ಜಿಲ್ಲೆಗಳು

ಅರಮನೆ ಆವರಣದಲ್ಲಿ ದಸರೆ ಆನೆಗಳ ಸಮ್ಮುಖ ಫಿರಂಗಿ ಸಿಡಿಸಿ ತಾಲೀಮು


ಮೈಸೂರು
: ನಾಡಹಬ್ಬ ದಸರೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ ಇಂದು ನಗರ ಸಶಸ್ತ್ರ ಮೀಸಲು ಪಡೆ (City armed reserve police force) ಪೊಲೀಸರು ಆನೆಗಳ ಸಮ್ಮುಖದಲ್ಲಿ ಫಿರಂಗಿ ಸಿಡಿಸಿ ತಾಲೀಮು (Cannon firing rehearsal) ನಡೆಸಿದರು. 14 ಆನೆಗಳು ಮತ್ತು 43 ಅಶ್ವಗಳು ತಾಲೀಮಿನಲ್ಲಿ ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ದಸರೆ ಗಜೆ ಪಡೆಗೆ ಸೇರಿರುವ 18 ವರ್ಷದ ಕಿರಿಯ ಆನೆ ಪಾರ್ಥಸಾರಥಿ ಫಿರಂಗಿ ಸಿಡಿದಾಗ ಬೆಚ್ಚಿ ಹಿಂದಕ್ಕೆ ಸರಿದ. ಆತನನ್ನು ಮಾವುತರು ನಿಯಂತ್ರಣಕ್ಕೆ ತಂದರು. ಇದೇ ರೀತಿ ಮೊದಲ ಬಾರಿ ದಸರೆ ತಂಡಕ್ಕೆ ಸೇರಿಕೊಂಡಿರುವ ಶ್ರೀ ರಾಮ, ಸುಗ್ರೀವ ಹೆಸರಿನ ಆನೆಗಳೂ ಸ್ವಲ್ಪ ಮಟ್ಟಿಗೆ ಭಯಗೊಂಡವು. ಭೀಮ ಮತ್ತು ತಂಡದ ಹಿರಿಯ ಸದಸ್ಯೆಯಾಗಿರುವ ವಿಜಯಾ ಕೂಡ ಬೆದರಿದಂತೆ ಕಂಡು ಬಂದವು. ಈ ನಡುವೆ ತಾಲೀಮಿಗೆ ಮುನ್ನವೇ ಎರ್ಟನ್‌ ಬೋಲ್ಟ್‌ ಹೆಸರಿನ ಕುದುರೆಯೊಂದು ಗದ್ದಲ ಎಬ್ಬಿಸಿತು. ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದಿದ್ದಾಗ ತಾಲೀಮು ತಂಡದಿಂದ ಹೊರಗೆ ಕಳುಹಿಸಲಾಯಿತು. ಅನುಭವಿ ಆನೆಗಳಾದ ದಸರೆ ಪಡೆಯ ಮಾಜಿ ನಾಯಕ ಅರ್ಜುನ ಮತ್ತು ಹಾಲಿ ನಾಯಕ ಅಭಿಮನ್ಯು ಸೇರಿದಂತೆ ಈ ಹಿಂದೆ ದಸರೆ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಇತರ ಆನೆಗಳು ಯಾವುದೇ ಅಳುಕು ತೋರಿಸದೆ ತಾಲೀಮಿನಲ್ಲಿ ಪಾಲ್ಗೊಂಡವು. ಮೂರು ಸುತ್ತಿನಲ್ಲಿ 21 ಫಿರಂಗಿ ಸಿಡಿಸಲಾಯಿತು ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಡಿಸಿಎಫ್‌ ಡಾ. ವಿ. ಕರಿಕಾಳನ್, ಡಿಸಿಪಿ ಪ್ರದೀಪ್‌ ಗುಂಟಿ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

8 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

10 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

11 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago