ಹುಣಸೂರು: ಒಳಚರಂಡಿ ನಿರ್ವಹಣೆಗೆ 45 ಲಕ್ಷ ಅನುದಾನದಲ್ಲಿ 6 ಸಾವಿರ ಲೀಟರ್ ಸಾಮರ್ಥ್ಯ ಹೊಂದಿರುವ ಸಕ್ಕಿಂಗ್ ಮತ್ತು ಜಟ್ಟಿಂಗ್ ವಾಹನ ಖರೀದಿಸುವ ಮೂಲಕ ನಗರಸಭೆಯೂ ಶುಚಿತ್ವಕ್ಕೆ ಕ್ರಮವಹಿಸಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ಹುಣಸೂರಿನ ಶಾಸಕರ ಕಚೇರಿ ಆವರಣದಲ್ಲಿ ಹೊಸದಾಗಿ ಖರೀದಿಸಿದ ಸಕ್ಕಿಂಗ್ ಮತ್ತು ಜಟ್ಟಿಂಗ್ ವಾಹನಕ್ಕೆ ಶಾಸಕ ಜಿ.ಡಿ.ಹರೀಶ್ ಗೌಡ ಮತ್ತು ಆಯುಕ್ತ ಮಾನಸ ಅವರು ಇಂದು ಹಸಿರು ನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಶಾಸಕ ಜಿ.ಡಿ.ಹರೀಶ್ ಗೌಡ ಅವರು, ನಗರಸಭೆಗೆ ನಾನ್ ಮಿಲಿಯನ್ ಪ್ಲಸ್ ಸಿಟಿ ಯೋಜನೆ ಅಡಿಯಲ್ಲಿ 90 ಲಕ್ಷ ಅನುದಾನ ಮಂಜೂರಾಗಿದ್ದು, ಆ ಅನುದಾನದಲ್ಲಿ ಹೆಚ್ಚುವರಿಯಾಗಿ 6 ಸಾವಿರ ಲೀಟರ್ ಸಾಮರ್ಥ್ಯದ ವಾಹನ ಖರೀದಿಸಿದೆ. ಉಳಿದ ಅನುದಾನವನ್ನು ನಗರಸಭೆ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗೆ ಮತ್ತು ನೀರು ಪೈಪ್ ಲೈನಿಂಗ್ ಮತ್ತು ಪಂಪ್‌ಹೌಸ್ ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ ಎಂದರು.
ಈ ವಾಹನದಿಂದ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಶುಚಿಗೊಳಿಸಿ ನೀರು ಸಮರ್ಪಕವಾಗಿ ಹರಿಯಲು ಸಹಕಾರಿಯಾಗಲಿದೆ. ನಗರಸಭೆ ವ್ಯಾಪ್ತಿಯು 4 ರಿಂದ 5 ಕಿ.ಮೀ ಹರಡಿಕೊಂಡಿದ್ದು, 80 ಹೊಸ ಬಡಾವಣೆಗಳಾಗಿವೆ. ಹಾಗಾಗಿ ಸಾರ್ವಜನಿಕರ ಸಮಸ್ಯೆಗೆ ಈ ಹೆಚ್ಚುವರಿ ವಾಹನ ಸಹಕಾರಿ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಮಾನಸ, ಸದಸ್ಯರಾದ ಕೃಷ್ಣರಾಜಗುಪ್ತ, ಶರವಣ, ಸತೀಶ್ ಕುಮಾರ್, ರಮೇಶ್, ದೇವರಾಜ್, ಯುನಿಸ್, ಗೀತಾ, ರಾಣಿ ಪೆರುಮಾಳ್, ರಾಧಾ, ಶ್ರೀನಾಥ್, ತಹಶೀಲ್ದಾರ್ ಮಂಜುನಾಥ್, ಇಓ ಮನು, ಎಇಇ ಶರ್ಮಿಳಾ, ರೂಪಾ, ಸತೀಶ್ ಕುಮಾರ್ ಹಾಜರಿದ್ದರು.
ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…
ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…
ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…
ಮಂಡ್ಯ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…
ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…