ಮೈಸೂರು: ಮೈಸೂರಿನ ಮೃಗಾಲಯದಲ್ಲಿ ಗೊರಿಲ್ಲಾದ ಹುಟ್ಟು ಹಬ್ಬದ ಸಂಭ್ರಮ ಮನೆ ಮಾಡಿತ್ತು. ೧೫ನೇ ವಸಂತಕ್ಕೆ ಕಾಲಿರಿಸಿದ್ದ ‘ತಬೋ’ ಹೆಸರಿನ ಗೊರಿಲ್ಲಾಗೆ ಇಷ್ಟದ ಹಣ್ಣು-ತರಕಾರಿ ನೀಡಿ ಜನ್ಮ ದಿನ ಆಚರಿಸಲಾಯಿತು.
ಕೊರೊನಾದ ಬಳಿಕ ಕಳೆದ ವರ್ಷ ಜರ್ಮನಿಯಿಂದ ಮೈಸೂರು ಮೃಗಾಲಯಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಎರಡು ಗೊರಿಲ್ಲಾ ತರಲಾಗಿತ್ತು. ಅದರಲ್ಲಿ ತಬೋ ಎಂಬ ಗಂಡು ಗೊರಿಲ್ಲಾ ಇಂದು ೧೫ನೇ ವರ್ಷ ಕಾಲಿರಿತ್ತು. ಈ ಹಿಂದೆ ಜರ್ಮನಿ ಮೃಗಾಲಯದಲ್ಲೂ ಪ್ರತಿ ವರ್ಷ ತಬೋಗೆ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು.
ಮೈಸೂರು ಮೃಗಾಲಯಕ್ಕೆ ಕರೆತಂದ ಬಳಿಕ ಕಳೆದ ಜನವರಿಗೆ ಡೆಂಬಾ ಎಂಬ ಗೊರಿಲ್ಲಾಗೆ ೯ನೇ ವರ್ಷದ ಜನ್ಮ ದಿನವನ್ನು ಆಚರಿಸಲಾಗಿತ್ತು. ಇಂದು ತಬೋಗೆ ಹುಟ್ಟು ಹಬ್ಬ ಆಚರಿಸಿ, ವಿವಿಧ ಹಣ್ಣು, ತರಕಾರಿಂನ್ನು ವಿಶಿಷ್ಟವಾಗಿ ಜೋಡಿಸಿ, ಅದಕ್ಕೆ ತಿನ್ನಲು ನೀಡಿ ಸಂಭ್ರಮಿಸಲಾಯಿತು.
ಗೊರಿಲ್ಲಾದ ಮನೆ ಆವರಣದಲ್ಲಿ ‘ಹ್ಯಾಪಿ ಬರ್ತ್‌ಡೇ ತಬೋ ಎಂದು ತರಕಾರಿಯಿಂದ ಬರೆಯಲಾಗಿತ್ತು. ಫೈನಾಪಲ್, ಪರಂಗಿ ಹಣ್ಣು, ಸೇಬು, ಕಿತ್ತಳೆ, ಕರ್ಬೂಜಾ, ದ್ರಾಕ್ಷಿ, ಕಲ್ಲಂಗಡಿ, ಕರ್ಜೂರ, ಬಾದಾಮಿ, ಗೋಡಂಬಿ ಸೇರಿದಂತೆ ವಿವಿಧ ಹಣ್ಣುಗಳಿಂದ ವಿಶಿಷ್ಟವಾಗಿ ಜೋಡಿಸಲಾಗಿತ್ತು. ಗೊರಿಲ್ಲಾ ಮನೆ ಆವರಣದಲ್ಲಿ ಹಣ್ಣು, ತರಕಾರಿಗಳಿಂದ ಅಲಂಕಾರ ಮಾಡಿರುವುದನ್ನು ಗಮನಿಸಿದ ಪ್ರವಾಸಿಗರು ಕುತೂಹಲದಿಂದ ಕಾಯುತ್ತಿದ್ದರು.
ಈ ವೇಳೆ ಬೋನ್‌ನಿಂದ ಹೊರಗೆ ಬಂದ ತಬೋ ಪ್ರವಾಸಿಗರು ನಿಂತಿದ್ದ ಸ್ಥಳದತ್ತ ಬಂದು ಅಲ್ಲಿರಿಸಲಾಗಿದ್ದ ಹಣ್ಣು-ತರಕಾರಿಯನ್ನು ತಿಂದು ಸಂಭ್ರಮಿಸಿತು. ಈ ವೇಳೆ ನೆರೆದಿದ್ದ ಪ್ರವಾಸಿಗರು ‘ಹ್ಯಾಪಿ ಬರ್ತ್ ಡೇ ತಬೋ ಎಂದು ಕೂಗಿ ಶುಭ ಕೋರಿ ಧೀರ್ಘಕಾಲ ಸುಖವಾಗಿ ಬಾಳಲಿ ಎಂದು ಹರಸಿದರು.
ಮೈಸೂರು ಮೃಗಾಲಯಕ್ಕೆ ತಂದಿರುವ ತಬೋ ಹೆಸರಿನ ಗೊರಿಲ್ಲಾಗೆ ೧೫ನೇ ವರ್ಷದ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಆಚರಿಸಲಾಗಿದೆ. ಗೊರಿಲ್ಲಾ ಇರುವ ಬೋನ್‌ನ ಆವರಣದಲ್ಲಿ ವಿವಿಧ ಹಣ್ಣು, ತರಕಾರಿಯನ್ನು ಕತ್ತರಿಸಿ ಜೋಡಿಸಿಡಲಾಗಿತ್ತು. ಪ್ರವಾಸಿಗರು ನೆರೆದಿದ್ದ ಸಂದರ್ಭದಲ್ಲಿ ತಬೋ ಬೋನ್‌ನಿಂದ ಹೊರಬಂದು ಇಷ್ಟದ ಹಣ್ಣು-ತರಕಾರಿ ತಿಂದಿದೆ. ಪಾಲಕರು ವಿಶೇಷ ಆಸಕ್ತಿವಹಿಸಿ ತಬೋದ ಜನ್ಮ ದಿನ ಆಚರಿಸಿದ್ದಾರೆ. ಪ್ರವಾಸಿಗರು ತಬೋ ಜನ್ಮ ದಿನಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದ್ದಾರೆ.
-ಅಜಿತ್ ಎಂ.ಕುಲಕರ್ಣಿ, ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…
ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…