ಜಿಲ್ಲೆಗಳು

‘ಮಿಸಸ್ ಇಂಡಿಯಾ ಐಟಮ್ ಪವರ್ ಫುಲ್ ಎಂಡ್ ಇಂಡಿಯಾಸ್ ಚಾರ್ಮಿಂಗ್ ಫೇಸ್’ ಸೌಂದರ್ಯ ಸ್ಪರ್ಧೆ : ಕೊಡಗಿನ ಐವರಿಗೆ ಪ್ರಶಸ್ತಿಯ ಕಿರೀಟ

ಮಡಿಕೇರಿ: ಜಸ್ಪ್ರೆಟ್ ಕೌರ್ ಹಾಗೂ ನಂದಿನಿ ನಾಗರಾಜ್‌ರವರು ಗೋವಾದ ಲಾ ಗ್ರಾಸಿನಾ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಿಸಸ್ ಇಂಡಿಯಾ ಐಟಮ್ ಪವರ್ ಫುಲ್ ಎಂಡ್ ಇಂಡಿಯಾಸ್ ಚಾರ್ಮಿಂಗ್ ಫೇಸ್’ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ಪಿ ಆ್ಯಂಡ್ ಜಿ ಕ್ರಿಯೇಷನ್ಸ್‌ನ ರೂಪದರ್ಶಿಗಳು ಪ್ರಶಸ್ತಿ ಪಡೆದುಕೊಂಡರು.

ಮಲ್ಲಮಾಡ ಶಾಮಲಾ ಸುನಿಲ್ ಮಿಸೆಸ್ ಇಂಡಿಯಾ ಅರ್ಥ್ ಕಿರೀಟ ಧರಿಸಿದರು. ಇವರು ಮುಂದಿನ ವರ್ಷ ನಡೆಯಲಿರುವ ಮಿಸೆಸ್ ಅರ್ಥ್ ಸ್ಪರ್ಧೆಯಲ್ಲಿ ಪೈಪೋಟಿ ನೀಡಲಿದ್ದಾರೆ. ಕಳೆದ ತಿಂಗಳಷ್ಟೇ ಶಾಮಲಾ ದಕ್ಷಿಣ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿದ್ದರು.

ಅಳಮೇಯಗಡ ದಿಶಾ ಚಂಗಪ್ಪರವರು ಹದಿಹರೆಯದವರ ವಿಭಾಗದಲ್ಲಿ ಕಿರೀಟವನ್ನು ಗೆದ್ದರು ಮತ್ತು ಮಿಸ್ ಸೌತ್ ಇಂಡಿಯಾ ಟೀನ್ ಆಗಿ ಆಯ್ಕೆಯಾದರು. ಬಾನಂಗಡ ಭಾಗ್ಯ ಪ್ರದೀಪ್‌ರವರು ಮಿಸೆಸ್ ಇಂಡಿಯಾ ಫ್ಯಾಷನ್ ಐಕಾನ್ ಮತ್ತು ಮಿಸೆಸ್ ಇಂಡಿಯಾ ಆಂತರಿಕ ಸೌಂದರ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.

ಕುಪ್ಪನವಾಡ ಮೇಘನಾ ಮುತ್ತಮ್ಮರವರು ಮಿಸ್ ಇಂಡಿಯಾ ಟೀನ್ ಎಲಿಗನ್ಸಿ ಪ್ರಶಸ್ತಿ ಪಡೆದರು. ಶಮಕ ಅವರು ಮಿಸಸ್ ಅಟಿಟ್ಯುಡ್ ಮತ್ತು ಮಿಸಸ್ ಬಾಡಿ ಬ್ಯೂಟಿಫುಲ್ ಪ್ರಶಸ್ತಿ ಪಡೆದುಕೊಂಡರು. ಫ್ಯಾಷನ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಪಿ ಆ್ಯಂಡ್ ಜಿ ಕ್ರಿಯೇಷನ್ಸ್‌ನ ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ ಹಾಗೂ ಬ್ರಾಂಡ್ ಅಂಬಾಸಿಡರ್ ಕೊನಿಯಂಡ ಕಾವ್ಯ ಅವರ ಮಾಶರ್ಗದರ್ಶನದಲ್ಲಿ ಇವರು ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಗೋವಾದ ಲಾ ಗ್ರಾಸಿನಾ ರೆಸಾರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ೬೦ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

 

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago