ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಉದ್ಯಮ ಶೀಲತೆಯನ್ನು ಬೆಳೆಸುತ್ತಾ, ಸಾಮಾಜಿಕ ಉದ್ಯಮವಾಗಿ ಗುರುತಿಸಿಕೊಂಡಿರುವ ವಿ ಮಿಲ್ ಸಂಸ್ಥೆಯು ರಾಗಿಯ ಮಹತ್ವ ತಿಳಿಸುವ ಉದ್ದೇಶದಿಂದ ನವಸಿರಿ ಅಭಿಯಾನ ಆರಂಭಿಸಿದ್ದು, ಇದರ ಭಾಗವಾಗಿ ಸೆ.27ರಿಂದ ಹಮ್ಮಿಕೊಳ್ಳಲಿರುವ ನಗರದ ಜೆಕೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಸಂಸ್ಥೆಯು ಸ್ಟಾಲ್ ಹಾಕುವ ಮೂಲಕ ವಿವಿಧ ಸ್ವರ್ಧೆಗಳನ್ನು ಆಯೋಜಿಸಿದೆ.
ಸ್ಪರ್ಧೆಗಳು : ಸೆ. 26, 27 ನವಕುಂಚ ಸ್ಪರ್ಧೆ, ಸೆ.28 ರಂದು ಬೆಳಿಗ್ಗೆ 11ಕ್ಕೆ ನವರುಚಿ ಸ್ಪರ್ಧೆ, ಸೆ.29 ಮಧ್ಯಾಹ್ನಕ್ಕೆ ನವಸಿರಿಧಾನ್ಯ ಸ್ಪರ್ಧೆ, ಸೆ.26 ರಿಂದ 28ರವರೆಗೆ ನವರಾಗ ಸ್ಪರ್ಧೆ, ಸೆ.26 ರಿಂದ 29ರವರೆಗೆ ನವರಂಗ್, ನವಚಿತ್ರ ಸ್ಪರ್ಧೆ, ನವಕಾವ್ಯ ಸ್ಪರ್ಧೆಗಳನ್ನು ಮತ್ತು ಸೆ.26ರಿಂದ ಸೆ.30ರವರೆಗೆ ನವಶಕ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತೀ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳು ಇರುತ್ತವೆ.
ಸ್ಪರ್ಧೆ ವಿವರ: ನವರುಚಿ ರಾಗಿ ಮುದ್ದೆ ತಿನ್ನುವುದು. ನವಕಾವ್ಯ ರಾಗಿ ಮತ್ತು ಸಿರಿಧಾನ್ಯದ ಕುರಿತು ಕವಿತೆ ರಚನೆ ಮತ್ತು ವಾಚನ. ನವರಂಗ್ ನವರಾತ್ರಿ ಹಿನ್ನೆಲೆ ಬಣ್ಣದ ಉಡುಗೆ ತೊಟ್ಟು ಪೋಟೋ ಕಳುಹಿಸುವುದು. ನವ ಕುಂಚ
ಮೈಸೂರು ದಸರಾವನ್ನು ಬಿಂಬಿಸಬೇಕು ಪೇಂಟಿಂಗ್ ಮಾಡುವುದು. ನವ ರಾಗ ಶ್ರೀ ಪುರಂದರದಾಸರು ರಚಿಸಿದ ರಾಗಿ ತಂದಿರ ಭಿಕ್ಷಕೆ ರಾಗಿ ತಂದಿರಾ ಹಾಡನ್ನು ಹಾಡಿ ಕಳಿಸಬೇಕು. ನವಸಿರಿಧಾನ್ಯ ಸಿರಿಧಾನ್ಯ ಬಳಸಿ ಅಡುಗೆ ಮಾಡುವುದು. ನವಶಕ್ತಿ ದಸರಾ ಗೊಂಬೆಯ ವಿಡಿಯೋ 2 ನಿಮಿಷದೊಳಗೆ ಇರಬೇಕು.
ಗೊಂಬೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರಬೇಕು.
ವಿಶೇಷ: ಇನ್ನು ಈ ಸ್ಟಾಲ್ ನಲ್ಲಿ ವಿ ಮಿಲ್ ನ 14 ಗ್ರಾಮೀಣ ಭಾಗದ ಮಹಿಳೆಯರು ದೇಸಿ ಆಹಾರ ಉತ್ಪನ್ನಗಳ ಬಗ್ಗೆ ಅಚ್ಚುಕಟ್ಟಾಗಿ ಮಾಹಿತಿ ನೀಡಲಿದ್ದು, ಇಂತಹ ಒಂದು ಉದ್ಯಮದಿಂದ ಆರ್ಥಿಕವಾಗಿ ಪ್ರಗತಿಗೊಂಡ ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಮೂಲಕ ಮತ್ತಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿದ್ದಾರೆ. ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಣೆ ಬರುವ ಪ್ರೇಕ್ಷಕರು ಸ್ಟಾಲ್ ಗೆ ಭೇಟಿ ನೀಡಿ ಇಂತಹ ಮಹಿಳೆಯರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡುತ್ತೇವೆ.
ಸೂಚನೆಗಳು: ಸ್ಮರ್ಧೆಯಲ್ಲಿ ಪ್ರವೇಶಕ್ಕಾಗಿ #navasiri ಹ್ಯಾಶ್‌ಟ್ಯಾಗ್ ಜೊತೆಗೆ @wemillindia ಅನ್ನು ಟ್ಯಾಗ್ ಮಾಡುವುದು ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7337844633.
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…
ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್, ಕಲಬುರ್ಗಿ,…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ…
ಇಸ್ಲಾಮಾಬಾದ್: ಇರಾನ್, ಅಮೇರಿಕಾ-ಇಸ್ರೇಲ್ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದಾಗಿದೆ. ಮಾರ್ಚ್.23ರಂದು…
ಮಡಿಕೇರಿ: ನಾಡಿನಾದ್ಯಂತ ಇಂದು ಹೊಸ ವರ್ಷ ಯುಗಾದಿ ಸಂಭ್ರಮ ಮನೆ ಮಾಡಿದ್ದು, ಕೊಡಗಿನ ಮನೆ ಮನೆಯಲ್ಲೂ ಯುಗಾದಿ ಹಬ್ಬದ ಸಡಗರ…
ಟಿ.ನರಸೀಪುರ: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪುಣ್ಯಸ್ನಾನಕ್ಕೆಂದು ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಮೈಸೂರು ಜಿಲ್ಲೆ…