ಮೈಸೂರು : ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸೋಮವಾರ ನಗರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು.
ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಜನರಿಂದ ಅರ್ಜಿ ಸ್ವೀಕರಿಸಿದರು. ತಾಳ್ಮೆಯಿಂದ ಎಲ್ಲರ ಸಮಸ್ಯೆಗಳನ್ನು ಆಲಿಸಿದ್ದಲ್ಲದೆ, ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು. ಎರಡು ವಾರಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಬರುವುದನ್ನೇ ಕಾದಿದ್ದ ಕ್ಷೇತ್ರದ ಜನರು ಒಂದೇ ದಿನ ಲಗ್ಗೆ ಇಟ್ಟ ಪರಿಣಾಮವಾಗಿ ಜಲದರ್ಶಿನಿ ಸಭಾಂಗಣ ತುಂಬಿ ತುಳುಕಿತ್ತು. ಭದ್ರತಾ ಸಿಬ್ಬಂದಿ ಸಾರ್ವಜನಿಕರನ್ನು ಒಬ್ಬೊಬ್ಬರಾಗಿ, ತಂಡವಾಗಿ ಸಚಿವರ ಬಳಿಗೆ ಕಳುಹಿಸುವ ಹೊತ್ತಿಗೆ ಹೈರಣಾದರು.
ಹಾಸ್ಟೆಲ್‌ನಿಂದ ಯಾವುದೇ ನೋಟಿಸ್ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದ್ದು, ಮರು ಸೇರ್ಪಡೆಗೆ ಸೂಚನೆ ನೀಡುವಂತೆ ಕೋರಿದ ಮನವಿಗೆ ಸ್ಪಂದಿಸಿದ ಸಚಿವರು,ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ ಕೆಲಸದಿಂದ ವಜಾಗೊಳಿಸುವಂತದ್ದು ಏನು ನಡೆದಿಲ್ಲ. ಪರಿಶೀಲಿಸಿ ಆತನಿಗೆ ಕೆಲಸ ಕೊಡುವಂತೆ ಹೇಳಿದರು.
ಇದನ್ನೂ ಓದಿ:-ಜಿಲ್ಲಾಸ್ಪತ್ರೆಗಳ ಮೇಲ್ದರ್ಜೆಗೆ ಚಿಂತನೆ : ಸಚಿವ ದಿನೇಶ್ ಗುಂಡೂರಾವ್
ನರಗೇತನಹಳ್ಳಿ ಗ್ರಾಮದಿಂದ ಆಗಮಿಸಿದ್ದ ಮುಖಂಡರು ನಮ್ಮೂರಿಗೆ ಹೊಸದಾಗಿ ಪೈಪ್‌ಲೇನ್ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿಕೊಡುವಂತೆ ಕೋರಿದರು. ತಕ್ಷಣವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಾಮಗಾರಿ ಶುರು ಮಾಡುವ ಆಶ್ವಾಸನೆ ನೀಡಿದರು. ಬಿ.ಸಂಜಯ್ ಎಂಬಾತ ಬೆಂಗಳೂರು ಬಿಬಿಎಂಪಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸುವಂತೆ ಮನವಿ ಸಲ್ಲಿಸಿದನು. ಸಚಿವರನ್ನು ಭೇಟಿಮಾಡಲು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಡಿ.ದೇವರಾಜ ಅರಸು ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದು, ಸಾಲ ಮಂಜೂರಾತಿ ಮಾಡಿಸಿಕೊಡುವಂತೆ ಫಲಾನುಭವಿಯೊಬ್ಬರು ಮನವಿ ಮಾಡಿದರೆ, ಕರ್ನಾಟಕ ರಾಜ್ಯಹಣಕಾಸು ಸಂಸ್ಥೆಯಿಂದ ಮಂಜೂರಾಗಿರುವ ಸಾಲದ ಮೊತ್ತ ಬಿಡುಗಡೆ ಮಾಡದೆ ಇರುವ ಬಗ್ಗೆ ಫಲಾನುಭವಿಯೊಬ್ಬರು ಅಲವತ್ತುಕೊಂಡರು. ಇದನ್ನು ಪರಿಗಣಿಸಿದ ಸಚಿವರು, ದೂರವಾಣಿ ಮೂಲಕ ಅಧಿಕಾರಿಯೊಬ್ಬರೊಂದಿಗೆ ಮಾತನಾಡಿ, ಇಲಾಖೆಯಿಂದ ಹಣ ಬಿಡುಗಡೆಯಾಗಿದೆ. ನೀವು ವಿಳಂಬ ಮಾಡದೆ ರಿಲೀಸ್ ಮಾಡಬೇಕು ಎಂದು ಸೂಚಿಸಿದರು.
ಬನ್ನೂರು ಹೋಬಳಿಯ ಕೇತುಪುರ, ಮರಡೀಪುರ ಗ್ರಾಮದ ಅನೇಕರು ಡಾಂಬರೀಕರಣ, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ದೊಡ್ಡಮುಲಗೋಡು ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಜಮೀನಿಗೆ ಪೌತಿ ಖಾತೆ ಮಾಡದೆ ಅಲೆದಾಡಿಸುವ ಬಗ್ಗೆ ಸಚಿವರ ಗಮನಕ್ಕೆ ತಂದು,ಎಲ್ಲಾ ದಾಖಲೆಗಳು ಇದ್ದರೂ ಮಾಡಿಲ್ಲ ಎಂದಿದ್ದಕ್ಕೆ, ಉಪ ವಿಭಾಗಾಧಿಕಾರಿ ಆಶಪ್ಪ ಅವರ ಜತೆಗೆ ದೂರವಾಣಿಯಲ್ಲಿ ಮಾತನಾಡಿ ಪೌತಿ ಖಾತೆ ಸಮಸ್ಯೆ ಇತ್ಯರ್ಥಪಡಿಸುವಂತೆ ಹೇಳಿದರು.
ಮರಿದೇವಯ್ಯ ಅವರು ಎಚ್.ಡಿ.ಕೋಟೆ ಭಾಗದಿಂದ ಬಂದಿದ್ದ ಅನೇಕ ಗ್ರಾಮಗಳ ಮುಖಂಡರೊಂದಿಗೆ ಸಚಿವರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದರೆ, ಸೋಸಲೆ ಮಹೇಶ್ ತಂಡದವರು ಕೂಡ ಸಚಿವರನ್ನು ಭೇಟಿ ಮಾಡಿ ಅನೇಕ ಅರ್ಜಿಗಳನ್ನು ಸಲ್ಲಿಸಿದರು. ಜಿಪಂ ಮಾಜಿ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ, ಜಿಲ್ಲಾ ಅಗ್ನಿಶಾಮಕ ಮಾಜಿ ಅಧಿಕಾರಿ ಬಸವಣ್ಣ, ದಲಿತ ಸಂಘರ್ಷ ಸಮಿತಿ ಮುಖಂಡ ಹರಿಹರ ಆನಂದಸ್ವಾಮಿ, ದೇವನೂರು ಮಹಾದೇವಪ್ಪ ಸೇರಿದಂತೆ ಅನೇಕರು ಸಚಿವರೊಂದಿಗೆ ಸಮಾಲೋಚಿಸಿದರು. ಒಂದು ಗುಂಪು ಸಚಿವರೊಂದಿಗೆ ಮಾತನಾಡುವಾಗಲೇ ಮತ್ತೊಂದು ಗುಂಪಿನವರು ಆಗಮಿಸಿ ಸಚಿವರಿಗೆ ಮನವಿ ಸಲ್ಲಿಸಲು ಮುಗಿಬಿದ್ದದ್ದು ವಿಶೇಷವಾಗಿತ್ತು. ಸಚಿವರ ವಿಶೇಷಾಧಿಕಾರಿ ರವಿಕುಮಾರ್, ಆಪ್ತಸಹಾಯಕ ಗೋಪಾಲ್ ಹೊರೆಯಾಲ ಹಾಜರಿದ್ದರು.
ಬೆಂಗಳೂರು : ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸುವಂತೆ ಅರಣ್ಯ,…
ಕಲಬುರಗಿ : ದೇಶದಲ್ಲಿ ಅಡುಗೆ ಅನಿಲ, ಪೆಟ್ರೊಲ್ ಡಿಸೇಲ್ ಕೊರತೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್…
ಮೈಸೂರು : ಮೈಸೂರು-ಜೋಧ್‌ಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿರುವುದಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ…
೨೦೨೫ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೮ ವರ್ಷಗಳ ನಂತರ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಯಶೀಲರಾಗಿ…
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಯುದ್ಧ ನಡೆಸುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಿಂದ ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಯಾಗುತ್ತಿದ್ದ ಕಚ್ಚಾ ತೈಲ…
ಜನಗಣತಿ ಕಾರ್ಯದಲ್ಲಿ ಗಣತಿದಾರರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು. ಗುರುತಿನ ಚೀಟಿ ಧರಿಸಿ, ಸೌಜನ್ಯದಿಂದ ಮಾಹಿತಿ ಸಂಗ್ರಹಿಸಿ.…