ಮೈಸೂರು : ನಗರದ ಸರಸ್ವತಿಪುರಂ ನಲ್ಲಿರುವ ಬಲಿಜ ಬಣಜಿಗ ವಿದ್ಯಾರ್ಥಿ ನಿಲಯಕ್ಕೆ ಅಮೇರಿಕಾದ ಮೆಡಿಕಲ್ ಸರ್ಜನ್ ಜನರಲ್ ಅಗಿರುವ ಡಾಕ್ಟರ್ ವಿವೇಕ್ ಮೂರ್ತಿ ಅವರ ತಂದೆ ಡಾಕ್ಟರ್ ಲಕ್ಷ್ಮೀ ನರಸಿಂಹಮೂರ್ತಿ ಅವರು ಇಂದು ಭೇಟಿ ನೀಡಿ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು.
ಮೈಸೂರಿನಲ್ಲಿ ಪಿಯುಸಿ ಮತ್ತು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಲಯದ ನೆನಪು ಗಳನ್ನು ಮೆಲಕು ಹಾಕಿದ ಅವರು ಇದೇ ಹಾಲಿನಲ್ಲಿ ಚಾಪೆಯ ಮೇಲೆ ಮಲಗುತ್ತಿದ್ದೆವು, ಚಪ್ಪಲಿ ಇರಲಿಲ್ಲ ಕಾಲೇಜಿಗೆ ಬರೀ ಕಾಲಿನಲ್ಲಿ ನಡೆಯುತ್ತಿದ್ದವು ಅದು ನಮಗೆ ಕೊರತೆ ಅನಿಸಲಿಲ್ಲ ಏಕೆಂದರೆ ನಮ್ಮ ಗುರಿ ಮುಖ್ಯವಾಗಿತ್ತು. ವಿದ್ಯಾರ್ಥಿಗಳನ್ನು ನೋಡಿ ಬಹಳ ಸಂತೋಷವಾಗಿದೆ ನಿಮಗಿರುವ ಸೌಲಭ್ಯಗಳು ನಮಗಿರಲಿಲ್ಲ.
ಹೆಚ್ಚು ಜನರನ್ನ ಬೆರೆಯುವ ಬದಲು ಮೊಬೈಲ್ ಹೆಚ್ಚಾಗಿದೆ. ಜನರ ಒಡನಾಟ ಹೆಚ್ಚು ತೃಪ್ತಿ ನೀಡುತ್ತದೆ. ಭಾರತದ ಧಾರ್ಮಿಕವಾಗಿ ಆಧ್ಯಾತ್ಮಿಕ ಚಿಂತನೆಗಳು ಪ್ರಪಂಚಕ್ಕೆ ಮಾದರಿಯಾಗಿದೆ. ಆದರೆ ಇವು ಕಡಿಮೆಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಮೈಲಾಕ್ ಮಾಜಿ ಅಧ್ಯಕ್ಷರಾದ ಹೆಚ್ .ಎ.ವೆಂಕಟೇಶ್ ಅವರು ಕೋವಿಡ್ ಸಂದರ್ಭದಲ್ಲಿ ಇವರ ಮಡಿಕೇರಿ, ಚಿಕ್ಕಬಳ್ಳಾಪುರ, ಮೈಸೂರು ಭಾಗದಲ್ಲಿ ಅನೇಕ ಸೇವೆ ನೀಡಿರುವುದು ಎಂದೆಂದಿಗೂ ಸ್ಮರಣೀಯ. ಈ ಸಮುದಾಯ ಭವನದ ವಿದ್ಯಾರ್ಥಿನಿಲಯದಿಂದ ಕಲಿತು ಹೋಗಿ ವೈದ್ಯ ವೃತ್ತಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಇಂತಹವರ ಸಾಧನೆ ನಮ್ಮೆಲ್ಲರಿಗೂ ಮಾದರಿಯಾಗಬೇಕೆಂಬ ಉದ್ದೇಶದಿಂದ ಈ ದಿನ ತಿಳಿಸಿದರು.
ಕಳೆದ ಬಾರಿ ಇಲ್ಲಿನ ವಿದ್ಯಾರ್ಥಿಗಳ ಅಭಿವೃದ್ಧಿ ಗೆ ಸೋಲಾರ್ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು ಮಾತ್ರವಲ್ಲದೆ, ಸಾಕಷ್ಟು ಧನ ಸಹಾಯ ಸಹ ನೀಡಿದ್ದಾರೆ. ಅವರ ಸೇವೆಯನ್ನು ಸದಾ ಸಮುದಾಯ ಸ್ಮರಿಸಲಿದೆ. ಈ ದಿನ ಎಲ್ಲೆಡೆ ಕನಕ ಜಯಂತಿ ಮಹೋತ್ಸವ ಆಚರಿಸುತ್ತಿದ್ದು, ಆತನ ಜೀವನ ಚರಿತೆಗಳನ್ನು ಅರ್ಥೈಯಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಸ್ಮರಣೆ ನಿತ್ಯ ಮಾಡುವ ಕೆಲಸ ಆಗಬೇಕೆಂದು ಕನಕ ಜಯಂತಿ ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಪಿಜಿ ಶೆಟ್ಟಿ ಕನ್ಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಜಿ. ಸೋಮಶೇಖರ್, ಉದ್ಯಮಿ ಡಿ. ಕೀರ್ತಿ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿಎಚ್.ಆರ್. ಗೋಪಾಲಕೃಷ್ಣ, ಉಪಾಧ್ಯಕ್ಷ ಜಿ. ರಮೇಶ್ ಆಂತರಿಕ ಲೆಕ್ಕ ಪರಿಶೋಧಕರು ಡಿ. ನಾಗರಾಜ್, ಪತ್ರಕರ್ತ ಹೆಚ್ ಕೆ ವಸಂತ ಕುಮಾರ್, ಹೆಚ್ .ವಿ .ಚೆಲುವರಾಜ್ ನಿರ್ದೇಶಕರುಗಳಾದ ಡಾ. ಟಿ. ರಮೇಶ್, ಎನ್ . ಹೇಮಂತ್ ಕುಮಾರ್, ಸರ್ಕಾರಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎನ್. ವಿಜಯ್ ಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಅಧೀಕ್ಷಕ ಎಚ್. ವಿ. ನಾಗರಾಜು, ಬಿ.ಕೆ. ಸುರೇಶ್,
ವಿಶೇಷ ಆಹ್ವಾನಿತರಾದ ಪಾರ್ಥಸಾರಥಿ, ಎನ್ ಬಾಲರಾಜ್, ಜಿಲ್ಲಾ ಯೋಗಿ ನಾರಾಯಣ ಬಲಿಜ ಸಂಘದ ಅಧ್ಯಕ್ಷ ವಿ . ಕೃಷ್ಣಪ್ಪ, ಕಾರ್ಯದರ್ಶಿ ಜಿ.ರಾಮು, ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟೆಹ್ರಾನ್ : ಇರಾನಿನ ಬಂದರುಗಳು ಸಾಗುವ ಸಮುದ್ರ ಸಂಚಾರದ ಮೇಲೆ ಅಮೆರಿಕ ಮಿಲಿಟರಿ ದಿಗ್ಬಂಧನವನ್ನು ನಿಗದಿತ ಗಡುವಿನಂತೆ ಆರಂಭಿಸಿದೆ. ಈ…
ನವದೆಹಲಿ : ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ…
ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ…
ಚಾಮರಾಜನಗರ : ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ಅವರು ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಕ್ತ ಮಾಡುವುದಾಗಿ ಹೇಳಿರುವುದು ಮತ್ತು…
ಮಡಿಕೇರಿ : ಕಾಡಾನೆ ಮರಿಯೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ…
ಟೆಹ್ರಾನ್ : ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ನಂತರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸುವುದಾಗಿ…