ಮೈಸೂರು : ಮಹಾನಗರ ಪಾಲಿಕೆಯ ವತಿಯಿಂದ ಶಾಸಕರ ವಿಚೇಚನಾ ಎಸ್ ಎಫ್ ಸಿ ವಿಶೇಷ ಪ್ಯಾಕೇಜ್ ರೂ 50.00 ಕೋಟಿ ಅನುದಾನದಲ್ಲಿ ಮಾತೃಮಂಡಳಿ ವೃತ್ತದ ಸಮೀಪದ ಶುಭಂ ಷೋರೂಂ ಎದುರಿನ ಹರಳಿಮರದ ಬಳಿಯಕೆ.ಆರ್.ಎಸ್ ರಸ್ತೆಯಿಂದ ಮಾತೃಮಂಡಳಿ ವೃತ್ತದ ಮಾರ್ಗವಾಗಿ ಹುಣಸೂರು ರಸ್ತೆಯವರೆಗೆ ರಸ್ತೆ ಅಭಿವೃದ್ದಿ ಮತ್ತು ಮಾತೃ ಮಂಡಳಿ ವೃತ್ತದ ವಾಲ್ಮೀಕಿ ರಸ್ತೆಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಯ ಮೊತ್ತ ರೂ.340.00ಲಕ್ಷದ ಕಾಮಗಾರಿಗೆ ಇಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್. ನಾಗೇಂದ್ರ ರವರು ಹಾಗೂ ವಾರ್ಡ ನಂ-19 ಹಾಗೂ 22 ಮೈಸೂರು ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀಮತಿ ಭಾಗ್ಯಮಾದೇಶ್ ರವರು ಮತ್ತು ಶ್ರೀಮತಿ ನಮ್ರತಾ ರಮೇಶ್ ರವರು ಹಾಗೂ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಚಿಕ್ಕವೆಂಕಟು ರವರೊಂದಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಶ್ರೀ ಮಹೇಶ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ್ ರಾಜು, ಪ್ರಧಾನ ಕಾರ್ಯದರ್ಶಿ ಪುನೀತ್ ಮತ್ತು ರಮೇಶ್, ಬಿ.ಎಲ್.ಎ-1 ದಿನೇಶ್ ಗೌಡ, ಮಹಿಳಾ ಮೋರ್ಚ ಅಧ್ಯಕ್ಷೆ ತನುಜಾ ಮಹೇಶ್, ವಾರ್ಡ್ ಅಧ್ಯಕ್ಷ – ಮಲ್ಲಿಕಾರ್ಜುನ್ ಹಾಗೂ ಮಂಜು, ಮಾಜಿ ಮಹಾನಗರಪಾಲಿಕೆ ಸದಸ್ಯ ಶ್ರೀರಾಮ್, ಜಯಪ್ರಕಾಶ್, ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಉಪಾಧ್ಯಕ್ಷರು ಹಾಲಿ ನಿರ್ದೇಶಕರಾದ ರಾಮಕೃಷ್ಣ, ವಕೀಲರು & ಸಿಂಡಿಕೇಟ್ ಸದಸ್ಯರಾದ ಶಿವಕುಮಾರ್, ಮುಖಂಡರುಗಳಾದ ಶಿವಪ್ರಕಾಶ್, ಮೈಸೂರು ಸಿಟಿ ಕೊ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶಿವು, ಪೈಲ್ವಾನ್ ಭೈರಪ್ಪ, ಬಾಲಣ್ಣ, ಧನರಾಜ್, ಚಂದ್ರು, ಗಿರೀಶ್, ಗುರುದತ್, ಲಯನ್ ಗಣೇಶ್, ಮಧು, ನಂದೀಶ್, ಬಸವರಾಜು, ಬಾಬಣ್ಣ, ಲಲಿತಾ, ಶ್ಯಾಮ್, ವೇಣು, ಯೋಗೇಶ್, ಚಲುವ, ಗೋವಿಂದರಾಜು, ಸುಧಾಮಣಿ, ಉಮಾ, ಉಮೇಶ್ ಡಾಲು, ಜಯಣ್ಣ, ಅಶೋಕ, ಗುತ್ತಿಗೆದಾರರಾದ ಅಶೋಕ್ ಗೋವಿಂದೇಗೌಡ, ಸಹಾಯಕ ಆಯುಕ್ತರಾದ ಚಂದ್ರಮ್ಮ, ಅಭಿವೃದ್ದಿ ಅಧಿಕಾರಿ ಹೆಗಾನಂದ, ಸಾರ್ವಜನಿಕರು ಹಾಜರಿದ್ದರು