ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮಂಡಿ ಮಟ್ಟದ ಗುಂಡಿ ಬಿದ್ದಿದ್ದು ಅಪಾಯ ತಪ್ಪಿಸುವ ಸಲುವಾಗಿ ಸಾರ್ವಜನಿಕರು ಟಿವಿಯೊಂದನ್ನು ಇಟ್ಟು ಅಪಘಾತಕ್ಕೆ ಎಡೆಮಾಡಿಕೊಟ್ಟಂತಿದೆ.
ನಗರದ ರಾಮಸಮುದ್ರ ಬಡಾವಣೆಯ ಡಾ.ಶಿವಕುಮಾರಸ್ವಾಮಿ ವೃತ್ತದ ಬಳಿ ಕಾಂಕ್ರೀಟ್ ರಸ್ತೆ ಕಿತ್ತು ಬಂದು ದೊಡ್ಡ ಗುಂಡಿ ಬಿದ್ದಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಗುಂಡಿ ಮುಚ್ಚದ ವ್ಯವಸ್ಥೆ ವಿರುದ್ಧ ಬೇಸತ್ತು ಸಾರ್ವಜನಿಕರೊಬ್ಬರು ಹಳೆಯ ಟಿವಿಯೊಂದನ್ನು ಇಟ್ಟಿದ್ದಾರೆ. ಆದರೆ ಇದು ಮತ್ತಷ್ಟು ಅಪಘಾತಕ್ಕೆ ಕಾರಣವಾಗಬಹುದು ಎಂದು ಪ್ರಯಾಣಿಕರು ಬೇಸರ ಹೊರ ಹಾಕಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು, ಇಲ್ಲದಿದ್ದರೆ ರಸ್ತೆಯ ನಡುವಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…
ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…
ಮಂಡ್ಯ: ಇದೇ ಅಕ್ಟೋಬರ್.11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…
ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್…