ಮೈಸೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಖಾತಾ ಸಚಿವ ಅಮಿತ್ ಷಾ ಅವರ ನಿರ್ದೇಶನದ ಮೇರೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಲಿಂಗಾಯತರಿಗೆ 2D ಪ್ರವರ್ಗ ರಚನೆ ಮಾಡಿ ಶೇಕಡ 5 ರಿಂದ 7 ಕ್ಕೆ ಹೆಚ್ಚಿಸಿರುವುದು ಹರ್ಷ ಉಂಟು ಮಾಡಿದ್ದು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಐದು ಲಕ್ಷ ಲಿಂಗಾಯಿತರ ಸಮಾವೇಶ ಮಾಡಿ ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಗೌಡ ಲಿಂಗಾಯಿತ – ಪಂಚಮಸಾಲಿ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ, BJP ರೈತ ಮುಖಂಡ ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಂಚಮಸಾಲಿ (ಗೌಡ ಲಿಂಗಾಯಿತ) ಸಮಾಜದ ಕೂಡಲಸಂಗಮಪೀಠದ ಪೀಠಾಧಿಪತಿ ಬಸವ ಜಯಂತಿಯ ಮೃತ್ಯುಂಜಯ ಸ್ವಾಮೀಜಿಯವರು ಸತತವಾಗಿ 2-3 ವರ್ಷ ಪಾದಯಾತ್ರೆ, ಸಮಾವೇಶಗಳು ಹರತಾಳ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊನೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 70 ದಿನ ಧರಣಿ ಕುಳಿತ ಕಾರಣಕ್ಕಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಮುಖ್ಯಮಂತ್ರಿ ಬೊಮ್ಮಾಯಿ ರವರಿಗೆ ಆದೇಶ ನೀಡಿ 2D ಮೀಸಲಾತಿ ಜಾರಿಗೆ ಬರುವುದಕ್ಕೆ ಕಾರಣವಾಗಿದೆ ಬಸವ ಜಯಂತಿಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಇಡೀ ಕರ್ನಾಟಕದ ಲಿಂಗಾಯತ ಸಮಾಜ ಚಿರಋಣಿಯಾಗಿದೆ ಎಂದು ಮಲ್ಲೇಶ್ ಅಭಿಪ್ರಾಯ ಪಟ್ಟರು
ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್ ಹರಿಹರದ ಮಾಜಿ ಶಾಸಕ ಶಿವಶಂಕರ್ ಮುಂತಾದವರ ನೇತೃತ್ವದಲ್ಲಿ ಈ ಹೋರಾಟ ಆರಂಭವಾಗಿ ಯಶಸ್ವಿಯಾಗಿದೆ ನಮ್ಮ ಸಮಾಜ ಅವರಿಗೂ ಆಭಾರಿಯಾಗಿರುತ್ತದೆ ಎಂದು ಮಲ್ಲೇಶ್ ಹೇಳಿದ್ದಾರೆ
ರಾಜ್ಯದ ಚುನಾವಣಾ ಆಯೋಗ ಅನುಮತಿ ನೀಡಿದ್ದಲ್ಲಿ 5 ಲಕ್ಷ ಜನ ಲಿಂಗಾಯತರ ಸಮಾವೇಶ ಮಾಡಿ ಪ್ರಧಾನಿಗಳಿಗೆ ಅಮಿತ್ ಶಾ ರವರಿಗೆ ಬಸವ ವಿಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಯತ್ನಾಳ್ ಕಾಶಪ್ಪನವರ್ ಶಿವಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಮಲ್ಲೇಶ ಅವರು ತಿಳಿಸಿದ್ದಾರೆ
ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಅವರ ಹೋರಾಟದ ಫಲವಾಗಿ ಒಕ್ಕಲಿಗರಿಗೆ 2C ಮೂಲಕ ಶೇಕಡ 6 ರಂತೆ ,SC / ST ಜನರಿಗೆ ಮೀಸಲಾತಿ ಹೆಚ್ಚಳ, ಕುರುಬ ಜನಾಂಗವನ್ನು ST ಗೆ ಸೇರಿಸುವಂತೆ ಶಿಫಾರಸು ಮಾಡಿರುವುದು ಹಾಗೂ ಸದಾಶಿವ ಆಯೋಗ ಜಾರಿಯಾಗುವುದಕ್ಕೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ಹೋರಾಟ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದೆ ಎಂದು ಮಲ್ಲೇಶ್ ಭಕ್ತಿ ಹೇಳಿದರು
ಈ ಮೀಸಲಾತಿ ಚಳುವಳಿಗೆ ಸಿದ್ದರಾಮಯ್ಯನವರು ಭಾರಿ ವಿರೋಧ ವ್ಯಕ್ತಪಡಿಸಿದರು ಸಿದ್ದರಾಮಯ್ಯನವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದು ರಾಜ್ಯದ ಬಡ ಜನತೆಯ ಪರವಾಗಿ ಮೀಸಲಾತಿ ಹೋರಾಟಕ್ಕೆ ಕೈಜೋಡಿಸಿರಲ್ಲ ಎಂದು ಈ ಕಾರಣಕ್ಕೆ ಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಮಲ್ಲೇಶ್ ಕರೆ ನೀಡಿದರು
ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಒಳಗೊಂಡ…
ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ…
ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…