವರು, ನಾನು ಬ್ರಾಹ್ಮಣರನ್ನು ಇಷ್ಟ ಪಡುತ್ತೇನೆ, ಆದರೆ ಬ್ರಾಹ್ಮಣಶಾಹಿತ್ವ ವಿರೋಧಿಸುತ್ತೇನೆ ಎಂದಿದ್ದರು. ಮತೀಯವಾದ, ಜಾತಿವಾದದಿಂದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ಅವರು ಶೂದ್ರರ ಪ್ರತ್ಯೇಕತೆಯ ವಿಚಾರಕ್ಕೆ ಆಸ್ಪದ ನೀಡಲಿಲ್ಲ ಎಂದು ಅಭಿಪ್ರಾಯಿಸಿದರು.
ಸರಳ, ಸಜ್ಜನಿಕೆಯ, ಸಂಸ್ಕೃತಿಯುತ ನಾಯಕ. ಅವರ ಆಡಳಿತ ಕೌಶಲ್ಯ, ದೃಷ್ಟಿಕೋನ, ಮುಂದಾಲೋಚನೆ ಭಾರತದ ಭವಿಷ್ಯದ ಕಡೆ ಇತ್ತು. ಕಾರ್ಮಿಕ ಸಚಿವರಾಗಿ ಅನೇಕ ಸೌಲಭ್ಯ, ರೈಲ್ವೆ ಮಂತ್ರಿಯಾಗಿ ಎಲ್ಲರನ್ನು ಸಮಾನರನ್ನಾಗಿಸಲು ಮೀಸಲಾತಿ ಜಾರಿಗೊಳಿಸಿದರು. ರಕ್ಷಣಾ ಸಚಿವರಾದಾಗ ೧೯೭೧. ಪಾಕಿಸ್ತಾನದ ಯುದ್ಧ ಗೆದ್ದು ಪತಾಕೆ ಹಾಕಿಸಿದರು. ಅವರು ಕೃಷಿ ಮಂತ್ರಿಯಾದ ಸಮಯದಲ್ಲಿ ಬಡತನ, ಕ್ಷಾಮ ಒದಗಿತ್ತು ಅಂತಹ ಸಂದರ್ಭದಲ್ಲೂ, ಆಹಾರ ಉತ್ಪಾದನೆಗೆ ಹಸಿರು ಕ್ರಾಂತಿ ಬೆಂಬಲಿಸಿ ಆಹಾರ ಸ್ವಾವಲಂಬನೆಗೆ ಕಾರಣರಾದರು. ಸಾವಾಜಿಕ ನ್ಯಾಯ ಆರ್ಥಿಕ ಸ್ವಾವಲಂಬನೆ ಕೆಲಸ ಮಾಡಿದರು ಎಂದು ಆಶಯ ವ್ಯಕ್ತಪಡಿಸಿದರು.
ಇಂದು ಸಾಂಸ್ಕೃತಿಕ ನಾಯಕತ್ವ ಕುಸಿದು, ಧಾರ್ಮಿಕ ವ್ಯವಸ್ಥೆ ಮೇಲೆಳುತ್ತಿದೆ. ಇದೆಲ್ಲರ ವಿರುದ್ದ, ಧ್ವನಿ ಎತ್ತಬೇಕಿದೆ. ಸಮ ಸಮಾಜದ ರಾಷ್ಟ್ರ ಕಟ್ಟಲು ಮುಂದಿನ ಪೀಳಿಗೆಗೆ, ಯುವಕರಿಗೆ, ಜನಸಾಮಾನ್ಯರಿಗೆ ಪ್ರರೇಪಿಸಬೇಕಿದೆ ಎಂದು ಹೇಳಿದರು.
ಬಳಿಕ ಡಾ.ಬಾಬು ಜಗಜೀವನರಾಮ್ ಅವರ ಜೀವನ ಸಾಧನೆ ಕುರಿತಾದ ಗ್ರಂಥ ಬಿಡುಗಡೆಗೊಳಿಸಲಾಯಿತು. ಹಾಗೂ ೨೦೨೪-೨೫ರ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವರು ಪ್ರೊ.ಎಸ್. ನವೀನ್ ಕುವಾರ್, ಮೈಸೂರು ವಿವಿ ಮಹಾರಾಜ ಕಾಲೇಜು ಪ್ರೊ.ಆರ್ ತಿಮ್ಮರಾಮಪ್ಪ, ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ನಿರ್ದೇಶಕಿ ಡಾ.ಆರ್ ಶರಣಮ್ಮ, ಡಾ.ಸಿ.ಎಸ್ ಆನಂದ ಕುಮಾರ್ ಉಪಸ್ಥಿತರಿದ್ದರು.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…