ಸಾಲಿಗ್ರಾಮ: ಕರ್ನಾಟಕ ಪ್ರೆಸ್ ಕ್ಲಬ್‌ನ ಕೃಷ್ಣರಾಜನಗರ ತಾಲ್ಲೂಕು ಘಟಕದ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ‘ಆಂದೋಲನ’ ದಿನಪತ್ರಿಕೆಯ ವರದಿಗಾರ ಕೆ.ಟಿ.ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಜಾನುಡಿ ಪತ್ರಿಕೆಯ ವರದಿಗಾರ ಸಿ.ವೈ.ಅಭಿಲಾಶ್, ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರುಧ್ವನಿ ಪತ್ರಿಕೆ ಸಂಪಾದಕ ಕೆ.ಎನ್.ತುಳಸಿಕುಮಾರ್, ಕಾರ್ಯದರ್ಶಿಯಾಗಿ ಇಂಡಿಯನ್ ಟಿವಿ ವರದಿಗಾರ ಸಿ.ಮಂಜುನಾಥ, ಖಜಾಂಚಿಯಾಗಿ ಮೈಸೂರುಮಿತ್ರ ವರದಿಗಾರ ಎಂ.ಪಿ.ಮಂಜುನಾಥ, ಸಹ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ಎಸ್.ಲೋಕೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಎಸಿಎನ್ ನ್ಯೂಸ್ ಚಾನಲ್‌ನ ಸಂಪಾದಕ ಕೆ.ಆರ್.ಶ್ಯಾಮಸುಂದರ್, ವೈಬ್ರೆಂಟ್ ಮೈಸೂರು ಪತ್ರಿಕೆಯ ವರದಿಗಾರ ಎಸ್.ಲಿಖಿತ್, ಸಂಚಾಲಕರುಗಳಾಗಿ ಎಸಿಎನ್ ನ್ಯೂಸ್ ಚಾನೆಲ್‌ನ ವರದಿಗಾರ ಎಂ.ಎಸ್.ನರಸಿಂಹ, ಆರ್.ಜೆ.ನ್ಯೂಸ್‌ನ ಸಂಪಾದಕ ಎಸ್.ಬಿ.ಬಸವರಾಜು ಅವರುಗಳು ಆಯ್ಕೆಯಾದರು.
ಪ್ರೆಸ್‌ಕ್ಲಬ್‌ನ ನೂತನ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್ ಮಾತನಾಡಿ ಕ್ಲಬ್‌ನ ಎಲ್ಲಾ ಸದಸ್ಯರುಗಳ ಸಹಕಾರ, ಮಾರ್ಗದರ್ಶನ ಮತ್ತು ವಿಶ್ವಾಸದೊಂದಿಗೆ ಹಾಗೂ ರಾಜ್ಯ ಸಮಿತಿಯ ಸಲಹೆ ಸೂಚನೆಗಳಂತೆ ಕಾರ್ಯ ನಿರ್ವಹಿಸಲಾಗುವುದು. ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುವುದು. ಇದಕ್ಕೆ ತಾಲ್ಲೂಕಿನ ಸರ್ವರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಕ್ಲಬ್‌ನ ಎಲ್ಲಾ ಸದಸ್ಯರು ನೂತನ ಅಧ್ಯಕ್ಷರನ್ನು ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.
ನಿರೂಪಣೆ: ರಶ್ಮಿ ಕೋಟಿ ಇದು ಸಮಾಜವಾದಿ ನಾಯಕ ದಿವಂಗತ ಕಿಶನ್ ಪಟ್ನಾಯಕ್ ಅವರ ಪತಿ ವಾಣಿ ದಾಸ್ ಅವರ ಬದುಕಿನ…
ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಅಂದಾಜಿನ ಪ್ರಕಾರ ೬ ಲಕ್ಷ…
ನವೀನ್ ಡಿಸೋಜ ಕೆಲವೇ ದಿನಗಳಲ್ಲಿ ರಸ್ತೆಗಳು ಮತ್ತೆ ಹದಗೆಡುವ ಹಿನ್ನೆಲೆ : ಸಂಪೂರ್ಣ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ ಮಡಿಕೇರಿ: ರಸ್ತೆ…
ಖಾಯಂ ಪಶು ವೈದ್ಯರ ನೇಮಕ ಮಾಡಲು ಅನ್ನದಾತರ ಒತ್ತಾಯ ಮೋಹನ್ ಕುಮಾರ್ ಮಂಡ್ಯ: ರೈತರು ಕೃಷಿ ಚಟುವಟಿಕೆ ನಡೆಸಲು ಜಾನುವಾರುಗಳೇ…
ಮಾಧ್ಯಮವೊಂದರ ವರದಿಯ ಪ್ರಕಾರ ಆನ್‌ಲೈನ್ ಮಾರುಕಟ್ಟೆಗಳ ಭರಾಟೆಯಿಂದಾಗಿ ಸರ್ಕಾರಿ ಸ್ವಾಮ್ಯದ ಹಾಪ್ ಕಾಮ್ಸ್ ಮಳಿಗೆಗಳು ನಷ್ಟಕ್ಕೆ ಸಿಲುಕಿದ್ದು, ಅವು ಮುಚ್ಚುವ…
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಿವಾದ ಸದ್ಯ…