ಮೈಸೂರು

ಮೊದಿ,ಅಮಿತ್‌ ಶಾ ಅಪ್ಪುಗೆಗಿಂತ ಅಚ್ಚೇ ದಿನ್ ಬೇಕಿಲ್ಲ : ಶಾಸಕ ಎಸ್.ಎ ರಾಮದಾಸ್

ಮೈಸೂರು‌ : ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಭೇಟಿ ನೀಡಿದ ವೇಳೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಗುದ್ದು ನೀಡಿದ್ದರು. ಇದೀಗ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮೈಸೂರಿಗೆ ಭೇಟಿ ನೀಡಿದ್ದರು. ಸ್ವಾಗತಿಸಲು ಶಾಸಕ ರಾಮದಾಸ್ ಅವರು​ ತೆರಳಿದ್ದರು. ಈ ವೇಳೆ ಅಮಿತ್​ ಶಾ ಅವರು ರಾಮದಾಸ್​ ಅವರಿಗೆ ಆತ್ಮೀಯ ಅಪ್ಪುಗೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮ್‌ ದಾಸ್‌ ನಮ್ಮದು ಕೌಟುಂಬಿಕ ಸಂಬಧ ಈ ಹಿಂದೆ ಕೂಡ ಮೊದಿಯವರು ಮೈಸೂರಿಗೆ ಬಂದಾಗ  ನನ್ನ ಕಿವಿ ಹಿಂಡಿ ಅಪ್ಪುಗೆ ಕೊಟ್ಟು ಒಂದು ಗುದ್ದನ್ನ ಗುದ್ದಿ ಪ್ರೀತಿಯನ್ನ ವ್ಯಕ್ತಪಡಿಸಿದ್ದರು.ನಾನು ಇಂದಿಗೂ ಅವರಿಗೆ ಆಭಾರಿಯಾಗಿದ್ದೇನೆ. ಇವತ್ತು ಅಮಿತ್‌ ಶಾ ಅವರನ್ನ ಬರಮಾಡಿಕೊಳ್ಳಲು ಹೋಗಿದ್ದಾಗ ಅವರು ರಾಮ್‌ ದಾಸ್‌ ಜಿ ಎಂದು ಪ್ರೀತಿಯಿಂದ ಅಪ್ಪುಗೆ ನೀಡಿದರು‌ ಒಂದಷ್ಟು ದೂರ ಅವರ ಜೊತೆಯಲ್ಲಿಯೇ ಹೆಜ್ಜೆ ಹಾಕಿದೆ. ನಂತರ ಅವರ ಜೊತೆಯಲ್ಲಿಯೇ ಕಾರಿನಲ್ಲಿ ಬಂದು ಚಾಮುಂಡಿ ತಾಯಿಯ ದರ್ಶನ ಪಡೆಯುವ ಭಾಗ್ಯವನ್ನ ತಾಯಿ ಕರುಣಿಸಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದರು.

ಇದಕ್ಕಿಂತ ಅಚ್ಚೇ ದಿನ್‌ ಬೇಕಿಲ್ಲ : ಮೋದಿ ಜಿ ನನ್ನ ಕಿವಿ ಹಿಂಡಿದ ದಿನವೇ ನನಗೆ ಅಚ್ಚೇ ದಿನ್ ಇವತ್ತು ಅಮಿತ್‌ ಶಾ ಅವರು ನರೇಂದ್ರ ಮೋದಿಯವರ ರೀತಿಯೇ ಪ್ರೀತಿಯ ಅಪ್ಪುಗೆಯನ್ನ ಕೊಟ್ಟು ಜೊತೆಯಲ್ಲಿಯೇ ತಾಯಿಯ ದರ್ಶನಕ್ಕೆ ಕರೆದುಕೊಂಡು ಬಂದರಲ್ಲ ಇದೇ ನನಗೆ ಅಚ್ಚೇ ದಿನ್‌ ಇದಕ್ಕಿಂತ ದೊಡ್ಡ ಅಚ್ಚೇ ದಿನವನ್ನ ನಾನು ಬಯಸೋದಿಲ್ಲ ಎಂದರು

lokesh

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

1 hour ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago