ಜಿಲ್ಲೆಗಳು

ದಸರಾಕ್ಕೆ ಮೈಸೂರು ಸಜ್ಜು

ಜಗಮಗಿಸುವ ದೀಪಗಳ ಬೆಳಕಿನಲ್ಲಿ ಮನೆಮಾಡಿದ ಸಂಭ್ರಮ

ಮೈಸೂರು: ಮಹೋತ್ಸವಕ್ಕೆ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ವೇದಿಕೆಯಲ್ಲಿ ಬೆಳ್ಳಿ ತೇರಿನಲ್ಲಿ ವಿರಾಜಮಾನವಾಗಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದು, ಇದಕ್ಕೆ ಬೆಟ್ಟದಲ್ಲಿ ವಿಶೇಷ ವೇದಿಕೆ ಸಜ್ಜಾಗಿದೆ.

ಉಳಿದಂತೆ ದಸರಾ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪಂದ್ಯಾವಳಿ, ಅರಮನೆ ಆವರಣದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಚಲನ ಚಿತ್ರೋತ್ಸವ, ಆಹಾರ ಮೇಳ ಕೂಡ ಸೆ.೨೬ರಂದೇ ಚಾಲನೆ ಪಡೆಯಲಿದ್ದು ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ದಸರಾ ಸಂದರ್ಭದಲ್ಲಿ ಅರಮನೆ ಆವರಣದಲ್ಲೂ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಅರಮನೆ ಆವರಣದಲ್ಲಿ ದಿಲ್ಲಿಯ ಕೆಂಪು ಕೋಟೆ ತಲೆ ಎತ್ತಿದೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳಕ್ಕೆ ಮಳಿಗೆಗಳು ತಲೆ ಎತ್ತಿವೆ. ನಗರದ ರಸ್ತೆಗಳು ಡಾಂಬರು ಕಾಣುತ್ತಿವೆ.

ವಸ್ತುಪ್ರದರ್ಶನದಲ್ಲಿ ಸ್ವಾತಂತ್ರ್ಯ ಯೋಧರ ಮರಳು ಕಲಾಕೃತಿ

ಮೈಸೂರು: ದೊಡ್ಡಕೆರೆ ಮೈದಾನದಲ್ಲಿ ಸೆ.೨೬ರಿಂದ ೯೦ ದಿನಗಳ ಕಾಲ ನಡೆಯಲಿರುವ ದಸರಾ ವಸ್ತು ಪ್ರದರ್ಶನದಲ್ಲಿ ಈ ಬಾರಿ ಪ್ರವಾಸಿಗರನ್ನು ವಿಶೇಷ ರೀತಿಯಲ್ಲಿ ಆಕರ್ಷಿಸಲು ನಟ ಪುನೀತ್‌ರಾಜ್‌ಕುಮಾರ್, ಸ್ವಾತಂತ್ರ್ಯ ಹೋರಾಟಗಾರರ ಸ್ಯಾಂಡ್ ಮ್ಯೂಸಿಯಂ (ಮರಳಿನ ಕಲಾಕೃತಿಗಳ ಸಂಗ್ರಹ) ನಿರ್ಮಿಸಲಾಗಿದೆ.

ಪ್ರತಿ ವರ್ಷ ೧೨ ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ವಸ್ತು ಪ್ರದರ್ಶನದಲ್ಲಿ ಈ ಬಾರಿ ಹಲವಾರು ವಿಶೇಷತೆಗಳು ಇವೆ. ಕಾವೇರಿ ಕಲಾ ಗ್ಯಾಲರಿ ಈ ವರ್ಷದ ಆಕರ್ಷಣೆಯಾಗಿದೆ. ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆಗಳ ಸಿದ್ಧತೆ ಶೇ.೮೦ರಷ್ಟು ಮುಗಿದಿದೆ. ೩೯ ಸರ್ಕಾರಿ, ಅರೆ ಸರ್ಕಾರಿ ಮಳಿಗೆಗಳಲ್ಲಿ ೨೬ ಮಳಿಗೆಗಳ ಕಾಮಗಾರಿ ಶೇ.೮೦ರಷ್ಟು ಪೂರ್ಣವಾಗಿದ್ದರೆ, ೧೩ ಮಳಿಗೆಗಳು ಒಂದು ವಾರದಲ್ಲಿ ಅಂತಿಮವಾಗಲಿದೆ ಎಂದು ಹೇಳಲಾಗಿದೆ.

ನಾಳೆಯಿಂದ ಅ.೨ರವರೆಗೆ ದಸರಾ ಕುಸ್ತಿ ಪಂದ್ಯಾವಳಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಸೆ.೨೬ರಿಂದ ಅ.೨ರವರೆಗೆ ದಸರಾ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕಿಶೋರಿ, ದಸರಾ ಕುಮಾರ್, ದಸರಾ ಕಿಶೋರ್ ಪ್ರಶಸ್ತಿಗಳಿಗೆ ಪಾಯಿಂಟ್ ಕುಸ್ತಿಗಳನ್ನು ನಡೆಸಲಾಗುತ್ತದೆ. ಸೆ.೨೬ರಂದು ಮಧ್ಯಾಹ್ನ ೩.೩ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಿದ್ದು, ಉತ್ತಮ ನಾಡ ಕುಸ್ತಿ ಪಟುಗಳಿಗೆ ಮೇಯರ್ ಕಪ್, ಸಾಹುಕಾರ್ ಚನ್ನಯ್ಯ ಕಪ್, ಮೈಸೂರು ಮಹಾರಾಜ ಒಡೆಯರ್ ಕಪ್‌ಗಳನ್ನು ನೀಡಲಾಗುವುದು.

ಕುಪ್ಪಣ್ಣ ಪಾರ್ಕ್‌ನಲ್ಲಿ ಪುಷ್ಪ ಕಾಶಿ, ರಾಷ್ಟ್ರಪತಿ ಭವನ

ಮೈಸೂರು: ಹಾರ್ಡಿಂಜ್ ವೃತ್ತದ ಬಳಿ ಇರುವ ನಿಶಾದ್ ಬಾಗ್ ಕುಪ್ಪಣ್ಣ ಪಾರ್ಕ್‌ನಲ್ಲಿ ಸೆ.೨೬ರಿಂದ ಅ.೫ರವರೆಗೆ ದಸರಾ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಗಾಜಿನ ಮನೆಯಲ್ಲಿ ೨೦ ಅಡಿ ಎತ್ತರದ ರಾಷ್ಟ್ರಪತಿ ಭವನದ ಮಾದರಿ, ನಟ ಪುನೀತ್ ರಾಜ್‌ಕುಮಾರ್ ಮಾದರಿಯನ್ನು ಪುಷ್ಪಗಳಿಂದ ನಿರ್ಮಿಸಲಾಗುವುದು. ಮೈಸೂರು ರಾಜರ ಆಳ್ವಿಕೆಯ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ‘ಥಂಡಿ ಸಡಕ್’ ಅನ್ನು ನಿರ್ಮಿಸುತ್ತಿದ್ದರು. ಅದರ ಮಾದರಿಯನ್ನು ಗಾಜಿನ ಮನೆಯ ಮುಂದೆ ನಿರ್ಮಿಸಲಾಗುತ್ತಿದೆ.
ಹೂವಿನಲ್ಲಿ ಏಳು ಅಡಿ ಎತ್ತರದ ಜೇನುಹುಳು ಮಾದರಿ, ೧೨ ಅಡಿಯ ಜಿರಾಫೆ ಹಾಗೂ ಗೊಂಬೆಗಳು ಅರಳಲಿವೆ. ದಪ್ಪ ಮೆಣಸಿನ ಕಾಯಿಗಳಿಂದ ೭ ಅಡಿ ಎತ್ತರದ ಮನೆಯ ಮಾದರಿ ನಿರ್ಮಿಸಲಾಗುವುದು. ಅಲ್ಲದೆ ಪ್ರತಿದಿನ ಸಂಜೆಯ ವೇಳೆ ಅನೇಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago