ಜಿಲ್ಲೆಗಳು

ಮೈಸೂರು ದಸರಾ : ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆ, 3ನಿಮಿಷದ ವಿಡಿಯೋ ಮಾಡಿ ಈ ನಂಬರ್‌ಗೆ ಕಳುಹಿಸಿ!

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ರ ಅಂಗವಾಗಿ ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನೆ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಸಂಬಂಧವಾಗಿ ಇಂದು ಪ್ರಚಾರ ಸಾಮಗ್ರಿಗಳನ್ನು  ಶಾಸಕ ಎಲ್‌. ನಾಗೇಂದ್ರ ಅವರು ಬಿ ಎನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ
ಬಿಡುಗಡೆ ಮಾಡಿದರು.

ಬಿಡುಗಡೆ ಮಾಡಿ ಮಾತನಾಡಿದ ಅವರು ಮನೆಮನೆಗಳಲ್ಲಿ ಗೊಂಬೆ ಕೂರಿಸುವುದರಿಂದ ಗೃಹಿಣಿಯರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಸ್ಕೃತಿಯ ಮತ್ತು ನಮ್ಮ ಪರಂಪರೆಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ ಪ್ರತಿಯೊಬ್ಬರು ಅದಕ್ಕಾಗಿ ಶ್ರಮಿಸಬೇಕು.ನಮ್ಮ ಸಂಪ್ರದಾಯ ಮತ್ತು ಧಾರ್ಮಿಕತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಒಗ್ಗಟ್ಟಾಗಿ ಕಲೆತು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಮುಂದುವರಿದು, ನವರಾತ್ರಿಯು ಮೈಸೂರು ಪರಂಪರೆಯಲ್ಲಿ ಅತ್ಯಂತ ಪವಿತ್ರವಾದದ್ದು ದಸರಾ ಗೊಂಬೆ ಪ್ರದರ್ಶನಕ್ಕೆ ಅತ್ಯಂತ ಮಹತ್ವವಿದೆ .ಪಟ್ಟದ ಗೊಂಬೆಗಳನ್ನು ಲಕ್ಷ್ಮಿನಾರಾಯಣ ಸ್ವರೂಪದಲ್ಲಿ ಪೂಜಿಸಿ ಪುರಾಣ ಪುಣ್ಯಕಥೆಗಳನ್ನು ಗೊಂಬೆಗಳ ಮೂಲಕ ರೂಪಕವಾಗಿ ಪ್ರಚುರಪಡಿಸಿ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಇದರ ಮೂಲ ಉದ್ದೇಶ .ಮೈಸೂರಿನ ಮನೆಮನೆಗಳಲ್ಲಿ ಕೂರಿಸುವುದರಿಂದ ಗೃಹಿಣಿಯರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದರು.
ನಂತರ ಮಾತನಾಡಿದ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಅವರು ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ನೋಂದಣಿ ಶುಲ್ಕ 200 ರೂ ಇರುತ್ತದೆ. ದಸರಾ ಗೊಂಬೆ ಸ್ಪರ್ಧೆಯು ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡಂತೆ ಗೊಂಬೆಗಳನ್ನು ಕೂರಿಸಿದವರಿಗೆ ಮೊದಲನೇ ಬಹುಮಾನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲೇ 2000 ರೂ ನಗದು ಹಾಗೂ ಪಾರಿತೋಷಕ ಹಾಗೂ ಪ್ರಮಾಣಪತ್ರ ನೀಡಲಾಗುವುದು, ಎರಡನೇ ಬಹುಮಾನ 1000 ರೂ ನಗದು ಪಾರಿತೋಷಕ ಹಾಗೂ ಪ್ರಮಾಣಪತ್ರ,ಮೂರನೇ ಬಹುಮಾನ 500ರೂ ನಗದು
ಪಾರಿತೋಷಕ ಹಾಗೂ 10 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣಪತ್ರನೀಡಲಾಗುವುದು ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದರು.

ಕಡೆಯ ದಿನಾಂಕ 5/10/2022 ರ ಒಳಗೆ 9880752727ಈ ದೂರವಾಣಿ ಸಂಖ್ಯೆಗೆ ವಾಟ್ಸ್ ಆ್ಯಪ್ ಮೂಲಕ ಗೊಂಬೆ ಜೋಡಣೆ ಮಾಡಿರುವ ಚಿತ್ರ ಹಾಗೂ 3ನಿಮಿಷದ ವೀಡಿಯೊವನ್ನು ಕಲಿಸಿಕೊಡಬೇಕು ಆನಂತರ ನುರಿತ ತೀರ್ಪುಗಾರರು ಅವರ ನಿವಾಸಕ್ಕೆ ತೆರಳಿ ವೀಕ್ಷಿಸಿ ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡ ಅದ್ಭುತವಾಗಿ ಗೊಂಬೆ ಜೋಡಣೆ ಮಾಡಿದಂತಹ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ,ಉಪಾಧ್ಯಕ್ಷರಾದ ಎಸ್ ಎನ್ ರಾಜೇಶ್ ,ಮೈಸೂರು ಮಹಾನಗರ ಪಾಲಿಕೆ ಉಪಾಯುಕ್ತರು ಅಭಿವೃದ್ಧಿ ಮಹೇಶ್ ,ಕಾರ್ಯಪಾಲಕ ಅಭಿಯಂತರುರಜಿತ್ ಕುಮಾರ್,ಅಭಿವೃದ್ಧಿ ಅಧಿಕಾರಿ ಮಂಜುನಾಥ ,ಹಾಗೂ ಇನ್ನಿತರರು ಹಾಜರಿದ್ದರು.

andolanait

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

7 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

8 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

9 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

9 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

9 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

9 hours ago