ನಂದಿನಿ ಹಾಲಿನ ದರ ಹೆಚ್ಚಳ: ಗ್ರಾಹಕನ ಜೇಬಿಗೆ ಹೊರೆ
ಗಿರೀಶ್ ಹುಣಸೂರು
ಮೈಸೂರು: ಅಗತ್ಯ ವಸ್ತುಗಳ ಬೆಲೆಯೇರಿಕೆ ನಡುವೆ ಸರ್ಕಾರ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಿರುವುದು ಗ್ರಾಹಕನ ಜೇಬಿಗೆ ಇನ್ನಷ್ಟು ಹೊರೆಯಾಗಿ ಪರಿಣಮಿಸಲಿದ್ದು, ಹೋಟೆಲ್‌ಗಳಲ್ಲಿ ಕಾಫಿ-ಟೀ ಬೆಲೆ ಹೆಚ್ಚಳವಾಗಿ ಗ್ರಾಹಕನ ತುಟಿ ಸುಡಲಿದೆ.
ಪ್ರತಿ ಲೀಟರ್ ಹಾಲು ಮತ್ತು ಮೊಸರಿಗೆ ೨ ರೂ. ಮಾರಾಟ ದರ ಹೆಚ್ಚಳ ಮಾಡಿರುವುದರಿಂದಾಗಿ ಕಾಫಿ-ಟೀ ದರ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ.
೨೦೧೮ರಲ್ಲಿ ಹಾಲು-ಮೊಸರಿನ ದರ ಹೆಚ್ಚಳ ಮಾಡಿದ್ದು ಬಿಟ್ಟರೆ, ಈವರೆಗೆ ಕೆಎಂಎಫ್ ಹಲವು ಬಾರಿ ದರ ಪರಿಷ್ಕರಣೆಗೆ ಮನವಿ ಮಾಡಿದರೂ ಸರ್ಕಾರ ಒಪ್ಪಿರಲಿಲ್ಲ. ಆದರೆ, ಈಗ ಸರ್ಕಾರದ ಒಪ್ಪಿಗೆಯೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ ಆದೇಶದಂತೆ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನಂದಿನಿ ಹಾಲು, ಮೊಸರು, ಲಸ್ಸಿ ಮತ್ತು ಮಸಾಲ ಮಜ್ಜಿಗೆ ಉತ್ಪನ್ನಗಳಿಗೆ ನಾಲ್ಕು ವರ್ಷಗಳ ಬಳಿಕ ನ.೨೪ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲು ಮತ್ತು ಮೊಸರಿಗೆ ೨ ರೂ. ಮಾರಾಟ ದರ ಹೆಚ್ಚಳ ಮಾಡಲಾಗಿದೆ. ಆದರೆ, ತುಪ್ಪ ಸೇರಿದಂತೆ ಹಾಲಿನ ಉಪ ಉತ್ಪನ್ನಗಳ ದರವನ್ನು ಆಗಾಗ್ಗೆ ಏರಿಸುತ್ತಲೇ ಬರಲಾಗಿದೆ. ಮೂರು ತಿಂಗಳ ಹಿಂದೆ ೪೮೦ ರೂ. ಇದ್ದ ನಂದಿನಿ ತುಪ್ಪದ ದರ ಇದೀಗ ೬೧೦ ರೂ. ತಲುಪಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.
ಹೋಟೆಲ್‌ಗಳವರಿಗೆ ಗ್ರಾಹಕರ ಚಿಂತೆ: ಹೋಟೆಲ್‌ಗಳಲ್ಲಿ ಈಗಾಗಲೇ ಕಾಫಿ-ಟೀ ಬೆಲೆ ೧೦ ರೂ.ಗಳಿದೆ. ಹಾಲು ದರ ಹೆಚ್ಚಳದಿಂದ ನಮಗೂ ಹೊರೆಯಾಗಲಿದೆ. ಹಾಗೆಂದು ಕಾಫಿ-ಟೀ ದರ ಹೆಚ್ಚಳ ಮಾಡಿದರೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆದರೂ, ದರ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ.
ಏಜೆಂಟರಿಗೆ ಪೀಕಲಾಟ: ನಂದಿನಿ ಹಾಲು, ಮೊಸರು, ಲಸ್ಸಿ ಮತ್ತು ಮಸಾಲ ಮಜ್ಜಿಗೆ ದರ ಪರಿಷ್ಕರಣೆ ಮಾಡಿದ್ದರೂ ಪ್ಯಾಕೇಟುಗಳ ಮೇಲೆ ಹಳೆ ಮುದ್ರಿತ ದರಗಳಿದ್ದು, ದಾಸ್ತಾನು ಮುಗಿಯುವವರೆಗೆ ಹಳೇ ದರದ ಪ್ಯಾಕೇಟುಗಳಲ್ಲೇ ಮಾರುಕಟ್ಟೆಗೆ ಸರಬರಾಜು ಮಾಡಲಾಗುವುದು ಎಂದು ಮೈಮುಲ್ ಹೇಳಿದೆ. ಆದರೆ, ಪ್ಯಾಕೆಟ್ ಮೇಲೆ ಹಳೆಯ ದರ ಮುದ್ರಿತವಾಗಿರುವುದರಿಂದ ದರ ಪರಿಷ್ಕರಣೆಯ ಮೊದಲ ದಿನವಾದ ಗುರುವಾರ ನಂದಿನಿ ಏಜೆಂಟರ ಜತೆಗೆ ಗ್ರಾಹಕರು ವಾಗ್ವಾದ ನಡೆಸಿದ್ದಾರೆ.
೨೦೧೮ರ ಬಳಿಕ ಈಗ ಹಾಲು-ಮೊಸರಿನ ದರ ಹೆಚ್ಚಳ ಮಾಡಲಾಗಿದೆ. ಮೈಮುಲ್ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ೩೦ ರೂ. ಕೊಡುತ್ತಿದ್ದು, ಇನ್ನು ಮುಂದೆ ರೈತರಿಗೂ ಪ್ರತಿ ಲೀಟರ್‌ಗೆ ೨ ರೂ. ಹೆಚ್ಚುವರಿಯಾಗಿ ದೊರೆಯಲಿದೆ.
-ಪಿ.ಎಂ.ಪ್ರಸನ್ನ, ಅಧ್ಯಕ್ಷರು, ಮೈಮುಲ್
ಹಾಲು-ಮೊಸರಿನ ದರ ಹೆಚ್ಚಳವಾಗದಿದ್ದರೂ ತುಪ್ಪ ಸೇರಿದಂತೆ ಹಾಲಿನ ಉಪ ಉತ್ಪನ್ನಗಳ ಬೆಲೆ ನಿರಂತರವಾಗಿ ಹೆಚ್ಚಳವಾಗಿದೆ. ಹೀಗಾಗಿ ನಾವೂ ಕಾಫಿ-ಟೀ ಬೆಲೆ ಹೆಚ್ಚಳ ಮಾಡಲೇಬೇಕಿದೆ. ಈ ಬಗ್ಗೆ ನ.೩೦ರಂದು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ಚರ್ಚಿಸಿ, ಕಾಫಿ-ಟೀಗೆ ೧ರಿಂದ ೨ ರೂ. ಹೆಚ್ಚಳ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು.
-ನಾರಾಯಣ ಗೌಡ, ಅಧ್ಯಕ್ಷರು, ಮೈಸೂರು ಹೋಟೆಲ್ ಮಾಲೀಕರ ಸಂಘ
ಕೆಎಂಎಫ್ ಈ ರೀತಿ ತಿಂಗಳ ಮಧ್ಯೆ ದರ ಹೆಚ್ಚಳ ಮಾಡಿದರೆ, ಮುಂಚಿತವಾಗಿ ಗ್ರಾಹಕರಿಗೆ ಒಂದು ತಿಂಗಳ ಟೋಕನ್ ನೀಡಿರುವ ನಾವು ಅವರೊಂದಿಗೆ ಹೆಚ್ಚಳವಾಗಿರುವ ದರ ಪಡೆಯಲು ವಾಗ್ವಾದ ನಡೆಸಬೇಕಾಗುತ್ತದೆ. ಇದನ್ನು ತಪ್ಪಿಸಲು ತಿಂಗಳ ಆರಂಭದಲ್ಲಿ ದರ ಪರಿಷ್ಕರಣೆ ಮಾಡಿದರೆ ಉತ್ತಮ.
ಭಾಗ್ಯ ಚಿಕ್ಕಣ್ಣ, ನಂದಿನಿ ಏಜೆಂಟರು
೨೪ರಿಂದಲೇ ನಂದಿನಿ ಉತ್ಪನ್ನ ಪರಿಷ್ಕೃತ ದರ ಜಾರಿ
ಮೈಸೂರು: ಕೆಎಂಎಫ್ ಆದೇಶದಂತೆ ಮೈಸೂರು ಜಿಲ್ಲಾ ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲು, ಮೊಸರಿಗೆ ೨ ರೂಪಾಯಿ ಏರಿಕೆ ಮಾಡಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ಪರಿಷ್ಕ ೃತ ದರ ಜಾರಿಾಂಗಿದೆ. ನ.೨೪ರಿಂದ ದರಗಳು ಜಾರಿುಂಲ್ಲಿದ್ದು, ಪ್ಯಾಕೇಟುಗಳ ಮೇಲೆ ಹಳೆ ಮುದ್ರಿತ ದರಗಳಿದ್ದು ದಾಸ್ತಾನು ಮುಗಿುುಂವವರೆಗೆ ಹಳೆ ದರದ ಪ್ಯಾಕೇಟುಗಳನ್ನೇ ವಾರುಕಟ್ಟೆಗೆ ಸರಬರಾಜು ವಾಡಲಾಗುವುದು ಎಂದು ಮೈಮುಲ್‌ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆುಂಲ್ಲಿ ತಿಳಿಸಿದ್ದಾರೆ. ಎಲ್ಲ ಮಾದರಿಯ ಹಾಲಿನ ದರ ಪ್ರತಿ ಲೀಟರ್‌ಗೆ ೨ ರೂ. ಹೆಚ್ಚಳವಾಗಿದೆ. ನಂದಿನಿ ಉತ್ಪನ್ನಗಳ ದರ ಕೆಳಗಿನಂತಿವೆ.
ಉತ್ಪನ್ನ ಪ್ರಮಾಣ ಹಿಂದಿನ ದರ ಪರಿಷ್ಕೃತ ದರ
ಮೊಸರು ೨೦೦ ಗ್ರಾಂ ೧೦.೫೦ ರೂ. ೧೧.೦೦ ರೂ.
ಮೊಸರು ೫೦೦ ಗ್ರಾಂ ೨೩.೦೦ ರೂ. ೨೪.೦೦ ರೂ.
ಮೊಸರು ೧ ಲೀಟರ್ ೪೫.೦೦ ರೂ. ೪೭.೦೦ ರೂ.
ಲಸ್ಸಿ ೨೦೦ ಎಂಎಲ್ ೧೦.೫೦ ರೂ. ೧೨.೦೦ ರೂ.
ಮಸಾಲ ಮಜ್ಜಿಗೆ ೨೦೦ ಎಂಎಲ್ ೭.೫೦ ರೂ. ೮.೦೦ ರೂ.
ಬೆಂಗಳೂರು : ಬಳ್ಳಾರಿ ಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಶಾಸಕ ನ.ರಾ.ಭರತ್ ರೆಡ್ಡಿ ಪರವಾಗಿ ನಿಲ್ಲಲಿದೆ. ಚುನಾವಣೆಗಳ ಸೋಲಿನಿಂದ ಹತಾಶೆಗೊಂಡಿರುವ ಶಾಸಕ…
ಮೈಸೂರು : ಶತಮಾನ ಪೂರೈಸಿರುವ ಪ್ರತಿಷ್ಠತಿ ಮೈಸೂರು ವಿಶ್ವವಿದ್ಯಾನಿಲಯವು 106ನೇ ಘಟಿಕೋತ್ಸವದ ಸಂಭ್ರಮದಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಜನವರಿ…
ಬೆಂಗಳೂರು : ಮಾಧ್ಯಮದವರು ಡೆಂಜರ್ ಇದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುಸಿಗೋಪ ಪ್ರದರ್ಶಿಸಿದರು. ಮಾಧ್ಯಮದವರನ್ನು ಡಿಕೆಶಿ ಅವರು ಹೀಗೆ…
ಬೆಂಗಳೂರು: ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಅಂಶಗಳನ್ನು ಹೇಳುವ ಮೂಲಕ…
ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ-ನಿಮ್ಹಾನ್ಸ್ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸತೆಗಳಲ್ಲಿ ಆಘಾತಕಾರಿ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಪಚ್ಚೆ ದೊಡ್ಡಿ ಗ್ರಾಮಕ್ಕೆ ಸಾರ್ವಜನಿಕ ಅರ್ಜಿ ಸಮಿತಿ ಸದಸ್ಯ ಹಾಗೂ ರಾಜಾಜಿನಗರ ಕ್ಷೇತ್ರದ…