ಸಂಗೀತ ಸಂಜೆಯ ಜತೆ ಹೊಟ್ಟೆ ತಣಿಸಲಿವೆ ಬಗೆಬಗೆಯ ಆಹಾರ
ಮೈಸೂರು: ಎರಡು ವರ್ಷಗಳ ನಂತರ ಅದ್ದೂರಿ ದಸರಾ ಆಚರಿಸಲು ಮೈಸೂರು ಸಜ್ಜಾಗಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ ನಾನಾ ಬಗೆಯ ಆಹಾರ ಖಾದ್ಯಗಳನ್ನು ಸವಿಯಲು ಮೈಸೂರು ಮತ್ತು ದಸರೆ ವೇಳೆಯಲ್ಲಿ ಭೇಟಿ ನೀಡುವ ಪ್ರವಾಸಿಗರು ಕಾತರರಾಗಿದ್ದಾರೆ.
ಈಗಾಗಲೇ ಸ್ಕೌಟ್ಸ್ ಆಂಡ್ ಗೈಡ್ಸ್ ಮೈದಾನದ ಅಲದ ಮರ ಬಳಿ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನುರಿತ ಬಾಣಸಿಗರು ಮಾಂಸಪ್ರಿಯರ ಬೇಡಿಕೆಗೆ ತಕ್ಕಂತೆ ಬಿರಿಯಾನಿ ತಯಾರಿಸಲು ಆಗಮಿಸಿರುವುದು ವಿಶೇಷವಾಗಿದೆ. ಇತರ ಜತೆಗೆ ಉತ್ತರಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಖಾದ್ಯಗಳು, ಆಂಧ್ರ ಮತ್ತು ತೆಲಂಗಾಣದ ತಿನಿಸುಗಳೂ, ಉತ್ತರಭಾರತದ ವಿಶೇಷ ಖಾದ್ಯಗಳು, ಚೈನಿಸ್ ಮತ್ತು ಕಾಂಟಿನೆಂಟಲ್ ಫುಡ್, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖಾದ್ಯಗಳು ದೊರೆಯಲಿವೆ.
ಈ ಚುರುಮುರಿ,ಪಾನಿಪುರಿ,ಮಂಗಳೂರು ಬಜ್ಜಿ,ದಾವಣಗೆರೆ ಬೆಣ್ಣೆ ದೋಸೆ ಒಂದು ಕಡೆ ಸವಿಯಬಹುದಾದರೆ,ಮತ್ತೊಂದು ಕಡೆ ಈ ಬಾರಿ ಮಡಿಕೆ, ಬೊಂಬು ಬಿರಿಯಾನಿ ಘಮಲು ಬಾಯಿ ಚಪ್ಪರಿಸುವವರನ್ನುಕೈ ಬೀಸಿ ಕರೆಯಲು ಸಜ್ಜಾಗಿದೆ.
ಮಳಿಗೆಗಳ ನಿರ್ಮಾಣ: ಪ್ರತಿ ವರ್ಷದಂತೆ ಈ ಬಾರಿಯೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿದ್ದು, ಸ್ಕೌಟ್ಸ್ ಮೈದಾನದಲ್ಲಿ 118 ಮಳಿಗೆಗಳಿದ್ದು,ಇದರಲ್ಲಿ ಒಂದು ಬದಿಯಲ್ಲಿ 40 ಮಾಂಸಾಹಾರಿ ಮಳಿಗೆಗಳು ಇವೆ. ಚಿಕನ್, ಮಟನ್ ಕಬಾಬ್, ಧಮ್ ಬಿರಿಯಾನಿ, ಮಂಗಳೂರು ಫಿಶ್, ಬನ್ನೂರುಕುರಿ ಬಿರಿಯಾನಿ, ಫಿಶ್‌ಕಬಾಬ್, ಫಿಶ್ ಫ್ರೈ ಮೊದಲಾದ ತರಹೇವಾರಿ ಖಾದ್ಯಗಳು ನಾನ್ ವೆಜ್ ಪ್ರಿಯರ ಹೊಟ್ಟೆ ತಣಿಸಲಿವೆ.
ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ 74 ಮಳಿಗೆಗಳನ್ನು ನಿರ್ಮಿಸಲಿದ್ದು, ಇಲ್ಲಿಯೂ ಸ್ಥಳೀಯ ಮತ್ತು ಹೊರಗಿನವರು ವಿವಿಧ ಖಾದ್ಯಗಳನ್ನು ಉಣಬಡಿಸಲಿದ್ದಾರೆ. ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಮಾಡಲಾಗಿದ್ದು, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಮಳೆ ಬಂದರೆ ಯಾವುದೇ ತೊಂದರೆ ಆಗದಂತೆ ವಾಟರ್ ಪ್ರೂಫ್ ಶಾಮಿಯಾನ ಹಾಕಲಾಗಿದ್ದು, ವಿದ್ಯುತ್,ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡಲು ಪ್ರತ್ಯೇಕ ಪೌರ ಕಾರ್ಮಿಕರು,ವಿಶೇಷ ಕಾರ್ಮಿಕರನ್ನು ನೇಮಿಸಿದ್ದು, ತಿಂಡಿ-ತಿನಿಸುಗಳನ್ನು ಸವಿದ ಮೇಲೆ ತಟ್ಟೆಗಳನ್ನು ಕಸದ ಡಬ್ಬಿಗೆ ಹಾಕುವಂತೆ ಮಾಡಲು ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಸ್ವಚ್ಛ ಮೈಸೂರಿನ ಹಿರಿಮೆಯನ್ನು ಉಳಿಸಿಕೊಳ್ಳುತ್ತಲೇ ಆಹಾರ ಮೇಳ ಯಶಸ್ವಿಗೊಳಿಸಲು ಸಮಿತಿ ಸಜ್ಜಾಗಿದೆ.
ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ಜೂಗನಹಳ್ಳಿ ವ್ಯಾಪ್ತಿಯ ತೋಟದ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಚಿನ್ನ ದೋಚಿ ಪರಾರಿಯಾಗಿದ್ದ…
ಮದ್ದೂರು : ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್ ದಿವಾಸ್ ಕಾರ್ಯಕ್ರಮದಲ್ಲಿ ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವ…
ಬೆಂಗಳೂರು : ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ, ಜೀವಹಾನಿ ಮಾಡುತ್ತಿರುವ ಆನೆಗಳ ಸೆರೆಗೆ ಆದೇಶ ನೀಡಿದ್ದು, ಈಗಾಗಲೇ 2 ಆನೆ ಸೆರೆ…
ಬೆಂಗಳೂರು : ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ…
ಹೊಸದಿಲ್ಲಿ : ಎಲ್‌ಪಿಜಿ ಸಿಲಿಂಡರ್ ರಿಫಿಲಿಂಗ್ ಸಮಯ ಮಿತಿ ಬದಲಾವಣೆ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದು, ಇದೀಗ ಪೆಟ್ರೋಲಿಯಂ ಮತ್ತು…
ನಾಪೋಕ್ಲು : ದ್ವಿಚಕ್ರ ವಾಹನವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಚೈಯಂಡಾಣೆಯ ನರಿಯಂದಡ ಗ್ರಾಮದಲ್ಲಿ ಜರುಗಿದೆ. ಸ್ಥಳೀಯ…