ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಇಂದು H1N1 ಗೆ ಗರ್ಭಿಣಿ ಮಹಿಳೆ ಬಲಿಯಾಗಿರುವ ಘಟನೆ ನಡೆದಿದೆ. ಈ ಮೂಲಕ ಹಂದಿ ಜ್ವರಕ್ಕೆ ಮೊದಲ ಬಲಿ ಇದಾಗಿದೆ. ಹುಣಸೂರಿನ ಕೋಣನಹೊಸಹಳ್ಳಿ ಗ್ರಾಮದ ಮಹಿಳೆಯಾಗಿರುವ ಸ್ವಾಮಿ ನಾಯಕ ಎಂಬುವವರ ಪುತ್ರಿ ಛಾಯಾ (26)ಎಂಬುವವರೇ ಹಂದಿ ಜ್ವರಕ್ಕೆ ಬಲಿಯಾದವರು.
ಛಾಯ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಡಾ. ಹೆಚ್.ಕೆ ಪ್ರಸಾದ್ ಅವರು ಈ ಬಗ್ಗೆ ಆಸ್ಪತ್ರೆಯಿಂದ ವರದಿ ತರಿಸಿಕೊಳ್ಳುತ್ತಿದ್ದು, ಹೆಚ್ಚಿನ ತನಿಖೆ ಮಾಡುಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯಾರಿಗೆ ಅಪಾಯ ಹೆಚ್ಚು ?
ಇದು ಮಳೆಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. H1N1 ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ವಯಸ್ಸಾದವರಿಗೆ ಬೇಗ ತಗುಲುತ್ತದೆ. ಇವರುಗಳು ಹೃದಯ ಸಮಸ್ಯೆ, ಮತ್ತಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು.