‘ಒಡನಾಡಿ’ ಪರಶುರಾಂ ಆರೋಪ
ಮೈಸೂರು: ‘ಬಾಲಕಿಯರ ಮೇಲೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ ಹಿಂದೆ ಸರಿಯುವಂತೆ ಹೇಳಿ ನಮಗೆ ₹ 3 ಕೋಟಿ ಆಮಿಷ ಒಡ್ಡಲಾಗಿತ್ತು. ಸ್ವಾಮೀಜಿ ಅವರನ್ನು ಬಿಟ್ಟು ಬಿಡಿ ಎಂದು ಮಂತ್ರಿ ಮಹೋದಯರೊಬ್ಬರು ಹೇಳಿದ್ದರು’ ಎಂದು ಒಡನಾಡಿ ಸಂಸ್ಥೆ ನಿರ್ದೇಶಕ ಎಂ.ಎಲ್.ಪರಶುರಾಂ ಆರೋಪಿಸಿದರು.
ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ‘ವಿದ್ಯಾರ್ಥಿ ಪದಾಧಿಕಾರಿಗಳ ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಂತ್ರಸ್ತ ಮಕ್ಕಳು ಗೊಳೋ ಎಂದು ಒಂದೆಡೆ ಅಳುತ್ತಿದ್ದರೆ, ಇನ್ನೊಂದೆಡೆ ಹಣದ ಆಯ್ಕೆಯನ್ನು ಮುಂದೊಡ್ಡಲಾಗಿತ್ತು. ನಾಚಿಕೆ ಇಲ್ಲದ ನಾಯಕರೊಬ್ಬರು ಸ್ವಾಮೀಜಿ ಪರವಾಗಿ ಮನವಿ ಮಾಡಿದ್ದರು’ ಎಂದರು.
‘3 ರಿಂದ 16 ವರ್ಷದವರೆಗಿನ, ಸುಮಾರು 23 ಹೆಣ್ಣು ಮಕ್ಕಳ ಮೇಲೆ ಮುರುಘಾ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದರು. 25 ವರ್ಷಗಳಿಂದ ಇಂತಹ ಕೃತ್ಯ ಎಸಗಿದ್ದಾರೆ. ಚಿಕ್ಕ ಹೆಣ್ಣು ಮಗುವೊಂದು ಕಷ್ಟ ಹೇಳಿಕೊಂಡು, ನಮ್ಮ ಬಳಿಗೆ ಬಂದು, ಸ್ವಾಮೀಜಿ ಕಚ್ಚಿದ್ದ ತನ್ನ ಎದೆಭಾಗವನ್ನು ತೋರಿದಾಗ, ತಂದೆ ಸ್ಥಾನದಲ್ಲಿ ನಿಂತು ಮೌನ ವಹಿಸುವುದಾದರೂ ಹೇಗೆ? ಸತ್ಯ– ನ್ಯಾಯಕ್ಕಾಗಿ ಮಕ್ಕಳ ಪರ ಜೀವ ಇರುವವರೆಗೂ ಹೋರಾಡುತ್ತೇವೆ’ ಎಂದರು.
ಲಕ್ಷ್ಮೀಕಾಂತ್ ಕೋಮಾರಪ್ಪ ಫಸಲು ನಾಶ, ಕಂಗಾಲಾದ ಕೃಷಿಕರು; ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸೋಮವಾರಪೇಟೆ: ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿ…
ಎಚ್.ಎಸ್.ದಿನೇಶ್ ಕುಮಾರ್ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ನಿಲ್ಲದ ದಂಧೆ; ಪ್ರತಿ ಬಾರಿಯೂ ದಂಧೆಗೆ ಹೊಸ ದಾರಿ ಹುಡುಕುವ ದುರುಳರು ಮೈಸೂರು:…
ಕೊಹ್ಲಿ-ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್, ಎಸ್‌ಆರ್‌ಎಚ್ ವಿರುದ್ಧ ಭರ್ಜರಿ ಜಯ ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಸನ್…
ಮಂಡ್ಯ: ಇತಿಹಾಸ ಪ್ರಸಿದ್ಧ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು ಶನಿವಾರ ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮೇಲು ಕೋಟೆಯ…
ಎಚ್.ಡಿ.ಕೋಟೆ: ತಾಲ್ಲೂಕಿನ ಜಿ.ಬಿ.ಸರಗೂರು ಗ್ರಾಮದ ರೈತ ನಾಗೇಶ್ (೪೨) ಶುಂಠಿ ಬೆಳೆಗೆ ಕಳೆನಾಶಕ ಔಷಧ ಸಿಂಪಡಿಸುವಾಗ ಮೃತಪಟ್ಟಿದ್ದಾರೆ. ಶನಿವಾರ ಬೆಳಿಗ್ಗೆ…