ಜಿಲ್ಲೆಗಳು

ಮೈಸೂರು-ಚಾ.ನಗರ ನಡುವೆ ಸದ್ಯಕ್ಕಿಲ್ಲ ವಿದ್ಯುತ್ ಚಾಲಿತ ರೈಲು

ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ ವೇಳೆ ಹೆಚ್ಚುವರಿ ಭೂಮಿ ವಶಕ್ಕೆ ಪರ್ಯಾಯ ಚಿಂತನೆ 

 ಮೈಸೂರು: ಹಲವು ವರ್ಷಗಳಿಂದ ಅವಳಿ ಜಿಲ್ಲೆಗಳ ಜನರು ಭಾರೀ ನಿರೀಕ್ಷೆಯೊಂದಿಗೆ ಕಾದಿದ್ದ ಮೈಸೂರು-ಚಾಮರಾಜನಗರ ನಡುವಿನ ವಿದ್ಯುತ್ ಚಾಲಿತ ರೈಲು ಸಂಚಾರ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳಿಲ್ಲ.
ಮೈಸೂರು ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಹಾದು ಹೋಗಿರುವ ರೈಲ್ವೆ ಹಳಿಯಲ್ಲಿ ಒಂದೂವರೆ ಕಿಲೋ ಮೀಟರ್ ವಿದ್ಯುತ್ ಲೇನ್ ಎಳೆಯಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ಕೊಡದ ಕಾರಣ ವಿದ್ಯುತ್ ಚಾಲಿತ ರೈಲು ಸಂಚಾರ ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ, ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ ಮಾಡಲು ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಹೆಚ್ಚುವರಿ ಭೂಮಿ ಪಡೆದುಕೊಂಡ ನಂತರ ಪರ್ಯಾಯ ಆಲೋಚನೆ ಮಾಡಲು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಮೈಸೂರು-ಚಾಮರಾಜನಗರ ನಡುವೆ ಡಿಸೇಲ್ ಚಾಲಿತ ರೈಲುಗಳು ಸಂಚರಿಸುತ್ತಿದ್ದು, ಎಲೆಕ್ಟ್ರಿಕಲ್ ರೈಲುಗಳ ಓಡಾಟಕ್ಕೆ ಈಗಾಗಲೇ ವಿದ್ಯುತ್ ಲೇನ್ ಅಳವಡಿಸಲಾಗಿದೆ. ವಿದ್ಯುತ್ ಲೇನ್ ಅಲ್ಲದೆ ಎರಡು ಬದಿಗಳಲ್ಲಿ ಸಾರ್ವಜನಿಕರು, ದನಕರುಗಳು, ವಾಹನಗಳು ನುಗ್ಗದಂತೆ ತಡೆಗೋಡೆ ನಿರ್ಮಾಣ ಮಾಡಿಕೊಂಡು ಸಜ್ಜು ಮಾಡಲಾಗಿತ್ತು. ಆದರೆ, ಮೈಸೂರು ವಿಮಾನ ನಿಲ್ದಾಣ ಬಳಿ ಒಂದೂವರೆ ಕಿ.ಮೀ ನಷ್ಟು ವಿದ್ಯುತ್ ಲೇನ್ ಅಳವಡಿಸಲು ಪ್ರಾಧಿಕಾರವು ಒಪ್ಪಿಗೆ ಕೊಡದ ಕಾರಣ ಬಾಕಿ ಉಳಿದಿದೆ. ರನ್ ವೇ ವಿಸ್ತರಣೆ ಮಾಡಿದ ನಂತರ ವಿಮಾನ ಕೆಳಗಿಳಿಯುವಾಗ ಅಪಾಯ ಉಂಟಾಗುವ ಸಾಧ್ಯತೆಯಿದೆ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಅನುಮತಿ ಕೊಡಲು ನಿರಾಕರಣೆ ಮಾಡಿದ್ದಾರೆ. ಹಾಗಾಗಿ ಈ ಸಮಸ್ಯೆ ಇತ್ಯರ್ಥವಾಗುವ ತನಕವೂ ಸಂಪೂರ್ಣ ಲೇನ್ ಎಳೆಯಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಒಂದು ವೇಳೆ ಎಲೆಕ್ಟ್ರಿಕಲ್ ರೈಲು ಓಡಾಡಬೇಕು ಅಂದರೆ ಮೈಸೂರಿನಿಂದ ಮಂಡಕಳ್ಳಿ, ಚಾಮರಾಜನಗರ ಕಡೆಯಿಂದ ಬರುವ ರೈಲು ಕಡಕೊಳ ಬಳಿ ಇಂಜಿನ್ ಬದಲಿಸಿ ಓಡಾಡಬೇಕಾಗಿದೆ. ಎರಡು ಕಡೆಗಳಿಂದಲೂ ಇಂಜಿನ್ ಬದಲಿಸುವುದಕ್ಕೆ ನಿಲುಗಡೆ ಮಾಡಬೇಕಿರುವ ಕಾರಣ ಅರ್ಧ ಗಂಟೆ ಸಮಯ ಬೇಕಾಗುವ ಕಾರಣ ಅಂತಹ ಸಾಹಸಕ್ಕೆ ಕೈ ಹಾಕದಿರಲು ತೀರ್ಮಾನಿಸಿದ್ದಾರೆ.
ಹೆಚ್ಚುವರಿ ಭೂಮಿ ಸ್ವಾಧೀನ: ರನ್ ವೇ ವಿಸ್ತರಣೆಗೆ ಅಗತ್ಯ ಇರುವ 247ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿರುವ ಕಾರಣ ಮತ್ತೆ ಹೆಚ್ಚುವರಿಯಾಗಿ 50 ಎಕರೆ ಸ್ವಾಧೀನ ಮಾಡಿಕೊಂಡರೆ ಪರ್ಯಾಯ ವ್ಯವಸ್ಥೆ ಮಾಡಬಹುದೆಂಬುದು ಅಧಿಕಾರಿಗಳ ಆಲೋಚನೆಯಾಗಿದೆ. ಈಗಾಗಲೇ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ ಕೆಐಎಡಿಬಿಗೆ ೧೦೦ ಕೋಟಿ ರೂ. ಅನುದಾನ  ಬಿಡುಗಡೆಯಾಗಿದೆ. ಹೆಚ್ಚುವರಿ ಭೂಮಿಗೆ 50 ಕೋಟಿ ರೂ. ಕೊಡುವಂತೆ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಒಂದೂವರೆ ಕಿ.ಮೀ.ನಷ್ಟು ವಿದ್ಯುತ್ ಲೇನ್ ಅಳವಡಿಸುವವರೆಗೆ ರೈಲು ಓಡಾಡಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆ ಅಂದರೆ ಒಂದೂವರೆ ಕಿ.ಮೀ ಇಂಜಿನ್ ಬದಲಿಸುವಂತೆ ಅಥವಾ ಬೇರೆ ಏನಾದರೂ ಮಾಡಬಹುದೇ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದು ಹೇಳಿದ್ದಾರೆ.


ಮೈಸೂರು-ಚಾಮರಾಜನಗರ ನಡುವೆ ಎಲೆಕ್ಟ್ರಿಕಲ್ ರೈಲು ಸಂಚಾರಕ್ಕೆ ಒಂದೂವರೆ ಕಿ.ಮೀ.ನಷ್ಟು ಉಂಟಾಗಿರುವ ತೊಡಕು ನಿವಾರಣೆಯಾದರೆ ಸಂಪೂರ್ಣ ಮಾಡುತ್ತೇವೆ. ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡುವವರೆಗೆ ಎಲೆಕ್ಟ್ರಿಕಲ್ ರೈಲು ಓಡಾಡುವುದಕ್ಕೆ ವಿಳಂಬವಾಗಲಿದೆ.
-ಪ್ರತಾಪ್ ಸಿಂಹ, ಸಂಸದರು.

andolanait

Recent Posts

ರಾಮ್ ಜೀ ಸಕ್ಪಾಲ್ ಬಡಾವಣೆಯಲ್ಲಿ ಮೂಲಸೌಕರ್ಯ ಮರೀಚಿಕೆ

ಕೃಷ್ಣ ಸಿದ್ದಾಪುರ ನೀರಿಗೂ ಪರದಾಟ, ಕತ್ತಲಲ್ಲೇ ಮಕ್ಕಳ ವಿದ್ಯಾಭ್ಯಾಸ   ಸಿದ್ದಾಪುರ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್…

3 mins ago

ಡೆಡ್ ಬಾಡಿ ಬಿಸಾಕಿದ ಜಾಗದಲ್ಲಿ ಹೊಸ ಸುಳಿವು

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಸ್ಕಾರ್ಪಿಯೋ ಹೋಗಿ-ಬರುವುದು, ೩ ಜನರು ನಡೆದು ಬರುವುದು ವಿಡಿಯೋದಲ್ಲಿ ಸೆರೆ ನಾಳೆ ೧೦ ಗಂಟೆಯವರೆಗೆ…

15 mins ago

ಪುಸ್ತಕ ಮೇಳದಲ್ಲಿ ‘ಕವಿತೆ ಹೇಳಿ, ಗಿಡ ಪಡೆಯಿರಿ’

ಚಿರಂಜೀವಿ ಸಿ.ಹುಲ್ಲಹಳ್ಳಿ ಸಾಹಿತ್ಯ, ಪರಿಸರ ಸಂರಕ್ಷಣೆ ಕಾರ್ಯಕ್ಕೆ ಮುಂದಾಗಿರುವ ಸಂತೋಷ್ ಸಂಬಳದ ಹಣವೇ ವಿನಿಯೋಗ; ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಸೇವೆ…

28 mins ago

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

19 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

20 hours ago