ಮೈಸೂರು : 2022-23ನೇ ಸಾಲಿನಲ್ಲಿ ತಾಲೂಕು ವ್ಯಾಪ್ತಿ ಪ್ರಕೃತಿ ವಿಕೋಪದಿಂದ 3 ಮಾನವ ಜೀವ, 4 ಜಾನುವಾರು, 197 ಮನೆ, 39 ಕೊಟ್ಟಿಗೆ, 18 ಹೆಕ್ಟೇರ್ ಸಾಗುವಳಿ ಜಮೀನು ಹಾನಿಗೀಡಾಗಿದೆ. ಪುನರ್ ಮನೆ ನಿರ್ಮಾಣಕ್ಕಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಕೆಲವು ಕುಟುಂಬಗಳ ಬಳಿ ರೇಷನ್‌ಕಾರ್ಡ್, ಆಧಾರ್‌ಕಾರ್ಡ್ ಇಲ್ಲದ ಕಾರಣ ಪುನರ್ ಮನೆ ನಿರ್ಮಾಣದ 5 ಲಕ್ಷ ರೂ. ಬಿಡುಗಡೆಗೆ ನಿರಾಕರಿಸಲಾಗಿದೆ. ಮುಂಗಾರಿನಲ್ಲಿ ವಿಪರೀತ ಮಳೆಗೆ ಮನೆ ಕಳೆದಕೊಂಡ ಕುರಿತು ಸೂಕ್ತ ಮಾಹಿತಿ ಲಭಿಸಿದ್ದರೂ ದಾಖಲೆ ಇಲ್ಲ ಎಂಬ ಕಾರಣಕ್ಕೆ ಅನೇಕ ಕುಟುಂಬಗಳು ಸರಕಾರದ ನೆರವಿನಿಂದ ವಂಚಿತಗೊಳ್ಳುವಂತಾಗಿದೆ
ಮುಂಗಾರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಂತರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಅನೇಕ ಮನೆಗಳು ಹಾನಿಗೀಡಾಗಿವೆ. ಸಂಪೂರ್ಣ ಮನೆ ಕುಸಿದ ಕುಟುಂಬವೊಂದರ ಬಳಿ ರೇಷನ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿ ನೆರವು ನಿರಾಕರಿಸಲಾಗಿದೆ ಎಂದು ಅಂತರಸಂತೆ ಗ್ರಾ.ಪಂ.ಸದಸ್ಯ ಸುರೇಶ್ ಕೆ ಹೇಳಿದರು..
ತಂತ್ರಾಂಶದಲ್ಲಿ ಕೋರಿರುವ ಮಾಹಿತಿ ಅನ್ವಯ ರೇಷನ್‌ಕಾರ್ಡ್, ಆಧಾರ್‌ಕಾರ್ಡ್ ದಾಖಲೆ ಜೋಡಣೆ ಅನಿವಾರ್ಯ. ಕಾರ್ಡ್ ಇಲ್ಲದ ಕುಟುಂಬದ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಂಕಷ್ಟಕ್ಕೀಡಾದ ಕುಟುಂಬಕ್ಕೆ ನೆರವು ನೀಡುವ ಕ್ರಮ ಜರುಗಿಸಲಾಗುತ್ತದೆ ಎಂದು ತಹಸೀಲ್ದಾರ್ ರತ್ನಾಂಬಿಕೆ ತಿಳಿಸಿದರು.
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…