ಜಿಲ್ಲೆಗಳು

ಮೈಸೂರು ವಿವಿಯಲ್ಲಿ ವಾಮಾಚಾರ : ಕುಲಸಚಿವರಿಗೆ ದೂರು

ಮೈಸೂರು : ಕರ್ನಾಟಕ ರಾಜ್ಯ ಮುಕ್ತ  ವಿಶ್ವವಿದ್ಯಾಲಯದಲ್ಲಿ ಸಂವಹನ ಹಾಗೂ ಪತ್ರಿಕೋದ್ಯಮ ಅಧ್ಯಯನ ವಿಭಾಗದಲ್ಲಿ ವಾಮಾಚಾರ ನಡೆದಿರುವ ಸಂಬಂಧವಾಗಿ ವಿಭಾಗದ ಮುಖ್ಯಸ್ಥರು ಕುಲಸಚಿವರಿಗೆ ದೂರು ನೀಡಿದ್ದಾರೆ.
ಸೋಮವಾರದಂದು ಕೆಲಸಕ್ಕೆ ಹಾಜರಾದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ತೇಜಸ್ವಿ ನವಿಲೂರು ಕೊಠಡಿಯ ಬಾಗಿಲು ತೆರೆದು ತಮ್ಮ ಟೇಬಲ್‌ ನ ಡ್ರಾಯರ್‌ ಎಳೆದಾಗ ಕೋಳಿಯ ತಲೆ, ಕಾಲು,ಕುಂಕುಮ, ಕೂದಲು,ಬಳೆ ಚೂರು ಇವುಗಳ ಜೊತೆಗೆ ಪೋಟೋ ಕತ್ತರಿಸಿರುವುದು ಕಂಡು ಬಂದಿದೆ.
ಈ ಬಗ್ಗೆ ತೇಜಸ್ವಿ ಅವರು ಕುಲಪತಿ ವಿಶೇಷಾಧಿಕಾರಿ ಗಮನಕ್ಕೆ ತಂದಿದ್ದಾರೆ. ನಂತರ ವಿಭಾಗದ ಮುಖ್ಯಸ್ಥೆ ಹೇಮಲತಾ ಅವರು ಕುಲಸಚಿವರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಅವರು ವಾಮಾಚಾರ ಸಂಬಂಧ ವಿಭಾಗದ ಮುಖ್ಯಸ್ಥರು ಹಅಗೂ ಕುಲಸಚಿವರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

andolanait

Recent Posts

ದಿ ಕೇರಳ ಸ್ಟೋರಿ 2 ಚಿತ್ರ ಬಿಡುಗಡೆಗೆ ಕೇರಳ ಹೈಕೋರ್ಟ್‌ ತಡೆ

ಕೊಚ್ಚಿ: ಈ ವಾರದ ಆರಂಭದಲ್ಲಿ ಚಿತ್ರದ ಸೆನ್ಸಾರ್‌ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿವಾರಣೆ ನಡೆಸಿದ ಕೇರಳ ಹೈಕೋರ್ಟ್‌, ಗುರುವಾರ…

6 mins ago

ಹಾಸನ| ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ: ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಬಸ್‌ ಚಾಲಕ

ಹಾಸನ: ಕೆಎಸ್‌ಆರ್‌ಟಿಸಿ ಬಸ್‌ ಚಾಲಕರೊಬ್ಬರು ತಮಗೆ ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಹಾಸನ…

9 mins ago

ನಾಳೆ ವಿಜಯಪುರದಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ

ಬೆಂಗಳೂರು: ಹಾಸನದ ಮಾದರಿಯಲ್ಲೇ ವಿಜಯಪುರ ನಗರದಲ್ಲಿ ನಾಳೆ ಜೆಡಿಎಸ್ ರಜತ ಮಹೋತ್ಸವ ಆಚರಿಸುವ ಮೂಲಕ ಮತ್ತೊಂದು ಶಕ್ತಿ ಪ್ರದರ್ಶನವನ್ನು ನಡೆಸಲಿದೆ.…

29 mins ago

ಮುಖ್ಯಮಂತ್ರಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ಮಾಡುತ್ತಿಲ್ಲ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ಮಾಡುತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ…

32 mins ago

ಫೆ.28ರಂದು ಸೇವಾಲಾಲ್ ಜಯಂತಿ ಕಾರ್ಯಕ್ರಮ: ಬಂಜಾರ ಸೇವಾ ಸಂಘದ ಗೌರವಾಧ್ಯಕ್ಷ ಶಾಂತರಾಜು

ಹನೂರು: ಲಂಬಾಣಿ ಸಮುದಾಯವೂ ಬಡತನ ರೇಖೆಗಿಂತ ಕೆಳಗಿರುವ ಸಣ್ಣ ಸಮುದಾಯವಾಗಿದ್ದು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹನೂರು ಪಟ್ಟಣದಲ್ಲಿ…

1 hour ago

ಜಿಬಿಎಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿದ ಜೆಡಿಎಸ್‌

ಬೆಂಗಳೂರು: ಜೆಡಿಎಸ್‌ ಪಕ್ಷ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಜಿಬಿಎಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ…

2 hours ago