ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ ಪಟ್ಟಣದ ಜನತಾ ಕಾಲೋನಿ ನಿವಾಸಿಗಳಿಗೆ ತಪ್ಪದ ಕಿರಿಕಿರಿ; ಕ್ರಮಕ್ಕೆ ಒತ್ತಾಯ
ಗುಂಡ್ಲುಪೇಟೆ: ಪಟ್ಟಣದ ೧೬ನೇ ವಾರ್ಡ್‌ನ ಜನತಾ ಕಾಲೋನಿಯ ಕೆಇಬಿ ಹಿಂಭಾಗದಲ್ಲಿ ಮಂಗಗಳ ಗುಂಪು ಮನೆಯ ಮೇಲ್ಚಾವಣಿ ಹಾಳು ಮಾಡುವುದಲ್ಲದೆ, ಕೇಬಲ್ ವೈರ್, ಮನೆಯ ಮೇಲಿಟ್ಟಿರುವ ವಸ್ತುಗಳನ್ನು ಹಾಳು ಮಾಡುತ್ತಿವೆ. ಕೆಲವು ಕೋತಿಗಳು ಮನೆಯೊಳಗೆ ನುಗ್ಗಿ ಧಾಂದಲೆ ನಡೆಸುತಿದ್ದು ನಿವಾಸಿಗಳು ವಾಸ ಮಾಡುವುದೇ ಕಷ್ಟವಾಗಿದೆ. ಜನರ ಮೇಲೆ ಮಂಗಗಳು ಎರಗುತ್ತಿದ್ದು ನಿತ್ಯ ಮಂಗಗಳನ್ನು ಓಡಿಸಲು ಪಟಾಕಿ ಸಿಡಿಸುವ ಪ್ರಮೇಯ ಎದುರಾಗಿದೆ.
ಅಲ್ಲದೇ ಕಾಲೋನಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳು ಓಡಾಡಲು ಕಷ್ಟವಾಗುತ್ತಿದೆ. ಬೀದಿಯಲ್ಲಿ ಮಕ್ಕಳು ಆಟವಾಡುವಾಗ ಅಥವಾ ಶಾಲೆಗೆ ತೆರಳುವ ಸಂದರ್ಭದಲ್ಲಿ ದಾಳಿ ಮಾಡಬಹುದು ಎಂಬ ಭಯ ಪೋಷಕರನ್ನು ದಿನನಿತ್ಯ ಕಾಡುತ್ತಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಮಂಗಗಳು, ನಾಯಿಗಳನ್ನು ಹಿಡಿದು ಹೊರಬಿಡುವ ಕೆಲಸ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಬಿಡಾಡಿ ದನಗಳ ಹಾವಳಿ: ಬಿಡಾಡಿ ದನಗಳು ಸಿಕ್ಕ ಸಿಕ್ಕವರ ಮನೆಯ ಎದುರಿನ ಗೇಟ್ ಮುರಿದು ಒಳ ನುಗ್ಗುತ್ತಿವೆ. ವಾಹನಗಳಿಗೆ ಅಡ್ಡಾದಿಡ್ಡಿ ನಿಲ್ಲುವುದರಿಂದ ಸವಾರರು ಸಂಚರಿಸಲು ತೊಂದರೆಯಾಗುತ್ತಿದೆ. ಮತ್ತೊಂದೆಡೆ ಸಾಕು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಹಂದಿ ಸಾಕುವವರು, ಬಿಡಾಡಿ ದನಗಳನ್ನು ಬೀದಿಗೆ ಬಿಡುವವರ ವಿರುದ್ಧ ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ವಹಿಸಬೇಕು:
ಪಟ್ಟಣದ ಜನತಾ ಕಾಲೋನಿಯಲ್ಲಿ ಬೀದಿ ನಾಯಿಗಳು, ಮಂಗಗಳು, ಬಿಡಾಡಿ ದನಗಳು, ಹಂದಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಲಕ್ಷಣಗಳನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಹಾಗಾಗಿ ಈ ಬಗ್ಗೆಯೂ ಪುರಸಭೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ಮಂಗಗಳು, ಬೀದಿ ನಾಯಿಗಳು, ಬಿಡಾಡಿ ದನಗಳು, ಹಂದಿಗಳ ಉಪಟಳ ಹೆಚ್ಚಾಗಿದ್ದು ವಾಸ ಮಾಡುವುದೇ ಕಷ್ಟವಾಗಿದೆ. ಅಲ್ಲದೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು.
–ರತ್ನಮ್ಮ, ಕಾಲೋನಿಯ ನಿವಾಸಿ.
ಗುಂಡ್ಲುಪೇಟೆ ಪಟ್ಟಣದ ಜನತಾ ಕಾಲೋನಿಯಲ್ಲಿ ಮಂಗಗಳು, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು , ಇವುಗಳನ್ನು ಓಡಿಸಲು ಜನರು ನಿತ್ಯ ಪಟಾಕಿ ಸಿಡಿಸಬೇಕಿದೆ. ಸದಾ ಮನೆಯ ಬಾಗಿಲು ಹಾಕಿಕೊಂಡೇ ಇರಬೇಕು. ಆದ್ದರಿಂದ ಬೀದಿನಾಯಿಗಳ ನಿಯoತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
ನಾ.ಕುಮಾರ್. ಪುರಸಭೆ ಸದಸ್ಯ
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…
ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್ ಸುತಾರ್ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…
ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…