ಮೈಸೂರು: ನಗರ ಕಾಂಗ್ರೆಸ್ ಕಚೇರಿಯಲ್ಲಿಂದುಪತ್ರಿಕಾಗೋಷ್ಠಿ ನಡೆಯಿತು.
ಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಸಂಸದರ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ವಾರ್ಷಿಕವಾಗಿ ಐದು ಕೋಟಿ ರೂ.ಅನುದಾನ ಬರಲಿದೆ. ೨೦೨೦ ಮತ್ತು೨೦೨೧ ರಲ್ಲಿ ಕೋವಿಡ್ ಕಾರಣಕ್ಕಾಗಿ ಅನುದಾನವನ್ನು ನೀಡಿರಲಿಲ್ಲ. ಈಗ ೨೦೨೨ ರಿಂದ ಮತ್ತೆ ನದಿ ೨೦೧೯ರ ಅನುದಾನವನ್ನು ಬೇರೆ ಕ್ಷೇತ್ರದಲ್ಲಿ ಇರುವ ಟ್ರಸ್ಟ್ ಬೇಂದ್ರಾಲ ವೆಂಕಟಕೃಷ್ಣ ಇರ್ವತ್ರಯ ಮೆಮೋರಿಯಲ್ ಟ್ರಸ್ಟ್ ಕಕ್ಕಿಂಜೆ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದಕ್ಕೆ ನೀಡಲಾಗಿದೆ. ಡಾ.ಮುರುಳಿಕೃಷ್ಣ ಇರ್ವತ್ರಾಯ ಅವರಿಗೆ ೧೮ ಲಕ್ಷ ರೂ.ವೆಚ್ಚದಲ್ಲಿ ಮೊಬೈಲ್ ವಾಹನವನ್ನು ೨೦೨೧ ಸೆಪ್ಟೆಂಬರ್ ೫ ರಂದು ನೀಡಿದ್ದಾರೆ. ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು,ಹಲವು ಕುಗ್ರಾಮ.ಕೊನೆಯ ಹಂತದಲ್ಲಿ ಇರುವ ಹಳ್ಳಿಗಳಲ್ಲಿ ಆಂಬ್ಯುಲೆನ್ಸ್ ಇಲ್ಲದೆ ಪರದಾಡುತ್ತಿದ್ದಾರೆ. ಸಂಸದರ ಪತ್ನಿ ನಡೆಸುತ್ತಿರುವ ಮೂಡಿಗೆರೆ ಪಟ್ಟಣದಲ್ಲಿ ಹೊಯ್ಸಳ ಹೆಲ್ತ್ ಕ್ಲಿನಿಕ್ ನಡೆಸುತ್ತಿದ್ದು, ಅಧ್ಯಕ್ಷರಾಗಿ ಮುರುಳಿಕೃಷ್ಣ ಇರ್ವತ್ರಾಯ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ನಿರ್ದೇಶಕರಾಗಿ ಅರ್ಪಿತ ಕಾರ್ಯ ನಿರ್ವಹಿಸಿದರು. ೨೫ ಲಕ್ಷ ರೂ.ಅನುದಾನವನ್ನು ಬೇರೆ ಕ್ಷೇತ್ರಕ್ಕೆ ಕೊಡುವ ಅವಕಾಶ ಇದ್ದರೂ ಸೊಸೈಟಿ,ಟ್ರಸ್ಟ್, ಸಹಕಾರ ಸಂಘಗಳಿಗೆ ಕೊಡುವಂತಿಲ್ಲ ಎನ್ನುವ ನಿಯಮ ಇದೆ. ನಿಯಮ ಉಲ್ಲಂಘನೆ ಮಾಡಿದ್ದರೆ ಅನುಷ್ಠಾನ ಅಧಿಕಾರಿಗಳುನೇರ ಹೊಣೆಗಾರರು. ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೋಮವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗುವುದು. ಮತ್ತೊಂದು ಗೋಪಿನಾಥ್ ಶೆಣೈ ಅವರ ಟ್ರಸ್ಟಿಗೂ ೨೩ ಲಕ್ಷ ರೂ. ನೀಡಿರುವುದು ಕಾನೂನುಬಾಹಿರವಾಗಿದೆ. ಹೊಯ್ಸಳ ಹೆಲ್ತ್ ಕೇರ್ ವಿರುದ್ಧ ಕ್ರಮಜರುಗಿಸಬೇಕು. ವೈಯಕ್ತಿಕ ಮತ್ತು ಮನೆಯ ನೆಂಟರಿಗೆ ಕೊಡುವ ಅವಕಾಶ ಮಾಡುವುದಲ್ಲ. ಹಿಟ್ ಅಂಡ್ ರನ್ ಕೇಸ್ ನಂತೆ ಮಾಡಬೇಡಿ. ನೂರಕ್ಕೆ ನೂರರಷ್ಟು ನಿಯಮ ಉಲ್ಲಂಘನೆ. ಏನಾದರೂ ಮಾತನಾಡಿದರೆ ಪೊಲೀಸ್ ಠಾಣೆಗೆ ದೂರು ಕೊಟ್ಟು ಬಾಯಿ ಮುಚ್ಚಿಸುವ ಕೆಲಸ ನಡೆಯಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು,ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ ಹಾಜರಿದ್ದರು.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…