ಮೈಸೂರು: ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದರಿಂದ ಸಾರ್ವಜನಿಕರ ಕೋರಿಕೆಯ ಮೇರೆಗೆ ಸೆಸ್ಕ್ ಅಧಿಕಾರಿಗಳು ದೀಪಾಲಂಕಾರವನ್ನು ವಿಸ್ತರಿಸಿದ್ದರು. ದಸರಾ ಉದ್ಘಾಟನೆಯಾದ ಸೆ.26ರಿಂದ ವಿಜಯದಶಮಿ ದಿನವಾದ ಅ.5ರವರೆಗೆ ಮೊದಲು ನಿಗದಿಯಾಗಿತ್ತು. ನಂತರ ಕೋರಿಗೆ ಮೇರೆಗೆ ಅ.10ರವರೆಗೆ ವಿಸ್ತರಿಸಲಾಯಿತು. ಬೇಡಿಕೆ ಹೆಚ್ಚಿದಾಗ ಇನ್ನೂ ಎರಡು ದಿನ (ಅ.12)ದೀಪಾಲಂಕಾರವನ್ನು ವಿಸ್ತರಿಸಿದ್ದರು. ಇದರಿಂದ 15 ದಿನಗಳಿಗೆ ಅಂತ್ಯಗೊಳ್ಳಬೇಕಿದ್ದ ದೀಪಾಲಂಕಾರ 17 ದಿನಗಳ ಕಾಲ ನಡೆಸುವ ಮೂಲಕ ಸಾರ್ವಜನಿಕರ ಮನಸೂರೆಗೊಳ್ಳುವ ಪ್ರಯತ್ನವನ್ನು ಸೆಸ್ಕ್ ಮಾಡಿತ್ತು.
ದಸರಾ ಮಹೋತ್ಸವದ ಪ್ರಯುಕ್ತ ಮೈಸೂರು ನಗರವನ್ನು ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಿದ ಸೆಸ್ಕ್‌ಗೆ ಬರೋಬ್ಬರಿ 5.5 ಕೋಟಿ ರೂ. ವೆಚ್ಚವಾಗಿದೆ. 4.5 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸೆಸ್ಕ್‌ಗೆ ಮತ್ತೆ 1 ಕೋಟಿ ರೂ.ಹೆಚ್ಚುವರಿಯಾಗಿ ಖರ್ಚಾಗಿದೆ. ಅವಧಿ ವಿಸ್ತರಣೆಯೊಂದಿಗೆ ಹೆಚ್ಚು ದಿನಗಳ ಕಾಲ ದೀಪಾಲಂಕಾರದ ವ್ಯವಸ್ಥೆ ಇದ್ದ ಪರಿಣಾಮ 2.3 ಲಕ್ಷ ಕಿಲೋವ್ಯಾಟ್ ವಿದ್ಯುತ್ ಬಳಕೆಯಾಗಿದೆ.
• ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ಹತ್ತಿರತ್ತಿರ ಒಂದೂ ಕಾಲು ಶತಮಾನದ ಚಿರನೂತನ ಶಾಲೆ... ವೃದ್ಧಾಪ್ಯದಲ್ಲೂ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡು…
ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…
ಜೆರುಸಲೆಂ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್‌ನಿಂದ ಇಸ್ರೇಲ್ ಮೇಲೆ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ…
ಬೆಂಗಳೂರು : ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲಿಯಂ, ವಿದ್ಯುತ್ ಮತ್ತು ರಸಗೊಬ್ಬರ ವಲಯಗಳ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ…
ಬೆಂಗಳೂರು : 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಕಾನೂನು ಪದವಿ ಸೇರಿದಂತೆ ವಿವಿಧ…