90ರಿಂದ 425 ಕಿಲೋ ತನಕ ದೇಹ ತೂಕ ಹೆಚ್ಚಿಸಿಕೊಂಡ ದಸರೆ ಆನೆಗಳು
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ 14 ಆನೆಗಳ ತೂಕ ದಾಖಲಿಸುವ ಪ್ರಕ್ರಿಯೆ ಶುಕ್ರವಾರ ನಡೆಯಿತು.
ದಸರಾ ಗಜಪಡೆಗೆ ಸೇರಿದ ಆನೆಗಳ ತೂಕ ನೋಡುವ ಪ್ರಕ್ರಿಯೆಯು ಪ್ರತೀವರ್ಷ ಮೈಸೂರಿನ ಧನ್ವಂತ್ರಿ ರಸ್ತೆಯ ವೇ ಬ್ರಿಡ್ಜ್ ನಲ್ಲಿ ನಡೆಯುತ್ತದೆ. ಈ ಬಾರಿಯೂ ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5950 ಕೆ.ಜಿ ತೂಕ ಹೊಂದಿದ್ದಾನೆ. ಒಂದು ತಿಂಗಳ ಹಿಂದೆ ಅರಮನೆ ಪ್ರವೇಶಿಸಿದಾಗಲೂ ಎಲ್ಲ ಆನೆಗಳ ತೂಕ ದಾಖಲಿಸಲಾಗಿತ್ತು. ಆಗಷ್ಟ್ 10ರಂದು ಅರ್ಜುನನ ತೂಕ 5775 ಇತ್ತು. ಒಂದು ತಿಂಗಳಲ್ಲಿ 175 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.
ಅರಮನೆಗೆ ಕಾಲಿಟ್ಟ ಕ್ಷಣದಿಂದಲೇ ಎಲ್ಲ ಆನೆಗಳಿಗೆ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತದೆ. ಜಂಬೂ ಸವಾರಿ ವೇಳೆಗೆ ಈ ಎಲ್ಲ ಆನೆಗಳು ತೂಕ ಹೆಚ್ಚಿಸಿಕೊಂಡು ಸದೃಢವಾಗುತ್ತವೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಈಗ ಬರೋಬ್ಬರಿ 5000 ಕಿಲೋ ತೂಗುತ್ತಿದ್ದಾನೆ. ಕಳೆದ ತಿಂಗಳು ಈತನ ತೂಕ 4,770 ಇತ್ತು. ಒಂದು ತಿಂಗಳಲ್ಲಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.
ಗಂಡಾನೆಗಳಿಗೆ ಹೋಲಿಸಿದರೆ ಸ್ಲಿಮ್ ಆಗಿದ್ದ ಹೆಣ್ಣಾನೆಗಳೂ ಈಗ ತೂಕ ಹೆಚ್ಚಿಸಿಕೊಂಡು ದಸರೆಯ ಕಾರ್ಯಭಾರ ವಹಿಸಲು ಸಿದ್ದವಾಗಿವೆ. 3,050 ಕಿಲೋ ತೂಕದ ಚೈತ್ರ ಒಂದು ತಿಂಗಳಲ್ಲಿ 3235 ಕಿಲೋ, 3100 ಕಿಲೋ ತೂಕದ ಕಾವೇರಿ 3245 ಕಿಲೋಗೆ ದೇಹ ತೂಕ ಏರಿಸಿಕೊಂಡಿದ್ದಾರೆ. 2920 ಕಿಲೋ ಇದ್ದ ಲಕ್ಷ್ಮೀ ಬರೋಬ್ಬರಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾಳೆ. ದಸರೆಯ ಹಳೆಯ ಆನೆಗಳಲ್ಲಿ ಒಂದಾದ ವಿಜಯ 2760 ಕಿಲೋ ತೂಗುವ ಮೂಲಕ ಎಲ್ಲರಿಗಿಂತ ಹೆಚ್ಚು ಸ್ಲಿಮ್ ಆಗಿದ್ದಾಳೆ.
ಡಾ.ವಿ. ಕರಿಕಾಳನ್, ಡಿಸಿಎಫ್
ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಮತ್ತು ಎರಡನೇ ತಂಡದ ಆನೆಗಳು ಸೇರಿ ಒಟ್ಟು 14 ಆನೆಗಳನ್ನು ತೂಕ ಮಾಡಿದ್ದೇವೆ. ಗಂಡಾನೆಗಳು 4000 ದಿಂದ 4600 ಸಾವಿರ ಕೆಜಿ ಇದ್ದು, ಕಿರಿಯ ವಯಸ್ಸಿನ ಆನೆ ಪಾರ್ಥಸಾರಥಿ ಮಾತ್ರ 3445 ತೂಕ ಹೊಂದಿದೆ. ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬ ಚೆನ್ನಾಗಿ ಸಹಕರಿಸುತ್ತಿವೆ. ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ನಿತ್ಯದ ತಾಲೀಮಿನಲ್ಲಿ ಭಾಗವಹಿಸಲಿವೆ. ದಸರೆ ಮುಗಿಯುವದರೊಳಗೆ ಎಲ್ಲ ಆನೆಗಳ ತೂಕ ಹೆಚ್ಚು ಕಡಿಮೆ 100 ರಿಂದ 500 ಕಿಲೋ ಏರುತ್ತದೆ.
ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…
ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…
ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…
ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…
ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…
ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…