ಜಿಲ್ಲೆಗಳು

ಮಠ-ದೇವಾಲಯಗಳು ಮಾನಸಿಕ ನೆಮ್ಮದಿಯ ಕೇಂದ್ರಗಳಾಗಿವೆ : ಸುತ್ತೂರು ದೇಶಿಕೇಂದ್ರ ಸ್ವಾಮೀಜಿ

ಹನೂರು: ಮಠಗಳು ದೇವಸ್ಥಾನಗಳು ಮನುಷ್ಯನ ಮಾನಸಿಕ ನೆಮ್ಮದಿ ಮತ್ತು ಸಮಸ್ಯೆಗಳ ಪರಿಹಾರ ಕೇಂದ್ರಗಳಾಗಿವೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ತಿಳಿಸಿದರು.

ತಾಲ್ಲೂಕಿನ ಒಡೆಯರ ಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುರುಮಲ್ಲೇಶ್ವರ ಬಿಕ್ಷದ ಮಠ ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಭಾಭವನಗಳನ್ನು ಮದುವೆ ಕಾರ್ಯಗಳ ಜೊತೆಗೆ ಧಾರ್ಮಿಕ ಕಾರ್ಯಗಳಿಗೂ ಬಳಸಿಕೊಳ್ಳುವ ಮೂಲಕ ಸಾರ್ಥಕತೆ ಮರೆಯಬೇಕು. ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ತಾಯಿಗೆ ತನಗಿಂತ ಮಗುವೇ ಮುಖ್ಯ. ಸೇವೆಯಲ್ಲಿ ತೊಡಗಿರುವ ನಿಶಾಂತ್ ರವರು ಅದನ್ನು ಮೀರಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ದೀಪ ಬೆಳಗಲು ಅಗತ್ಯವಿರುವಷ್ಟೇ ಎಣ್ಣೆ ಹಾಕಬೇಕು. ಹಾಗೆ ಸಮಾಜದ ಉನ್ನತಿಗೆ ಅಗತ್ಯ ಸೇವೆ ಮುಖ್ಯ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಬೇಕು. ಇಲ್ಲಿನ ಜನರು ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಒಡೆಯರಾಗಿದ್ದಾರೆ ಎಂದು ಆಶೀರ್ವಚನ ನೀಡಿದರು.

ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಮಲೆ ಸೀಮೆಯ ಪ್ರಾಂತ್ಯ ಜಾತಿ ಧರ್ಮಗಳ ಭಾವೈಕ್ಯತೆ ಹೊಂದಿರುವ ಮತ್ತು ಧಾರ್ಮಿಕ ಭಕ್ತಿಯಲ್ಲಿ ಶ್ರೀಮಂತಿಕೆ ಇರುವ ಗ್ರಾಮ ಒಡೆಯರ ಪಾಳ್ಯ. ಧಾರ್ಮಿಕ ಪರಂಪರೆಯ ಅಸ್ತಿತ್ವಕ್ಕೆ ನಮ್ಮೆಲ್ಲರ ಜವಾಬ್ದಾರಿ ಮುಖ್ಯ ಕಾಯಕವೇ ಕೈಲಾಸ ಎನ್ನುವ ಬಸವ ತತ್ವದ ಅನುಯಾಯಿಗಳು ಈ ಭಾಗದವರಾಗಿದ್ದಾರೆ. ಇಂತಹ ನೆಲೆಯಲ್ಲಿ ಅಪೂರ್ಣಗೊಂಡಿರುವ ಗುರುಮಲ್ಲೇಶ್ವರ ಸಭಾಭವನವನ್ನು ಪೂರ್ಣಗೊಳಿಸಿದ ಕೀರ್ತಿ ನಿಶಾಂತ್ ರವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ನಿಶಾಂತ್ ಮಾತನಾಡಿ ಕೆಲವರು ಸಮಾಜ ಸೇವೆಯನ್ನು ಏಕೆ ನೂರಿನಲ್ಲಿ ಮಾಡಬೇಕು ಬೆಂಗಳೂರಿನಲ್ಲಿ ಮಾಡಬಹುದಲ್ಲ ಎಂದು ಪ್ರಶ್ನಿಸಿದ್ದಾರೆ. ಅಭಿಮಾನದ ಜನರು ಇರುವ ಕಡೆ ನಮ್ಮ ಸೇವೆ ಸಲ್ಲಬೇಕು. ಈ ಭಾಗದ ಜನರಲ್ಲಿ ಕಾಯಕ ಮತ್ತು ದಾಸೋಹ ಕಲ್ಪನೆ ಶಾಶ್ವತವಾಗಿದೆ, ನಮ್ಮ ಮೂಲಭೂತ ಸೌಕರ್ಯ ನಮ್ಮ ಹಕ್ಕು ಅದನ್ನು ಕೇಳಿ ಪಡೆದುಕೊಳ್ಳಬೇಕು. ನಮ್ಮ ಮೇಲೆ ಇಷ್ಟೊಂದು ಅಭಿಮಾನ ಪೂರ್ವಕವಾಗಿ ಹೊಂದಿರುವ ನಿಮ್ಮೆಲ್ಲರಿಗೂ ನಾನು ಸದಾ ಚಿರಋಣಿಯಾಗಿರುತ್ತೇನೆ, ರಾಜ್ಯದ 224 ಕ್ಷೇತ್ರಗಳ ಪೈಕಿ ಹನೂರು ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಓದಿಗೆ, ಊಟಕ್ಕೆ ಆಸ್ಪತ್ರೆಗಳಿಗೆ ಆಹಾಕಾರ ಉಂಟಾಗಿದೆ, ರಾಜ್ಯದಲ್ಲಿ ಇಂತಹ ಕ್ಷೇತ್ರವನ್ನು ನಾನೆಂದು ನೋಡಿಲ್ಲ ಹನೂರು ಕ್ಷೇತ್ರದ ಅಭಿವೃದ್ಧಿಯ ಸಂಕಲ್ಪ ದೊಂದಿಗೆ ನನ್ನ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಿದ್ದೇನೆ ಹನೂರು ಕ್ಷೇತ್ರದ ಜನತೆ ಮುಂದಿನ ದಿನದಲ್ಲಿ ನನ್ನ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಮುಖಂಡ ಪೊನ್ನಾಚಿ ಮಹದೇವ ಸ್ವಾಮಿ ಮಾತನಾಡಿ ಹನೂರು ಕ್ಷೇತ್ರಕ್ಕೆ ಸಮಾಜಸೇವಕ ನಿಶಾಂತ್ ಬಂದಂತಹ ಕಡಿಮೆ ಅವಧಿಯಲ್ಲಿಯೇ ಉತ್ತಮ ಸೇವೆ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಸುಮಾರು 140 ದೇವಸ್ಥಾನಗಳ ಅಭಿವೃದ್ಧಿ, 25 ಮಠಗಳ ಜೀರ್ಣೋದ್ಧಾರ, 30 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕೊತ್ತನೂರು ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ. ದೊಡ್ಡಿಂಡುವಾಡಿ ಪರಿಶಿಷ್ಟ ಸಮುದಾಯದವರಿಗೆ 30 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಖರೀದಿ, ಕಾಮಗೆರೆ ಗ್ರಾಮದ ಆದಿಜಾಂಬವ ಸಮುದಾಯದವರಿಗೆ ಕಂಡಾಯ ನಿರ್ಮಾಣಕ್ಕಾಗಿ 5 ಕೆ.ಜಿ ಬೆಳ್ಳಿ ಖರೀದಿ ಸೇರಿದಂತೆ ಸುಮಾರು 30 ಕೋಟಿಗೂ ಅಧಿಕ ಹಣವನ್ನು ಹನೂರು ಕ್ಷೇತ್ರದ ಅಭಿವೃದ್ಧಿಗೆ ತೊಡಗಿದ್ದಾರೆ ಎಂದು ತಿಳಿಸಿದರು. ಜೊತೆಗೆ ಶ್ರೀ ಗುರು ಮಲ್ಲೇಶ್ವರ ಸಭಾಭವನಕ್ಕೆ ನಿವೇಶನ ನೀಡಿದ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೇವನೂರು ದಾಸೋಹ ಮಠದ ಮಹಾಂತ ಸ್ವಾಮಿಗಳು, ಮೈಸೂರು ಕುದುರು ಮಠದ ಗುರು ಶಾಂತ ಸ್ವಾಮಿಗಳು, ಕುಂದೂರು ಮಠದ ಶರತ್ ಚಂದ್ರ ಸ್ವಾಮಿಗಳು, ನಿಶಾಂತ್ ರವರ ತಾಯಿ ಮಂಜುಳ ಮುಖಂಡರಾದ ವೀರಮಾಧು, ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರ ಸ್ವಾಮಿ, ಮುಖಂಡರುಗಳಾದ ಗೌಡ್ರು ಸೋಮಣ್ಣ, ಸದಾನಂದ ಮೂರ್ತಿ, ಗುರುಮಲ್ಲಪ್ಪ,ತೇಜು, ಸಚಿನ್, ಚೇತನ್, ಕಣ್ಣಪ್ಪ, ಅಜ್ಜಿಪುರ ಚಿದಾನಂದ ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

andolanait

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

2 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

3 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

4 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

5 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

5 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

5 hours ago