ಮೈಸೂರು: ಶಾಸ್ತ್ರೀಯ ಕನ್ನಡ ಸ್ವಾಯತ್ತ ಕೇಂದ್ರ ಸ್ಥಾಪನೆಗೆ ಜಯಲಕ್ಷ್ಮೀ ವಿಲಾಸ ಅರಮನೆ ಹಸ್ತಾಂತರಕ್ಕೂ ಮುನ್ನ ಕಾನೂನು ಅಭಿಪ್ರಾಯ ಪಡೆಯಬೇಕೆಂದು ಹೇಳಿದ ಮೈಸೂರು ವಿವಿ ಕುಲಸಚಿವರಾದ ವಿ.ಆರ್.ಶೈಲಜಾ ವಿರುದ್ಧ ಸಂಸದ ಪ್ರತಾಪಸಿಂಹ ಹರಿಹಾಯ್ದರು.
ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕುಲಸಚಿವರಾದ ವಿ.ಆರ್.ಶೈಲಜಾ,
ಸಿಂಡಿಕೇಟ್ ಸಭೆಗೂ ಮುನ್ನ ಕಾನೂನು ತಜ್ಞರ ಅಭಿಪ್ರಾಯ ಪಡೆಯಬೇಕಿತ್ತು. ಆದರೆ, ನೇರವಾಗಿ ವಿಷಯ ತರಲಾಗಿದೆ. ಹಾಗಾಗಿ,ಕಾನೂನು ತಜ್ಞರ ವರದಿ ಪಡೆಯಬೇಕಿದೆ ಎಂದು ಹೇಳಿದರು. ಕುಲಸಚಿವರ ಈ ಮಾತಿಗೆ ಕುಪಿತರಾದ ಸಂಸದ ಪ್ರತಾಪಸಿಂಹ, ಸರ್ಕಾರ ಅನುಮತಿ ಕೊಟ್ಟಿರುವಾಗ ಇನ್ಯಾರಿಂದ ಅನುಮತಿ ಕೊಡಬೇಕು ಎಂದು ಕಿಡಿಕಾರಿದರು.ಜಯಲಕ್ಷ್ಮೀ ವಿಲಾಸ ಅರಮನೆ ಮಹಾರಾಜರು ಮೈಸೂರು ವಿವಿಗೆ ಕೊಟ್ಟಿರುವ ಭಿಕ್ಷೆ. ಯಾರ ಮನೆಯ ಆಸ್ತಿಯನ್ನು ಕೇಳುತ್ತಿಲ್ಲ. ಕನ್ನಡದ ಕೆಲಸ ಆಗಬೇಕು. ಕೆಎಎಸ್ ಅಧಿಕಾರಿ ನಮಗೇ ಡಿಕ್ಟೇಟ್ ಮಾಡುತ್ತಾರೆ. ಅಡ್ವೋಕೇಟ್ ಜನರಲ್ ರೀತಿಯಲ್ಲಿ ಮಾತಾಡುತ್ತಾರೆಂದು ಕುಪಿತರಾದರು.
ಕಾನೂನು ಅಭಿಪ್ರಾಯ ಪಡೆಯಬೇಕಾದ್ದು ಯಾರ ಜವಾಬ್ದಾರಿ. ಅದನ್ನು ನಾನೇ ಹೇಳಿಕೊಡಬೇಕೆ? ಐಎಎಸ್ ಅಧಿಕಾರಿಗಳ ಬಳಿ ಸಹಿ ಮಾಡಿಸುವುದು ಎಷ್ಟು ಕಷ್ಟ ನನಗೆ ಗೊತ್ತಿದೆ. ಪ್ರತಿಸಲ ಗುಮಾಸ್ತನ ಕೆಲಸ ಮಾಡಲಾಗುವುದಿಲ್ಲ ಎಂದು ಸಿಡಿಮಿಡಿಗೊಂಡರು.
ಜಯಲಕ್ಷ್ಮೀ ವಿಲಾಸ ಅರಮನೆ ಕಟ್ಟಡ ಹಸ್ತಾಂತರಿಸುವಂತೆ ೮ ತಿಂಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಸಿಂಡಿಕೇಟ್ ಸಭೆಯಲ್ಲೂ ಅನುಮೋದನೆ ದೊರೆತಿರುವಾಗ ಕುಲಸಚಿವೆರಾದ ವಿ.ಆರ್.ಶೈಲಜಾ ಅವರು ಇಲ್ಲದ ತರಲೇ ಮಾಡುತ್ತಿದ್ದಾರೆ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ವಿವರಿಸಿದರು.
ಜಯಲಕ್ಷ್ಮೀ ವಿಲಾಸ ಅರಮನೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿಗಳು ೨೭.೫ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ನವೀಕರಣ ಮಾಡಿ ೪ ಕೊಠಡಿಗಳನ್ನು ಬಳಸುತ್ತೇವೆ. ಉಳಿದದ್ದನ್ನು ಮೈಸೂರು ವಿವಿ ಬಳಸಬಹುದು. ಚುನಾವಣೆ ಬಂದರೆ ಪ್ರಾಜೆಕ್ಟ್ ಮುಂದಕ್ಕೆ ಹೋಗಲಿದೆ ಎಂದರು.
ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದೇನೆ. ಸಚಿವ ಸಂಪುಟ ಸಭೆ ಅನುಮೋದನೆಗೆ ಕಳುಹಿಸಬೇಕು. ನವೀಕರಣ ಮಾಡದಿದ್ದರೆ ಇಡೀ ಕಟ್ಟಡ ಬಿದ್ದು ಹೋಗುತ್ತದೆ. ಮೈಸೂರು ವಿವಿ ಸಹಕಾರ ಕೊಡಬೇಕು. ಕೇಂದ್ರ ಸ್ಥಾಪನೆಯಿಂದ ವಿವಿಗೆ ಗೌರವ ಬರಲಿದೆ ಎಂದು ತಿಳಿಸಿದರು.
ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ, ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಹಾಜರಿದ್ದರು.
ಜಯಲಕ್ಷ್ಮೀ ವಿಲಾಸ ಅರಮನೆ ಹಸ್ತಾಂತರ ಸಂಬಂಧ ಚರ್ಚಿಸಿ ಎರಡು ದಿನಗಳ ಒಳಗೆ ತೀರ್ಮಾನ ತಿಳಿಸುತ್ತೇವೆ.
ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದನ್ನು ತಕ್ಷಣ ಮಾಡುತ್ತೇವೆ. ವಿವಿಯಿಂದ ವಿಳಂಬವಾಗದಂತೆ ನೋಡಿಕೊಳ್ಳುತ್ತೇವೆ.
–ಪ್ರೊ.ಎಚ್.ರಾಜಶೇಖರ, ಹಂಗಾಮಿ ಕುಲಪತಿ
ನಾನೊಬ್ಬ ಕನ್ನಡದ ಬರಹಗಾರ, ಕನ್ನಡದ ಕೆಲಸಕ್ಕಾಗಿ ಕೆಲಸ ಮಾಡುವೆ. ಉಮಾಶ್ರೀ ಸಚಿವರಾಗಿದ್ದಾಗ ಕೇಂದ್ರವನ್ನು ಬೆಂಗಳೂರಿಗೆ ಹಸ್ತಾಂತರಿಸಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಗಿ ಕೈಬಿಡಲಾಯಿತು. ಸಿ.ಟಿ.ರವಿ ಸಚಿವರಾಗಿದ್ದಾಗ ಮತ್ತೆ ಉಳಿಸಿ ಅನುದಾನ ಕೊಡಲಾಯಿತು. ಈಗಿನ ಸಚಿವ ಸುನಿಲ್ ಕುಮಾರ್ ಮುತುವರ್ಜಿ ವಹಿಸಿದ್ದಾರೆ. ಹೀಗಿರುವಾಗ ಎಂಟು ತಿಂಗಳಿಂದ ವಿಳಂಬ ಸಲ್ಲದು.
–ಪ್ರತಾಪ್ ಸಿಂಹ, ಸಂಸದರು.
ಮೈಸೂರು ತಾಲ್ಲೂಕಿನ ನಾಗನಹಳ್ಳಿಯಿಂದ ಪ್ರತಿನಿತ್ಯ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೈಸೂರು ನಗರಕ್ಕೆ ತೆರಳುತ್ತಾರೆ. ಆದರೆ ನಾಗನಹಳ್ಳಿಯಿಂದ ಮೈಸೂರಿಗೆ…
ಮೈಸೂರಿನಲ್ಲಿ ಪಾರಂಪರಿಕತೆ ಹಾಗೂ ಆಧುನಿಕತೆಯನ್ನು ಸಮ್ಮಿಳಿಸಿಕೊಂಡು ನಿರ್ಮಿಸಲಾಗಿರುವ ತಾಲ್ಲೂಕು ಕಚೇರಿಯ ಕಟ್ಟಡದ ಆವರಣದಲ್ಲೇ ಕಸ ಸಂಗ್ರಹವಾಗಿದ್ದು, ಕೆಲಸ ಕಾರ್ಯಗಳಿಗಾಗಿ ಪ್ರತಿ…
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಶಾಸಕ, ಹುಬ್ಬಳ್ಳಿಯ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ…
ಕಳೆದವಾರ, ಫೆಬ್ರವರಿ ೧೯, ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರ ಸೆಟ್ಟೇರಿ ೪೦ ವರ್ಷ. ಅಭಿಮಾನಿಗಳು ಈ ನೆನಪಿನ ಸಂಭ್ರಮವನ್ನು ಆಚರಿಸಿದರು.…
ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ…
ಪುನೀತ್ ಮಡಿಕೇರಿ ಒಟ್ಟು ೮ ಕೋಟಿ ರೂ. ಮೊತ್ತದ ಯೋಜನೆ; ಸಾರಿಗೆ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ ಮಡಿಕೇರಿ: ಕುಶಾಲನಗರದ ಬಹು…