ಮೈಸೂರು : ವೀರ ಸಾವಾರ್ಕರ್ ಯುವ ಬಳಗದ ವತಿಯಿಂದ ಇಂದು ಸಾವಾರ್ಕರ್ ರವರ ೧೪೪ ನೇ ಜಯಂತಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಮರ್ ರಹೇ, ಅಮರ್ ರಹೇ ವೀರ ಸಾವರ್ಕರ್ ಅಮರ ರಹೇ ಎಂದು ವಿವಿಧ ಘೋಷಣೆ ಕೂಗುತ್ತಾ ಆಚರಿಸಲಾಯಿತು.
ಇದೆ ಸಂದರ್ಭದಲ್ಲಿ ಶ್ರೀರಾಮ ಸೇನೆ ಯ ರಾಜ್ಯ ಕಾರ್ಯದರ್ಶಿಗಳಾದ ಸಂಜಯ್ ಮಾತನಾಡಿ, ವೀರ ಸಾವರ್ಕರ್ ರವರು 2 ಬಾರಿ ಅನುಭವಿಸಿದ ಕರಿನೀರ ಶಿಕ್ಷೆ ಯನ್ನು ಇಂದಿನ ಯುವ ಪೀಳಿಗೆ ನೆನೆಯಬೇಕಿದೆ, ಹಾಗೆ ಸ್ವಾತಂತ್ರ ಹೋರಾಟಕ್ಕೆ ಕ್ರಾಂತಿಕಾರಿಗಳ
ಕೊಡುಗೆ ಮರೆಯಬಾರದು ಎಂದು ತಿಳಿಸಿದರು
ನಂತರ ಮಾತನಾಡಿದ ಯುವ ಮುಖಂಡ ಮಧು ಸೋಮಶೇಖರ್ ಇಂದಿನ ಯುವಕರು ಹೆಚ್ಚು ಸ್ವತಂತ್ರ ಕ್ಕೆ ಹೋರಾಡಿದವರ ಬಗ್ಗೆ ತಿಳಿಯಬೇಕು ಅವರ ಪುಸ್ತಕಗಳನ್ನು ಖರಿದಿಸಿ ಓದಬೇಕು ಚಿಕ್ಕ ವಯಸ್ಸಿನಲ್ಲೆ ನಾವು ದೇಶಾಭಿಮಾನ ಹೆಚ್ಚಿಸುವಂತಹ ಶಾಲೆಗಳಲ್ಲಿ ಕೆಲಸವಾಗಬೇಕಿದೆ ಇದಕ್ಕೆ ನಮಗೆ ಇಸ್ರೇಲ್ ದೇಶ ಮಾದರಿಯಾಗಿ ತೆಗೆದುಕೊಳ್ಳಬೇಕು, ಹಾಗೆ ಸ್ವತಂತ್ರ ಕ್ಕೆ ಹೊರಾಡಿದ ಯಾವುದೆ ವ್ಯಕ್ತಿ ಇರಲಿ ಅವರ ಬಗ್ಗೆ ಗೌರವ ಇಟ್ಟುಕೊಳ್ಳ ಬೇಕಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ವೀರ ಸಾವರ್ಕರ್ ಯುವ ಬಳಗದ ಸಂದೇಶ್ ಪವಾರ್, ಮಹೇಶ್ ರಾಜೇ ಅರಸ್, ವಿಕ್ರಂ ಅಯ್ಯಂಗಾರ್, ಮನೋಜ್, ಪ್ರಮೋದ್ ಗೌಡ, ಅಭಿಷೇಕ್ ಗೌಡ,ರವಿ, ಕಾರ್ತಿಕ್ ಸಿದ್ದೇಗೌಡ, ಚಂದನ್ ಗೌಡ, ರಂಗರಾಜು ಬಳಗದ ಮತ್ತಿತ್ತರು ಭಾಗವಹಿಸಿದ್ದರು.
ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…